ಮುರುಡೇಶ್ವರ: ಪ್ರತಿವರ್ಷದಂತೆ ನಡೆಯುವ ಮ್ಹಾತೋಭಾರ ಶ್ರೀ ಮುರುಡೇಶ್ವರ ದೇವರ ಜಾತ್ರೆ ಸಮಯದಲ್ಲಿ ದೇವಸ್ಥಾನ ಬಳಿ ಮಾವಳ್ಳಿ 1 ಗ್ರಾಮ ಪಂಚಾಯತ್ ಎದುರು ಮತ್ತು ಕಲ್ಯಾಣಿ ಹಿಂಬಾಗದಲ್ಲಿ ಇರುವ ಪ್ರಮುಖರಿಕ್ಷಾ ನಿಲ್ದಾಣದಲ್ಲಿ ನಿಲ್ಲುವ ಎಲ್ಲಾ ರಿಕ್ಷಾಗಳನ್ನು ಪ್ರತಿ ವರ್ಷ ನಡೆಯುವ ರಥೋತ್ಸವ ದಿನದಿಂದ ಮೂರು ದಿನಗಳ ಕಾಲ ಮಧ್ಯಾನ್ಹ 2ರಿಂದ ರಾತ್ರಿ 9:00ಯವರೆಗೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಒಳಗಡೆ ರಿಕ್ಷಾ ನಿಲ್ಲಿಸಿ ಸಾರ್ವಜನಿಕರ ಸೇವೆಯ ಜೊತೆಗೆ ಬಾಡಿಗೆ ಮಾಡಿ ಜೀವನ ನಡೆಸುತ್ತಿದ್ದೆವು. ಕಳೆದ ವರ್ಷವೂ ಕೂಡ ಜನವರಿ 19 2025 ರಂದು ನಡೆದ ಜಾತ್ರಾ ಸಮಯದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಬಸ್ ನಿಲ್ದಾಣದ ಒಳಗಡೆ ರಿಕ್ಷಾ ನಿಲ್ಲಿಸಿ ಬಾಡಿಗೆ ಮಾಡಿದ್ದೆವು. ರಥೋತ್ಸವ ನಡೆದ ಮಾರನೇ ದಿನ ಸಂಜೆ 6:30 ಗಂಟೆಗೆ ಜಯ ಪ್ಯಾರಡೈಸ್ ಲಾಡ್ಜ್ ಗೆ ಹೋಗುವ ಕ್ರಾಸ್ ಬಳಿ ಹಾಕಿದ ಬ್ಯಾರಿಕೇಡ್ ಗೇಟ್ ಹತ್ತಿರ ಕರ್ತವ್ಯದಲ್ಲಿದ್ದ ಪೊಲೀಸರು ನಮ್ಮ ಸಂಘಕ್ಕೆ ಯಾವುದೇ ಪೂರ್ವ ಮಾಹಿತಿ ಕೊಡದೆ ಏಕಾಏಕಿ ಬ್ಯಾರಿಕೆಡ್ ಗೇಟ್ ಹಾಕಿ ಆಟೋರಿಕ್ಷಾ ಬಸ್ ನಿಲ್ದಾಣವರೆಗೆ ಹೋಗುವುದಕ್ಕೆ ತಡೆ ಮಾಡಿದ್ದರು ಮತ್ತು ಪ್ರವಾಸಿಗರ ವಾಹನ ಮತ್ತು ಸರಕಾರಿ ಬಸ್ ಜಾತ್ರೆಪೇಟೆಯ ಒಳಗಡೆ ಹೋಗುವುದಕ್ಕೆ ಅನುವು ಮಾಡಿಕೊಟ್ಟರು. ಇದರಿಂದ ಮುರುಡೇಶ್ವರ ಗೇಟ್ ನಿಂದ ಬಾಡಿಗೆ ತೆಗೆದುಕೊಂಡು ಬಂದ ನಮ್ಮ ಆಟೋ ಚಾಲಕರ ಆಟೋ ಮತ್ತು ಭಟ್ಕಳ ತಾಲೂಕಿನ ಆದ್ಯಂತ ಜಾತ್ರಾಪೇಟೆಗೆ ಬಂದ ವಾಹನಗಳು ಇದರ ಜೊತೆಗೆ ಪ್ರವಾಸಿಗರ ವಾಹನ ಸೇರಿ ಟ್ರಾಫಿಕ್ ಜಾಮ್ ಆಗಿದ್ದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು ಮತ್ತು ನಮ್ಮ ಚಾಲಕರ ಆಟೋ ಮುಂದೆ ಹೋಗಲು ಆಗದೆ ತುಂಬಾ ತೊಂದರೆಪಟ್ಟಿದ್ದರು. ರಿಕ್ಷಾ ನಿಲ್ಲಿಸಲು ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ಬ್ಯಾರಿಕೆಡ್ ಹಾಕಿದ್ದನ್ನು ಅನಿವಾರ್ಯವಾಗಿ ಅಧಿಕಾರಿಗಳ ಈ ನಡೆಯನ್ನು ನಮ್ಮ ಚಾಲಕರು ಪ್ರಶ್ನಿಸಬೇಕಾಯಿತು ಹಾಗಾಗಿ ಈ ವರ್ಷ ಅಂತಹ ಯಾವುದೇ ಘಟನೆ ನಡೆಯದಂತೆ ಮುಂಜಾಗುರತೆ ತೆಗೆದುಕೊಂಡು ಆಟೋ ಚಾಲಕರಿಗೆ ಬಸ್ ಸ್ಟ್ಯಾಂಡಿನವರಿಗೆ ಆಟೋವನ್ನು ತೆಗೆದುಕೊಂಡು ಹೋಗಲು ಅನುಕೊಡಬೇಕು ಎಂದು ಆಟೋ ಚಾಲಕರ ಮಾಲಕರ ಸಂಘ ಮಾವಳ್ಳಿ ಟು ಗ್ರಾಮ ಪಂಚಾಯಿತಿಗೆ ಮನವಿಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀಧರ್ ನಾಯಕ್ ಪ್ರಧಾನ ಕಾರ್ಯದರ್ಶಿಯಾದ ವಿನಯ್ ಖಜಾಂಚಿ ವೆಂಕಟೇಶ್ ನಾಯಕ್ ಸದಸ್ಯರಾದ ಲಿಂಗಯ್ಯನಾಯ್ಕ ಗಣಪತಿ ನಾಯ್ಕ ಶೇಖರ್ ನಾಯ್ಕ ಗ್ರಾಮ ಪಂಚಾಯತ್ ಅಧ್ಯಕ್ಷರು ನಾಗರತ್ನ ಪಡೆಯಾರ್ ಉಪಸ್ಥಿತರಿದ್ದರು.
ಮುರುಡೇಶ್ವರ ಜಾತ್ರೆಯ ಸಮಯದಲ್ಲಿ ರಿಕ್ಷಾ ನಿಲ್ಲಿಸಲು ಸೂಕ್ತ ಸ್ಥಳದ ವ್ಯವಸ್ಥೆ ಮಾಡಿಕೊಡುವಂತೆ ಮುರುಡೇಶ್ವರ ಆಟೋ ಚಾಲಕರ ಮತ್ತು ಮಾಲಕರ ಸಂಘ ಮಾವಳ್ಳಿ-2 ಗ್ರಾಮ ಪಂಚಾಯಿತಿಗೆ ಮನವಿ
