ಭಟ್ಕಳ :ತಾಲೂಕಿನ ಕಾಯ್ಕಿಣಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಅಧಿಕಾರ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಉತ್ತಮ ಕಾರ್ಯನಿರ್ವಹಿಸಿ ಜನಮನ್ನಣೆ ಪಾತ್ರರಾದ ಶ್ರೀ ರಾಜು ನಾಗಪ್ಪ ನಾಯ್ಕ್ ಇವರನ್ನ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಶ್ರೀನಿವಾಸ್ ನಾಯ್ಕ್ ವಿಷ್ಣು ನಾಯ್ಕ್ ಈಶ್ವರ್ ನಾಯ್ಕ್ ಕೇಶವ ನಾಯ್ಕ್ ಸುಮನಾಯ್ಕ್ ರೇಣುಕಾ ಗಣಪತಿ ಇವರುಗಳು ಅಧ್ಯಕ್ಷರ ಕಾರ್ಯ ವೈಖರಿಯ ಬಗ್ಗೆ ಶ್ಲಾಘನೆಯ ಮಾತುಗಳನ್ನಾಡಿದರು.

ಅಧ್ಯಕ್ಷರಾದ ರಾಜು ನಾಯಕ್ ಇವರು ಸಿಬ್ಬಂದಿಗಳ ಜೊತೆ ಗೆಳೆಯರಾಗಿ ಸೋದರ ಮನೋಭಾವನೆ ಯೊಂದಿಗೆ ಹಾಗೂ ತಮ್ಮ ಹಾಗೂ ಸೇವೆಯನ್ನ ಸಾರ್ವಜನಿಕರಿಗೆ ಸಲ್ಲಿಸಿದ್ದರು. ಮುಂದಿನ ದಿನಗಳಲ್ಲಿ ರಾಜು ನಾಯ್ಕ್ ಅವರಿಗೆ ಹಾಗೂಹುದ್ದೆ ಹಾಗೂ ಸ್ಥಾನಮಾನ ಸಿಗಲಿ ಎಂದು ಹಾರೈಸಿ ಅವರ ಕಾರ್ಯ ವೈಖರಿಯ ಬಗ್ಗೆ ಗೌರವ ವ್ಯಕ್ತಪಡಿಸಿ ಹಾರೈಸಿ ಸನ್ಮಾನಿಸಿ ಬಿಳ್ಕೊಟ್ಟರು.
