
ಭಟ್ಕಳ: ಭಟ್ಕಳದಲ್ಲೊಂದು ಭಟ್ಕಳ ಉತ್ಸವ ಎನ್ನುವ ಐತಿಹಾಸಿಕ ಕಾರ್ಯಕ್ರಮ ಒಂದನ್ನ ಆಯೋಜನೆ ಮಾಡುತ್ತಿರುವ ಕ್ರಿಯಾಶೀಲ ಗೆಳೆಯರ ಸಂಘ ಭಟ್ಕಳ ಇವರು, ಇದರ ಕುರಿತು ಮಾಹಿತಿಯನ್ನು ನೀಡಲು ಬುಧವಾರ ಬೆಳಗ್ಗೆ 11 ಗಂಟೆಗೆ ಭಟ್ಕಳದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಭಟ್ಕಳ ಉತ್ಸವದ ಕುರಿತು ಕ್ರಿಯಾಶೀಲ ಗೆಳೆಯರ ಸಂಘದ ಸಂಘದ ಅಧ್ಯಕ್ಷರಾದ ರಮೇಶ್ ಖಾರ್ವಿಯವರು ಮಾತನಾಡುತ್ತಾ ಉತ್ಸವವು ಡಿಸೆಂಬರ್ 25, 26, 27, 28ರಂದು ನಡೆಯಲಿದ್ದು,ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳು ಇರುತ್ತದೆ. ಉತ್ಸವದಲ್ಲಿ ವಿವಿಧ ಮೇಳಗಳ ಪ್ರದರ್ಶನವು ಇರಲಿದ್ದು ,ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 11:00 ವರೆಗೆ ಇರಲಿದೆ ಎಂದು ಹೇಳಿದರು.

ಭಟ್ಕಳ ಉತ್ಸವದ ಸಂಚಾಲಕರಾದ ಶ್ರೀಕಾಂತ್ ನಾಯ್ಕ್ ಮಾತನಾಡಿ ಭಟ್ಕಳ ಉತ್ಸವದಲ್ಲಿ ವಿಶೇಷವಾಗಿ ವಿವಿಧ ಮೇಳಗಳು ಇರಲಿದೆ ಪ್ರಮುಖವಾಗಿ ಕೃಷಿ ಹಾಗೂ ಸಾವಯವ ತರಕಾರಿ ಮೇಳ, ವಿವಿಧ ಆಹಾರಗಳ ಮೇಳ, ಸೀರೆ ಹಾಗೂ ವಿವಿಧ ಉಡುಪು ವಸ್ತ್ರಗಳಮೇಳ, ಮತ್ಸ್ಯಮೇಳ, ವಿವಿಧ ಉದ್ಯಮಗಳ ಮಾಹಿತಿ ಕೇಂದ್ರ, ಐಸ್ ಕ್ರೀಮ್ ಮೇಳ, ಗುಡಿ ಕೈಗಾರಿಕೆ ವಸ್ತು ಮೇಳ, ಹಲಸಿನ ಹಣ್ಣಿನ ಮೇಳ, ಅಮ್ಮ್ಯೂಸ್ಮೆಂಟ್ ಪಾರ್ಕ್ ಹಾಗೂ ವಾಲಿಬಾಲ್ ಕ್ರೀಡೆಯು ಇರಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ್ ವೈದ್ಯರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಜನಪ್ರಿಯ ಕನ್ನಡ ಕಲಾವಿದರಿಂದ ಸಂಗೀತ ರಸಮಂಜರಿ ಹಾಗೂ ನೃತ್ಯವು ಇರಲಿದೆ. ಯುವಜನಮೇಳ, ಜಾನಪದ ಮತ್ತು ಮಕ್ಕಳ ಪ್ರತಿಭಾ ಕಾರಂಜಿ ಮುಂತಾದ ಕಾರ್ಯಕ್ರಮಗಳು ನಡೆಯಲಿದ್ದು ಈ ಕಾರ್ಯಕ್ರಮವು ಖಾಜಿಯಾ ಕಂಪೌಂಡ್ ಜಾಗಟೆಬೈಲು ಎನ್ ಹೆಚ್ 66 ವೆಂಕಟಪುರದಲ್ಲಿ ನಡೆಯಲಿದೆ.ಸಾರ್ವಜನಿಕರು ಅತಿಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಟ್ಕಳ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಎಂದು ಹೇಳಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಗೌರವ ಸಲಹಗಾರರಾದ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ್, ನಜೀರ್ ಕಾಸಿಂ ಜಿ , ವಿವಿಧ ಮೇಳಗಳ ಸಂಯೋಜಕರಾದ ಶ್ರೀಧರ್ ಮರುವಂತೆ ಕ್ರಿಯಾಶೀಲ ಗೆಳೆಯರ ಸಂಘದ ಸದಸ್ಯರಾದ ಮನಮೋಹನ್ ನಾಯಕ್ ದೀಪಕ್ ನಾಯ್ಕ್ ಪಾಂಡು ನಾಯ್ಕ್ ಭವಾನಿ ಶಂಕರ್ ವಿನಾಯಕ್ ಪಾಂಡುರಂಗ ವೆಂಕಟೇಶ್ ಮೊಗೆರ್ ಮುಂತಾದವರು ಉಪಸ್ಥಿತರಿದ್ದರು.
