
ಭಟ್ಕಳ :ಜನವರಿ 28 -2026 ರಂದು ಪಟ್ಕಳದ ಭಟ್ಕಳದ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಭಟ್ಕಳ ಘಟಕ ಇವರ ಆಶ್ರಯದಲ್ಲಿ ನಡೆಯುವ ರಾಜ್ಯ ಪತ್ರಕರ್ತರ ವಿಚಾರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಹೊನ್ನಾವರದ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವಿಶ್ವ ವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠಮ್ ಇದರ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಮಾರುತಿ ಗುರೂಜಿಯವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆಯವರು ಮತ್ತು ಉತ್ತರ ಕನ್ನಡ ಉಸ್ತುವಾರಿ ಸಚಿವರಾದ ಶ್ರೀಮಂಕಾಳ್ ವೈದ್ಯರವರು ಉದ್ಘಾಟಿಸಲಿದ್ದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಇದರ ರಾಜ್ಯಾಧ್ಯಕ್ಷರು ಉಪಸ್ಥಿತಿಯಲ್ಲಿ ಗ್ಯಾರಂಟಿ ನ್ಯೂಸ್ ಮುಖ್ಯಸ್ಥೆ ರಾಧಾ ಹಿರೇಗೌಡರ್ ಶ್ರೀ ಗಂಗಾಧರ್ ಮೊದಲಿಯಾರ್ ವಿಶೇಷ ಆಹ್ವಾನಿತರು ಮತ್ತು ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಶಿವಾನಂದ್ ನಾಯ್ಕ್, ತಂಜುಮ್ ಸಂಸ್ಥೆಯ ಅಧ್ಯಕ್ಷರಾದ ಇನಾಯತುಲ್ಲಾ ಶಾಬಂದ್ರಿ, ನಾಗೇಂದ್ರ ನಾಯ್ಕ್ ಹೈಕೋರ್ಟ್ ವಕೀಲರು ಹಾಗೂ ಇತರೆ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಶ್ರೀ ಸಂತೋಷ್ ಹೆಗಡೆಯವರೊಂದಿಗೆ ವಿದ್ಯಾರ್ಥಿಗಳ ಸಂವಾದ, ರಾಜ್ಯದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರಧಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪತ್ರಿಕಾ ವಿತರಕರಿಗೆ ಪ್ರಶಸ್ತಿ ಪ್ರಧಾನ ನೀಡಲಾಗುವುದು.

ಮೊದಲ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಾರುತಿ ಗುರುಜಿ ಅವರಿಗೆ ನೀಡಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಲು ಕೋರಲಾಯಿತು. ಈ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವದಿಸಲಿದ್ದೇನೆ ಎಂದು ಶ್ರೀ ಮಾರುತಿ ಗುರೂಜಿ ಅವರು ಹೇಳಿದರು. ಆಮಂತ್ರಣ ಪತ್ರಿಕೆಯ ಬಿಡುಗಡೆಯ ಸಂದರ್ಭದಲ್ಲಿ ಕಾನಿಪ ದ್ವನಿ ಭಟ್ಕಳ ಅಧ್ಯಕ್ಷರು ಶಂಕರ್ ನಾಯ್ಕ್ ,ಖಜಾಂಚಿ ನಸೀಮ್ ಮುಲ್ ಘನಿ, ಕರಾವಳಿ ವಿಭಾಗ ಅಧ್ಯಕ್ಷರು ಕುಮಾರ್ ನಾಯ್ಕ್ ,ಉಡುಪಿ ಜಿಲ್ಲಾ ಅಧ್ಯಕ್ಷರು ದಾಮೋದರ ಮೋಗವೀರ, ಶಿರಸಿ ಅಧ್ಯಕ್ಷರು ರಾಜೇಶ್ ಮೋಗೇರ, ಉತ್ತರ ಕನ್ನಡ ಜಿಲ್ಲಾಪ್ರಧಾನ ಕಾರ್ಯದರ್ಶಿ ಸೀತಾರಾಮ್ ಆಚಾರ್ಯ, ಶಿರಸಿ ಸದಸ್ಯರಾದ ಶ್ರೀನಿವಾಸ್ ಆಚಾರ್, ರಮೇಶ್ ಉಪಸ್ಥಿತರಿದ್ದರು.

