
ಭಟ್ಕಳ: ಇಂಡಿಯನ್ ನವಾಯಿತು ಫೋರಂ ಮತ್ತು ಪುರಸಭೆ ಭಟ್ಕಳ ಇದರ ಸಹಯೋಗದೊಂದಿಗೆ ಆಯೋಜಿಸಿದ ಐಎನ್ಎಫ್ ಗ್ರೀನ್ ಭಟ್ಕಳ ಕಾರ್ಯಕ್ರಮ ನವಾಯತ್ ಕಾಲನಿಯ ಕಾಲೋನಿ ಮೊಹಿದ್ದೀನ್ ಮುನೇರಿ ರಸ್ತೆ ವಿಭಾಜಕ ಮಧ್ಯಭಾಗದಲ್ಲಿಯ ರಾಯಲ್ ಪಾಮ್ ಗಿಡಗಳಿಗೆ ನೀರು ಹಾಕುವುದರ ಮೂಲಕ ಹಸಿರು ಭಟ್ಕಳ ಕಾರ್ಯಕ್ರಮಕ್ಕೆ ಸಚಿವ ಮಂಕಾಳು ವೈದ್ಯ ರವರು ಚಾಲನೆ ನೀಡಿದರು.

ನಂತರ ರಾಬಿತ ಹಾಲಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಈ ಮೊದಲು ಹಸಿರು ಇತ್ತು ನಂತರ ನಾವುಗಳು ಹಸಿರನ್ನು ಕಡಿದೆವು ಈಗ ಮತ್ತೆ ಹಸಿರಿಗೆ ಮರಳುತ್ತಿದ್ದೇವೆ, ಒಂದು ದಿನ ಊಟ ಇಲ್ಲದಿದ್ದರೂ ಬದುಕ ಬಲ್ಲೆವು ಆದರೆ ಒಂದು ಕ್ಷಣ ಆಮ್ಲಜನಕ ಇಲ್ಲದೆ ಇದ್ದರೆ ಬದುಕಲು ಸಾಧ್ಯವಿಲ್ಲ ಹಸಿರು ಇಲ್ಲದಿದ್ದರೆ ನಾವುಗಳು ಆಸ್ಪತ್ರೆ ಮನೆಗೆ ತಿರುಗಾಡಬೇಕಾಗುತ್ತದೆ ಹಣಗಳನ್ನು ಖರ್ಚು ಮಾಡಬೇಕಾಗುತ್ತದೆ ನಾವು ಆಸ್ಪತ್ರೆಗೆ ಹೋಗುವುದನ್ನು ನಿಲ್ಲಿಸಬೇಕಾದರೆ ಗಿಡ ಮರಗಳನ್ನು ಹೆಚ್ಚು ಪ್ರೀತಿ ಮಾಡಬೇಕು ಎಲ್ಲ ಧರ್ಮದವರಿಗೂ ಬೇಕಾಗಿರುವುದು ಆಕ್ಸಿಜನ್.

ಈ ಆಕ್ಸಿಜನ್ ಹೆಚ್ಚಿಸುವ ಕೆಲಸವನ್ನು ಐಎನ್ಎಫ್ ಸಂಸ್ಥೆಯವರು ಹಸಿರು ಭಟ್ಕಳ ಎನ್ನುವ ಕಾರ್ಯಕ್ರಮದ ಮೂಲಕ ಗಿಡಗಳನ್ನು ನೆಡುತ್ತಿದ್ದಾರೆ ಅವರಿಗೆ ನನ್ನ ಅಭಿನಂದನೆಗಳು ಎಂದು ಸಚಿವರು ಹೇಳಿದರು. ಎಲ್ಲಾ ಕೆಲಸವನ್ನು ಸರಕಾರ ಮಾಡಲು ಸಾಧ್ಯವಿಲ್ಲ ಕೆಲವೊಂದನ್ನು ಸಾರ್ವಜನಿಕರೇ ಮಾಡಬೇಕಾಗುತ್ತದೆ.

ಗ್ರೀನ್ ಭಟ್ಕಳ ಈ ಕಾರ್ಯಕ್ರಮವನ್ನು ಮಾಡುತ್ತಿರುವ ಐ ಎನ್ ಎಫ್ ಸಂಸ್ಥೆಗೆ ಸರಕಾರ ಸಹಕರಿಸಲು ಸಿದ್ಧವಿದೆ ಎಂದು ಸಚಿವರು ಹೇಳಿದರು. ಈಗ ಭಟ್ಕಳ ನಗರಸಭೆ ಯಾಗಿರುವುದರಿಂದ ಯಾವುದೇ ಹೆಚ್ಚಿನ ಸಮಸ್ಯೆಗಳು ಆಗುವುದಿಲ್ಲ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಇನ್ನೂ ಮುಂದೆ ಇರುವದಿಲ್ಲ ಎಂದು ಹೇಳಿದರು. ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಕೆಲಸವು ನಡೆಯುತ್ತಿದೆ ಸದ್ಯದಲ್ಲೇ ಪ್ರತಿ ಮನೆಗೂ ನೀರು ಪೂರೈಸಲಾಗುವುದು ದಿನದ 24 ಗಂಟೆಯೂ ವಿದ್ಯುತ್ ಇರುತ್ತದೆ ಎಂದು ಹೇಳಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು ಗ್ರೀನ್ ಭಟ್ಕಳ ಮಾಡುವುದಕ್ಕೆ ಸರ್ಕಾರದಿಂದ ಎಲ್ಲಾ ಸಹಾಯವನ್ನು ಮಾಡುವುದಾಗಿ ಹೇಳಿದರು. ಭಟ್ಕಳದ ಪುರಸಭೆಯ ಸಹಯೋಗದೊಂದಿಗೆ ಆಯ್ ಎನ್ಎಫ್ ಹಸಿರು ಕ್ರಾಂತಿ ಮಾಡಲಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಐ ಎನ್ ಎಫ್ ಅಧ್ಯಕ್ಷ ಅಫ್ತಾಬ್ ಹುಸೇನ್ ಪ್ರಧಾನ ಕಾರ್ಯದರ್ಶಿ ಆದಿಲ್ ನಾಗರಮಠ್ ಮುಂತಾದವರು ಉಪಸ್ಥಿತರಿದ್ದರು.
