ಆಶಿತಾ ನಾಯ್ಕ – ಗುಡ್ಡಗಾಡು ಓಟದಲ್ಲಿ ಯುನಿವರ್ಸಿಟಿ ಬ್ಲೂ

Share

ಭಟ್ಕಳ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ಗುಡ್ಡಗಾಡು ಓಟ (ಕ್ರಾಸ್ ಕಂಟ್ರಿ) ಕ್ರೀಡೆಯಲ್ಲಿ ತಾಲೂಕಿನ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ. ಆಶಿತಾ ನಾಯ್ಕ ಅವರು ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಜರಗುವ ಅಂತರ ವಿಶ್ವವಿದ್ಯಾಲಯ-ದಕ್ಷಿಣ ಭಾರತ ವಲಯವನ್ನು ಪ್ರತಿನಿಧಿಸಲಿದ್ದಾರೆ. ಇವರು ಭಟ್ಕಳದ ಭಾರತಿ ನಾಯ್ಕ ಹಾಗೂ ವೆಂಕಟೇಶ ನಾಯ್ಕ ರವರ ಪುತ್ರಿಯಾಗಿದ್ದು, ಇವರ ಈ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ದೈಹಿಕ ಶಿಕ್ಷಕರು, ಸಿಬ್ಬಂದಿವರ್ಗ, ಪಾಲಕರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!