
ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿ, ಭಟ್ಕಳ ಇದರ ೨೮ನೇ ವಾರ್ಷಿಕೋತ್ಸವವು ದಿ. ೧೮.೦೧.೨೦೨೬ ರಂದು ಭಟ್ಕಳದ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಸಿರ್ಸಿಯ ವೇ.ಮೂ ಶ್ರೀಶರಣ ಆಚಾರ್ಯ ರವರು ಭಟ್ಕಳ ಜಿ.ಎಸ್.ಎಸ್ ಸಂಸ್ಥೆಯ ಸಾಮಾಜಿಕ ಕಾರ್ಯಗಳು, ಜಿ.ಎಸ್.ಬಿ ಭಟ್ಕಳ ಯೋಜನೆ ಪರಿಕಲ್ಪನೆಯನ್ನು ಶ್ಲಾಘಿಸಿ, ಯುವಕ ಯುವತಿಯರು ಶಿಕ್ಷಣದ ಜೊತೆಯಲ್ಲಿ ಧರ್ಮ, ಸಂಸ್ಕೃತಿಗೆ ಪ್ರಾಶಸ್ತö್ಯ ನೀಡಬೇಕೆಂದು ತಿಳಿಸಿದರು. ಗೌರವಾಧ್ಯಕ್ಷರಾದ ಶ್ರೀ ನರೇಂದ್ರ ನಾಯಕರವರು ಜಿ.ಎಸ್.ಎಸ್ ಬೆಳೆದು ಬಂದ ಹಾದಿಯನ್ನು ತಿಳಿಸುತ್ತಾ, ಎಲ್ಲರೂ ಸಮಾe ಸೇವಾಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಮಾತೃಭಾಷೆ ಬಳಕೆಯನ್ನು ಮಾಡಬೇಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಪುತ್ತು ಪೈರವರ ಸ್ಮರಣಾರ್ಥ ಶ್ರೀ ಹನುಮಂತ ಮಾಳಪ್ಪ ಪೈ ಸೇವಾ ಸಾಧಕ ಪುರಸ್ಕಾರವನ್ನು ಸಮಾಜದ ಹಿರಿಯ ಸೇವಕ ಶ್ರೀ ರಘುವೀರ ಬಾಳ್ಗಿ ಯವರಿಗೆ, ಶ್ರೀ ಕೆ.ಎಂ.ನಾಯಕ ಸಾಧಕ ಪುರಸ್ಕಾರವನ್ನು ಶಟಲ್ ಬ್ಯಾಡ್ಮಿಂಟನ್ ಸಾಧಕ ಕುಮಾರ ನಿಖಿಲ ನಾಗರಾಜ ಶಾನಭಾಗ ರವರಿಗೆ, ಶ್ರೀಮತಿ ತಾರಾಬಾಯಿ ಹನುಮಂತ ಶಾನಭಾಗ ಸ್ಮರಣಾರ್ಥ ಆದರ್ಶ ಸದ್ಗçಹಿಣಿ ಪರಸ್ಕಾರವನ್ನು ಶ್ರೀಮತಿ ಉಷಾ ಶ್ರೀನಿವಾಸ ಪೈ ರಿಗೆ ನೀಡಲಾಯಿತು.
ಉನ್ನತ ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ, ರ‍್ಯಾಂಕ ಪಡೆದ ವಿದ್ಯಾರ್ಥಿಗಳಾದ ಅನಿರುದ್ಧ ರಾಮು ಕಾಮತ (ಬಂಗಾರದ ಪದಕ – ಬಿ.ಫಾರ್ಮಾ), ನೇಹಾ ಭಾಸ್ಕರ ಕಾಮತ (ಬಂಗಾರದ ಪದಕ ಗಣಕಯಂತ್ರ ಪದವಿ), ಡಾ. ಪೂಜಾ ಕಾಮತ (ಡಿ.ಎಂ ಉನ್ನತ ವ್ಯಾಸಂಗ), ಶೀತಲ ಪ್ರಭು (ಫೀಸಿಯೋಥೆರಪಿ), ವಿಂಧ್ಯಾ ಬಡಾಲ (ಬಂಗಾರದ ಪದಕ) ರವರಿಗೆ ಸನ್ಮಾನಿಸಲಾಯಿತು.
ವಂದೇ ಮಾತರಂ ಗೀತೆಯ ೧೫೦ನೇ ಹಾಗೂ ಆರ್.ಎಸ್.ಎಸ್ ನ ೧೦೦ನೇ ವಾರ್ಷಿಕೋತ್ಸವದ ನಿಮಿತ್ತ ವಿಶೇಷ ಸಾಮೂಹಿಕ ಗೌರವ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಿ.ಎಸ್.ಬಿ ಸಮಾಜದ ಅಧ್ಯಕ್ಷರಾದ ನಾಗೇಶ ಕಾಮತ, ಜಿ.ಎಸ್.ಎಸ್ ಅಧ್ಯಕ್ಷರಾದ ಗಿರಿಧರ ನಾಯಕ, ಮಹಿಳಾ ಸಮಿತಿ ಅಧ್ಯಕ್ಷೆ ಸುನಿತಾ ಪೈ, ಗೌರವಾಧ್ಯಕ್ಷರಾದ ಪದ್ಮನಾಭ ಪೈ, ಗಣಪತಿ ಪ್ರಭು, ನಾಗೇಶ ಪೈ, ಕಿರಣ ಶಾನಭಾಗ, ಕಲ್ಪೇಶ ಪೈ ಸಹಿತ ಸಾವಿರಾರು ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಮಾಜ ಬಾಂಧವರಿAದ ರಾಷ್ಟçಪ್ರೇಮ ಬಿಂಬಿಸುವ, ಸಾಮಾಜಿಕ ಜಾಗೃತಿ ಮೂಡಿಸುವಂತಹ, ಭಾರತಿಯ ಸಂಸ್ಕೃತಿ ಅನಾವರಣಕ್ಕೆ ಪೂರಕವಾದ ವಿವಿಧ ಮನೋರಂಜನಾ, ಲಕ್ಕಿ ಜಿ.ಎಸ್.ಬಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿAದ ಜರುಗಿದವು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗುರುದಾಸ್ ಪ್ರಭು, ಶ್ರೀನಾಥ ಪೈ, ಚೈತ್ರಾ ಕಾಮತ ರವರು ಕಾರ್ಯಕ್ರಮ ನಿರೂಪಿಸಿದರು, ದೀಪಕ ನಾಯಕ ಸ್ವಾಗತಿಸಿದರು, ನಕುಲ ಕಾಮತ ವಂದಿಸಿದರು.
