ಮುರುಡೇಶ್ವರ :ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮ ಕೋಟದಮಕ್ಕಿಗೆ ಆಗಮಿಸಿದ ಸೈನಿಕ ಜನಾರ್ಧನ್ ರಾಮದಾಸ ದೇವಾಡಿಗ ಅವರಿಗೆ ಅಭೂತಪೂರ್ವ ಸ್ವಾಗತ ದೊರಕಿತು. ರಾಜಸ್ಥಾನ್ ಪಂಜಾಬ್, ಜಮ್ಮು ಕಾಶ್ಮೀರ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿರುವ ಜನಾರ್ಧನ್ ದೇವಾಡಿಗ ಅವರು ದೇಶದ ರಕ್ಷಣೆಗೆ ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಸಮರ್ಪಿಸಿ ಶಿಸ್ತಿನೊಂದಿಗೆ ಸೇವೆ ಸಲ್ಲಿಸಿದ್ದಾರೆ ಸ್ನೇಹ ಯುವಕ ಸಂಘದ ಅಧ್ಯಕ್ಷ ಬಾಬು ದೇವಾಡಿಗ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಉತ್ಸಾಯಿ ಸದಸ್ಯರುಗಳು. ಮುರುಡೇಶ್ವರ ಮುಖ್ಯ ದ್ವಾರದಿಂದ ಜನಾರ್ಧನ್ ದೇವಾಡಿಗರನ್ನು ಅದ್ದೂರಿ ಸ್ವಾಗತದೊಂದಿಗೆ ಬೈಕ್ ರಾಲಿ ಹಾಗೂ ಮೆರವಣಿಗೆ ಮೂಲಕ ಮನೆಗೆ ಕರೆದೊಯ್ದರು. ತಾಲೂಕ ದೇವಡಿಗ ಸಮಾಜದ ಅಧ್ಯಕ್ಷ ಲಕ್ಷ್ಮಣ್ ಕೋಟದಮಕ್ಕಿ, ಸಮಾಜದ ಮುಖಂಡ ಪರಮೇಶ್ವರ್ ದೇವಾಡಿಗ , ಕೋಟದಮಕ್ಕಿ ದೇವಾಡಿಗ ಸಮಾಜದ ಅಧ್ಯಕ್ಷ ಶ್ರೀನಿವಾಸ್ ದೇವಾಡಿಗ ಹಾಗೂ ಗ್ರಾಮ ಪಂಚಾಯತ್ ಸದಸ್ಯಉದಯ ದೇವಾಡಿಗ, ಕೋಟದಮಕ್ಕಿ ಸಮಸ್ತ ಗ್ರಾಮಸ್ಥರು ಹಾಗೂ ಇತರರು ನಿವೃತ್ತ ಸೈನಿಕರನ್ನು ಗೌರವಿಸಿದರು. ಮಾಜಿ ಸೈನಿಕರ ಸಂಘದ ತಾಲೂಕ ಅಧ್ಯಕ್ಷ ಎಂ ಡಿ ಪಕ್ಕಿ ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ ಹಾಗೂ ಸದಸ್ಯರು ಜನಾರ್ಧನ್ ದೇವಡಿಗರವರ ಸ್ವಗ್ರಹ ಕ್ಕೆ ಭೇಟಿ ನೀಡಿ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು.
ವರದಿ: ಉಲ್ಲಾಸ ಶಾನಭಾಗ್ ಶಿರಾಲಿ.
ನಿವೃತ್ತ ಸೈನಿಕನಿಗೆ ಹೃದಯಸ್ಪರ್ಶಿ ಸ್ವಾಗತ
