ಭಟ್ಕಳ ಕಾಯ್ಕಿಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೆರಾಡಿ ಕ್ರಾಸ್ ನಲ್ಲಿ ಬಸ್ ನಿಲುಗಡೆ ಮಾಡುವಂತೆ ಸಾರ್ವಜನಿಕರ ಒತ್ತಾಯ

Share

ಭಟ್ಕಳ : ಕಾಯ್ಕಿಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೆರಾಡಿ ಕ್ರಾಸ್ ನಲ್ಲಿ ಬಸ್ ನಿಲುಗಡೆ ಮಾಡುವಂತೆ ಒತ್ತಾಯಿಸಿ ಕಾಯ್ಕಿಣಿ ಗ್ರಾಮದ ಸಾರ್ವಜನಿಕರು ಹಾಗೂ ಊರ ನಾಗರಿಕರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಭಟ್ಕಳ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಕಾಯ್ಕಿಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೆರಾಡಿ ಕ್ರಾಸ್ ನಲ್ಲಿ ಬಸ್ ನಿಲುಗಡೆಗೆ ತುಂಬಾ ಅವಶ್ಯಕತೆ ಇದ್ದು. ಈ ಪ್ರದೇಶದಲ್ಲಿ ಶಾಲೆ, ಪಂಚಾಯತ, ಬ್ಯಾಂಕ್ ಸೇರಿದಂತೆ ಕಾಯ್ಕಿಣಿ ಗ್ರಾಮಕ್ಕೆ ಸಂಬಂದಿಸಿದ ಪ್ರಮುಖ ಎಲ್ಲಾ ಸರ್ಕಾರಿ ಕಚೇರಿಗಳು ಇದೇ ಸ್ಥಳದಲ್ಲಿ ಇದೆ. ಈ ಪ್ರದೇಶದಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ದಿನಕ್ಕೆ ಸಾವಿರಾರು ಜನರ ತಿರುಗಾಟ ನಡೆಸುತ್ತಿರುತ್ತಾರೆ. ಮೊದಲು ಈ ಪ್ರದೇಶದಲ್ಲಿ ಸರ್ಕಾರಿ ಬಸ್ ನಿಲ್ಲಿಸುತ್ತಿದ್ದರು. ಆದರೆ ಇತ್ತಿಚಿನ ದಿನಗಳಲ್ಲಿ ಘಟಕದ ಲೋಕಲ್ ಬಸ್ ನಿಲುಗಡೆ ಮಾಡದೆ ಇರುವುದರಿಂದ ಇಲ್ಲಿನ ಜನರಿಗೆ ತುಂಬಾ ಅನಾನುಕೂಲವಾಗಿದೆ. ಆದ್ದರಿಂದ ನಮ್ಮ ಮನವಿಯನ್ನು ಪುರಸ್ಕರಿಸಿ ಈ ಸ್ಥಳದಲ್ಲಿ ಬಸ್ ನಿಲುಗಡೆ ಮಾಡಬೇಕು ಹಾಗೂ ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ತಮ್ಮ ಘಟಕದ ಬಸ್ ಅನ್ನು ತಡೆದು ಪ್ರತಿಭಟಿನೆ ಮಾಡುವವುದಾಗಿ ಮನವಿಯಲ್ಲಿ ಉಲ್ಲೇಖಿಸಿ ಎಚ್ಚರಿಕೆ ನೀಡಿದ್ದಾರೆ. ಭಟ್ಕಳ ಘಟಕದ ವ್ಯವಸ್ಥಾಪಕರ ಅನುಪಸ್ಥಿತಿಯಲ್ಲಿ ಸಿಬ್ಬಂದಿ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಗಣೇಶ ನಾಯ್ಕ, ವಿಷ್ಣು ನಾಯ್ಕ, ದಿಲೀಪ ನಾಯ್ಕ, ಮಿಥುನ ನಾಯ್ಕ, ಅಶೋಕ ನಾಯ್ಕ, ಸುಬ್ರಹ್ಮಣ್ಯ ನಾಯ್ಕ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!