ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿವಿಧ ಸ್ಪರ್ಧೆ ಬಹುಮಾನ ವಿತರಣೆ

Share


ಭಟ್ಕಳ : ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಲ್ಲಿನ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಒಂದನೇ ತರಗತಿಯಲ್ಲಿ ಶೈಕ್ಷಣಿಕ ಸಾಧನೆಗಾಗಿ ಸುದರ್ಶ ಪ್ರಭು ಪ್ರಥಮ, ಮನ್ವಿತಾ ಮೋಹನ ನಾಯ್ಕ ಶೈಕ್ಷಣಿಕ ಸಾಧನೆಯಲ್ಲಿ ದ್ವಿತೀಯ ಮತ್ತು ಸಂಗೀತ ಖುರ್ಚಿಯಲ್ಲಿ ಪ್ರಥಮ , ಎರಡನೇ ತರಗತಿಯಲ್ಲಿ ಶೈಕ್ಷಣಿಕ ಸಾಧನೆಗಾಗಿ ಮತ್ತು ಅಂತ್ಯಾಕ್ಷರಿ ಪದ ರಚನೆಯಲ್ಲಿ ಅನುಕ್ರಮವಾಗಿ ವಿಫ್ನೇಶ್ ಗಣಪತಿ ಭಟ್ ಪ್ರಥಮ, ಆರ್ಯನ್ ಜಗದೀಶ್ ನಾಯ್ಕ ದ್ವಿತೀಯ, ಮೂರನೇ ತರಗತಿಯಲ್ಲಿ ಶೈಕ್ಷಣಿಕ ಸಾಧನೆಗಾಗಿ ಪ್ರಥಮ ಮತ್ತು ಸ್ಮರಣ ಶಕ್ತಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಆರುಷಿ ಅರವಿಂದ್ ಶೇಟ್, ಶೈಕ್ಷಣಿಕ ಸಾಧನೆಯಲ್ಲಿ ಗಾನವಿ ರಾಘವೇಂದ್ರ ನಾಯ್ಕ ದ್ವಿತೀಯ, ಮತ್ತು ಸ್ಮರಣ ಶಕ್ತಿ ಸ್ಪರ್ಧೆಯಲ್ಲಿ ಯಾದವಿ ವೆಂಕಟ್ರಮಣ ನಾಯ್ಕ ಪ್ರಥಮ , ನಾಲ್ಕನೇ ತರಗತಿಯಲ್ಲಿ ಶೈಕ್ಷಣಿಕ ಸಾಧನೆಗಾಗಿ ಹಿಮ ರಾಜೇಶ್ ನಾಯ್ಕ ಪ್ರಥಮ, ಓಂಕಾರ ನಾಗರಾಜ್ ದೇವಾಡಿಗ ದ್ವಿತೀಯ, ಚೆಂಡನ್ನು ಹಾರಿಸುವ ಸ್ಪರ್ಧೆಯಲ್ಲಿ ಪ್ರತೀಕ್ಷ ಮಾರುತಿ ನಾಯ್ಕ ಪ್ರಥಮ, ಹಾಗೂ ಆದ್ಯ ಮಾರುತಿ ನಾಯ್ಕ ದ್ವಿತೀಯ, ಐದನೇ ತರಗತಿಯಲ್ಲಿ ಶೈಕ್ಷಣಿಕ ಸಾಧನೆಗಾಗಿ ಮನ್ವಿತಾ ಮಂಜುನಾಥ್ ದೇವಾಡಿಗ ಪ್ರಥಮ, ಗ್ರೀಷ್ಮ ಭಾಸ್ಕರ್ ನಾಯ್ಕ ಶೈಕ್ಷಣಿಕ ಸಾಧನೆಯಲ್ಲಿ ದ್ವಿತೀಯ ಮತ್ತು ಒತ್ತಕ್ಷರ ಪದ ರಚನೆಯಲ್ಲಿ ಪ್ರಥಮ , ಆರ್ವಿ ಜಗದೀಶ್ ನಾಯ್ಕ ದ್ವಿತೀಯ,ಆರನೇ ತರಗತಿಯಲ್ಲಿ ಶೈಕ್ಷಣಿಕ ಸಾಧನೆ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಾರ್ಥನಾ ಮೋಹನ್ ನಾಯ್ಕ ಪ್ರಥಮ, ಶೈಕ್ಷಣಿಕ ಸಾಧನೆಯಲ್ಲಿ ಸನ್ನಿಧಿ ದೇವಾಡಿಗ ದ್ವಿತೀಯ , ರಸಪ್ರಶ್ನೆ ಸ್ಪರ್ಧೆಯಲ್ಲಿ ಅನ್ವಿತಾ ಮಹೇಶ್ ನಾಯ್ಕ ದ್ವಿತೀಯ ಹಾಗೂ ಏಳನೇ ತರಗತಿಯಲ್ಲಿ ಶೈಕ್ಷಣಿಕ ಸಾಧನೆ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿದ್ಯಾಧರ ರಾಘವೇಂದ್ರ ನಾಯ್ಕ ಪ್ರಥಮ, ಶೈಕ್ಷಣಿಕ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಸ್ಮಿತ ಮಾರುತಿ ನಾಯ್ಕ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀಧರ ಆಚಾರ್ಯ, ರಾಮದಾಸ ಪ್ರಭು,ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ. ಎನ್. ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಉಲ್ಲಾಸ್ ನಾಯ್ಕ, ಎಸ್ ಡಿ ಎಂ. ಸಿ ಸದಸ್ಯರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡಲಾದ ಪ್ರಮಾಣ ಪತ್ರ ಮತ್ತು ಬಹುಮಾನವನ್ನು ವಿತರಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಮತ್ತು ಪಾಲ್ಗೊಂಡ ವಿದ್ಯಾರ್ಥಿಗಳಿಗೆ, ಸ್ಪರ್ಧೆಯನ್ನು ಆಯೋಜಿಸಲು ಸಹಕರಿಸಿದ ಶಾಲಾ ಮುಖ್ಯಾಧ್ಯಾಪಕ ಜನಾರ್ಧನ್ ಮೊಗೇರ ಹಾಗೂ ಶಿಕ್ಷಕ ವೃಂದದವರನ್ನು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!