ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ಎ.ಐ ಕೋರ್ಸ ಅನಾವರಣ.

Share

ಭಟ್ಕಳ: ಸ್ವಾಮಿ ವಿವೇಕಾನಂದ ದಿನಾಚರಣೆಯ ಪ್ರಯುಕ್ತ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ರಾಷ್ಟಿçÃಯ ಯುವ ದಿನಾಚರಣೆ ಯುವ-೨೦೨೬ ಕಾರ್ಯಕ್ರಮ ಜರುಗಿತು. ಆಧುನಿಕ ತಂತ್ರಜ್ಞಾನ ಕಲಿಕೆಯಿಂದ ಯುವ ಜನತೆ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಅನುಕೂಲ ವಾಗುವುಂತೆ ಕಾಲೇಜಿನ ಬಿ.ಕಾಂ, ಬಿಬಿಎ, ಬಿಸಿಎ ಕೋರ್ಸ ನ ಯುವ ವಿದ್ಯಾರ್ಥಿಗಳಿಗೆ ಆರ್ಟಿಫೀಶಲ್ ಇಂಟೆಲಿಜೆನ್ಸ್ ಕಲಿಕೆ ಪೂರಕವಾದ ಎಸ್.ಜಿ.ಎಸ್.ಸಿ ಎ.ಐ ಹಬ್ ನ ಅಡಿಯಲ್ಲಿ ಕಾಮರ್ಸ ವಿತ ಎ.ಐ, ಬ್ಯುಸಿನೆಸ್ ವಿತ ಎ.ಐ, ಟೆಕ್ನಾಲಜಿ ವಿತ ಎ.ಐ ಎಂಬ ವಿನೂತನವಾದ ಪೂರಕ ತರಬೇತಿ ಯನ್ನು ಅನಾವರಣ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ಎಜ್ಯುಕೇಶನ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುರೇಶ ನಾಯಕ ರವರು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಕಾಲೇಜು ಕೈಗೊಳ್ಳುತ್ತಿರುವ ತರಭೇತಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಬಿಸಿಎ ಉಪ ಪ್ರಾಚಾರ್ಯರಾದ ವಿಖ್ಯಾತ್ ಪ್ರಭು ರವರು ಎ.ಐ ತರಬೇತಿಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಪ್ರಾಚಾರ್ಯ ಶ್ರೀ ಶ್ರೀನಾಥ ಪೈ ಮಾತನಾಡಿ, ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅವರ ಉದ್ಯೋಗ ಸಾಮರ್ಥ್ಯ ಸುಧಾರಿಸಲು ಮತ್ತು ವೃತ್ತಿಪರ ಜಗತ್ತಿಗೆ ಅವರ ಸಿದ್ಧತೆ ಉತ್ತಮಗೊಳಿಸಲು ಸಹಕಾರಿ ಎಂದರು. ಬಿ.ಕಾಂ ಅಕಾಡೆಮಿಕ ಸಂಯೋಜಕರಾದ ವಿಘ್ಞೇಶ ಪ್ರಭು, ಬಿಬಿಎ ಉಪ ಪ್ರಾಚಾರ್ಯರಾದ ವಿಶ್ವನಾಥ ಭಟ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!