
ಪ್ರಸಕ್ತ ವರ್ಷ (2025-26) ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರತಿಭಾ ಪುರಸ್ಕಾರವನ್ನು ನಿಲ್ಲಿಸಿರುವ ಸಂಬಂಧಿಸಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು ಶ್ರೀಯುತ ಜೆ. ಪಿ. ಸುಧಾಕರ ಮತ್ತು ಹಾಲಿ ಅಧ್ಯಕ್ಷರು ಶ್ರೀಯುತ ಎಚ್.ಎಲ್. ಶಿವಾನಂದ ರವರನ್ನು 05-01-2026 ರಂದು ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚಿಸಲಾಯಿತು. ಚರ್ಚೆಯಲ್ಲಿ ಈಡಿಗ ಸಮುದಾಯದೊಳಗಿನ ವಿವಿಧ ಉಪಪಂಗಡಗಳ ನಡುವೆ ಇರಬಹುದಾದ ಸಣ್ಣಪುಟ್ಟ ಬಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ನಾವೆಲ್ಲರೂ ಒಂದು ಎಂಬ ದೃಢಸಂಕಲ್ಪದೊಂದಿಗೆ ಒಗ್ಗಟ್ಟಾಗಿ ಮುನ್ನಡೆಯೋಣ ಎಂಬ ಒಮ್ಮತದ ಅಭಿಪ್ರಾಯ ಮೂಡಿತು.

ಈ ನಿಟ್ಟಿನಲ್ಲಿ ನಮ್ಮ ಗುರಿ ಮತ್ತು ಸಾಧನೆಯ ಮುನ್ನೋಟದ ಕಾರ್ಯಯೋಜನೆಯೊಂದಿಗೆ ಸಾಗಬೇಕಿದೆ ಎಂಬ ಸ್ಪಷ್ಟ ನಿಲುವನ್ನು ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಜೆ.ಪಿ. ಸುಧಾಕರ್ ರವರು ವ್ಯಕ್ತಪಡಿಸಿದರು.
ಜಿಲ್ಲೆಯ ಪ್ರತಿಭಾನ್ವಿತರಿಗೆ ನೀಡುತ್ತಿದ್ದ ಪುರಸ್ಕಾರದ ಜೊತೆಯಲ್ಲಿ ಇನ್ನುಳಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಹಾಸ್ಟೆಲ್ ಸೌಲಭ್ಯ, ನಿರುದ್ಯೋಗಿ ಯುವಕರಿಗೆ ತರಬೇತಿಯೊಂದಿಗೆ (ಜೆ.ಪಿ.ಎನ್. ಪ್ರತಿಷ್ಠಾನ & ಆರ್. ಎಲ್. ಜಾಲಪ್ಪ ಅಕಾಡೆಮಿ) ಉದ್ಯೋಗ ಖಾತ್ರಿ ಸೌಲಭ್ಯ, ನಿರ್ಗತಿಕರಿಗೆ-ಅವಲಂಬಿತರಿಗೆ-ಸಂಕಷ್ಟಕ್ಕೆಸಿಲುಕಿದವರಿಗೆ ನೀಡುತ್ತಿದ್ದ ಸಾಂದರ್ಭಿಕ ನೆರವು ಇತ್ಯಾದಿ ಎಲ್ಲವನ್ನೂ ಈ ಹಿಂದಿನಂತೆ ಉತ್ತರ ಕನ್ನಡ ಜಿಲ್ಲೆಯವರಿಗೂ ಮುಂದುವರಿಸಬೇಕೆಂದು ಮನವಿ ಮಾಡಿಕೊಳ್ಳಲಾಯಿತು.

ನಿಯೋಗದಲ್ಲಿ ವಿ.ಎನ್. ನಾಯ್ಕ ಬೇಡ್ಕಣಿ, ಎಂ. ಡಿ.ನಾಯ್ಕ ಭಟ್ಕಳ, ಸುಭಾಷ್ ಚಂದ್ರ ನಾಯ್ಕ ಸಿದ್ದಾಪುರ, ಡೀನ್ ಡಾ. ಮೋಹನ ನಾಯ್ಕ (ಸಿದ್ದಾಪುರ) ಬೆಂಗಳೂರು, ನಿವ್ರೃತ್ತ DCF ಜೆ. ಜಿ. ನಾಯ್ಕ (ಕುಮಟಾ) ಬೆಂಗಳೂರು, ಮಂಜುನಾಥ ಟಿ. ನಾಯ್ಕ (ಕಾನಗೋಡ) ಬೆಂಗಳೂರು, ನಾಗರಾಜ್ ಇಟಗಿ, ರೋಹಿತ್ ಇಟಗಿ, ಪ್ರತಿಷ್ಠಾನದ ಶ್ರೀಯುತ ಪೂರ್ಣೇಶ್ ರವರು ಪಾಲ್ಗೊಂಡಿದ್ದರು.
ಡಾ. ನಾಗೇಶ H. ನಾಯ್ಕ ಕಾಗಾಲ 9880874239 ಜಿಲ್ಲಾ ಮುಖ್ಯ ಸಂಚಾಲಕರು, ಉ.ಕ.
