ಭಟ್ಕಳ ತಾಲೂಕಿನ ಗೊರಟೆ ಭಾಗದ ಮೀನುಗಾರರ ಸಂಕಷ್ಟ ಕೇಳುವವರಿಲ್ಲ:ಮಾಸ್ತಪ್ಪ ನಾಯ್ಕ್

Share

ಭಟ್ಕಳ ತಾಲೂಕಿನ ಗೊರಟೆ ಭಾಗದ ಮೀನುಗಾರರ ಸಂಕಷ್ಟ ಕೇಳುವವರಿಲ್ಲ.

ಮೀನುಗಾರರಿಗೆ ಮೂರು ವರ್ಷದಿಂದ ಆಶ್ವಾಸನೆಯ ಕಥೆ ಹೇಳುತ್ತಿರುವ ಮಾಜಿ ಸಚಿವ ಮಂಕಾಳ ವೈದ್ಯ.

ಇಂದು ತಾಲೂಕಿನ ಗೊರಟೆ ಭಾಗದ ಮೀನುಗಾರರ ಆಸರೆಗಾಗಿ ಎರಡು ಸೋಲಾರ್ ಲ್ಯಾಂಪ್ ವ್ಯವಸ್ಥೆ ಮಾಡಿ ಉದ್ಘಾಟಿಸಿ, ಮಾತನಾಡಿದ ಮಾಸ್ತಪ್ಪ ನಾಯ್ಕ

ಮಂಕಾಳ ವೈದ್ಯರೇ, ಸಚಿವ ಸಂಪುಟ ವಿಸ್ತರಣೆ ಮುಗಿದಿದೆ. ಈಗಲಾದರೂ ಬೆಂಗಳೂರಿನಿಂದ ಖಾಲಿ ಮಾಡಿಕೊಂಡು ಬಂದು ಜನರ ಮೂಲಭೂತ ಸಮಸ್ಯೆಗೆ ಪರಿಹಾರ ಮಾಡಿ ಕೊಡಿ. ತಾವು ಮೀನುಗಾರ ಸಚಿವ ಅವಧಿಯಲ್ಲಿ ಮೂರು ವರ್ಷ ಕಥೆ ಹೇಳಿ ಆಶ್ವಾಸನೆ ನೀಡಿದ್ದೇ ಆಯಿತು. ಕನಿಷ್ಠ ಪಕ್ಷ ಮೀನುಗಾರರಿಗೆ ಮೂಲಭೂತ ಸೌಕರ್ಯ ಒದಗಿಸಿ ಕೊಡಿ. ತಾವು ಮಾತ್ರ ಎರಡು ಕಿಲೋಮೀಟರ್ ರಸ್ತೆಯನ್ನ ತಮ್ಮ ವೆಂಕಟಾಪುರ ನದಿಗೆ ಹೊಂದಿಕೊಂಡ ರೆಸಾರ್ಟ್ ಹಾಗೂ ತಮ್ಮ ವೈಭವೀಕರಣಕ್ಕಾಗಿ ಸಂಪೂರ್ಣ ಕುಕನಿರ ಭಾಗದ ಫಾರೆಸ್ಟ್ ಲ್ಯಾಂಡ್ ಕತ್ತರಿಸಿ ರಸ್ತೆ ಅಗಲೀಕರಣ ಮಾಡಿಸಿಕೊಳ್ಳುತ್ತಿದ್ದೀರಿ. ಅಭಿವೃದ್ಧಿ ಕಾಣದೆ ಸೊರಗಿಹೋದ ತಾಲೂಕಿನಲ್ಲಿ ತಮ್ಮ ವೈಯಕ್ತಿಕ ದರ್ಬಾರ್ ಮಾತ್ರ ನಡೆಯುತ್ತಿದೆ.

ಮೊನ್ನೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮ ಹೆಸರನ್ನು ಟೈಪಿಂಗ್ ಮಿಸ್ಟೇಕ್‌ನಿಂದ ಕೈಬಿಟ್ಟಿದ್ದಲ್ಲ, ತಮಗೆ ಯೋಗ್ಯತೆ ಇಲ್ಲ ಅಂತ ಕೈಬಿಟ್ಟಿದ್ದಾರೆ. ಈಗಲಾದರೂ ಕನಿಷ್ಠ ಅವಧಿಯಲ್ಲಾದರೂ ನ್ಯಾಯಯುತವಾಗಿ ಸಾರ್ವಜನಿಕರ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಹೇಳಿದರು.

ಮಾಸ್ತಪ್ಪ ನಾಯ್ಕ್ ಅವರ ಜೊತೆ ಅಣ್ಣಪ್ಪ ಮೊಗೇರ, ಸುಬ್ರಾಯ ಮೊಗೇರ, ನಾಗೇಶ್ ಮೊಗೇರ, ನಾಗೇಂದ್ರ ಮೊಗೇರ, ಸಿರಿ ಮೊಗೇರ, ರಾದ ಕಾರ್ವಿ, ಈಶ್ವರ್ ಮೊಗೇರ, ಶ್ರೀಧರ್ ಮೊಗೇರ, ಮಾಸ್ತಿ ಮೊಗೇರ, ತಿಮ್ಮಪ್ಪ ಮೊಗೇರ, ವೆಂಕಟ್ರಮಣ ಮೊಗೇರ, ಕುಮಾರ್ ಮೊಗೇರ ಮುಂತಾದವರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

error: Content is protected !!