ಕರ್ನಾಟಕ ರಾಜ್ಯ ಸರ್ಕಾರ ಸಹಕಾರ ಇಲಾಖೆ., ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ.,
ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಲ ನಿ. ಬೆಂಗಳೂರು ಇವರ ನೇತ್ರತ್ವದಲ್ಲಿ ಹಾವೇರಿಯಲ್ಲಿ
ಏರ್ಪಡಿಸಿದಂತಹ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಶ್ರೀ
ಮಾರುತಿ ಸಹಕಾರಿ ಪತ್ತಿನ ಸಂಘಕ್ಕೆ ಜಿಲ್ಲೆಯ ಉತ್ತಮ ಸಹಕಾರಿ ಪತ್ತಿನ ಸಂಘ ೨೦೨೫ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮಹಾಮಂಡಲದ ನಿರ್ದೇಶಕರಾದ ಡಾ.ಸಂಜಯ ಹೊಸಮಠ ಇವರು ಸಂಘದ ಪರವಾಗಿ ಅಧ್ಯಕ್ಷರಾದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ಅಶೋಕ ಪೈ, ಉಪಾಧ್ಯಕ್ಷರಾದ ಶ್ರೀ ಉಮೇಶ್ ಕಾಮತ್, ಹಾಗೂ
ಮುಖ್ಯಕಾರ್ಯನಿರ್ವಾಹಕರಾದ ಶ್ರೀ ರಾಜೇಂದ್ರ ಶಾನಭಾಗ ರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ನಿರ್ದೇಶಕರಾದ ಶ್ರೀ ರವೀಂದ್ರ ಪ್ರಭು, ಶ್ರೀ ಅನಂತ ಕಾಮತ್, ಶಾಖಾ ಪ್ರಭಂದಕರಾದ ಶ್ರೀಪ್ರಸನ್ನ ಪ್ರಭು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.26 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮಾರುತಿ ಪತ್ತಿನ ಸಂಘವು ತನ್ನ ೪ ಶಾಖೆಗಳ ಮೂಲಕ ೧೧೬ ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿ ಸದಸ್ಯರಿಗೆ ರೂ.೧೦೩.೬೨ ಕೋಟಿ
ಸಾಲವನ್ನು ನೀಡಿ ೯೮.೪೯% ಸಾಲ ವಸೂಲಾತಿಯೊಂದಿಗೆ ಸುಮಾರು ೨.೫೩ ಕೋಟಿಗೂ ಮಿಕ್ಕಿ ಲಾಭಗಳಿಸಿದೆ. ಸದಸ್ಯರಿಗೆ ೧೨% ಲಾಭಾಂಶವನ್ನು ವಿತರಿಸುತ್ತ ಸಂಘದ ಲೆಕ್ಕ ಪರಿಶೋಧನಾ ವರದಿಯಲ್ಲಿ ಸತತ ೧೪ ವರ್ಷಗಳಿಂದ ಸಂಘವು ಪಡೆದಿರುವುದು ಈ ಪ್ರಶಸ್ತಿ ಗಳಿಸಲು ಸಹಕಾರಿಯಾಯಿತು. ಸಚಿವರಾದ ಹೆಚ್.ಕೆ. ಪಾಟೀಲ್, ಸಭಾಪತಿಗಳಾದ ಬಸವರಾಜ ಹೊರಟ್ಟಿ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷರಾದ ಜಿ. ಟಿ. ದೇವೇಗೌಡ ಮುಂತಾದ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಮಾರುತಿ ಪತ್ತಿನ ಸಂಘಕ್ಕೆ ಈ ಪ್ರಶಸ್ತಿಯು ೩ನೇ ಬಾರಿ ಲಭಿಸಿದ್ದು ಈ ಹಿಂದೆ ೨೦೧೭ ಹಾಗೂ ೨೦೨೪ ರಲ್ಲಿಯೂ ಲಭಿಸಿದ್ದನ್ನು ಸ್ಮರಿಸಬಹುದು. ಅಲ್ಲದೇ ಸಂಘವು ೨೦೨೩-೨೪ನೇ ಸಾಲಿನಲ್ಲಿ ಉತ್ತಮವಾಗಿ ಕರ‍್ಯನರ‍್ವಹಿಸದ್ದನ್ನು ಪರಿಗಣಿಸಿ ಕೆ.ಡಿಸಿ.ಸಿ. ಬ್ಯಾಂಕ್‌ನಿAದ ಕೊಡಮಾಡುವ ಜಿಲ್ಲಾಮಟ್ಟದ “ಉತ್ತಮ ಸಹಕಾರಿ ಸಂಘ” ಪ್ರಶಸ್ತಿಗೆ ಭಾಜನವಾಗಿತ್ತು.
ಪ್ರತಿಷ್ಠಿತ ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘಕ್ಕೆ ಉತ್ತಮ ಸಹಕಾರಿ ಪತ್ತಿನ ಸಂಘ ಪ್ರಶಸ್ತಿ
