ಬೈಂದೂರು ತಾಲೂಕಿನ ಶಿರೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಶೇಖರ್, ಹರೀಶ್ ನಾಯ್ಕ,ದೇವೇಂದ್ರ, ಅಶೋಕ್ ವೆಂಕಟೇಶ್ ನಾಯಕ್,ನಾಗಪ್ಪ ಗೋವಿಂದ ನಾಯ್ಕ್, ಮತ್ತು ದಿನಕರ ಎಂಬುವರನ್ನು ಬೈಂದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ನವಂಬರ್ 16ರ ಸಂಜೆ 7:45ರ ವೇಳೆ ಶಿರೂರು ಗ್ರಾಮದ ಮೊಯಿದಿನ್ ಪುರದ ಸರಕಾರಿ ಜಾಗದಲ್ಲಿ ಅಂದರ್- ಬಾಹರ್ ಇಸ್ಪೀಟ್ ಆಟವನ್ನು ಆಡುತ್ತಿದ್ದರು ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿಯನ್ನು ನೀಡಿದರು ಖಚಿತ ಮಾಹಿತಿಯನ್ನ ಪಡೆದುಕೊಂಡ ಪಿಎಸ್ಐ ತಿಮ್ಮೇಶ್ ಬಿ.ಎನ್ ಅವರ ನೇತೃತ್ವದಲ್ಲಿ ಪೊಲೀಸರ ತಂಡವು ಇಸ್ಪೀಟ್ ಅಡ್ಡದ ಮೇಲೆ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿ, 24,010 ರೂಪಾಯಿ ನಗದು ಮತ್ತು ಅವರ ಬೈಕುಗಳನ್ನ ವಶ ಪಡಿಸಿಕೊಂಡಿದ್ದಾರೆ. ಈ ಸಂಬಂಧ ಬೈಂದೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.
ಬೈಂದೂರು ಪೊಲೀಸರ ಬಲೆಗೆ ಬಿದ್ದ ಜೂಜಾಟ ಆಡುತ್ತಿದ್ದ ಜೂಜುಕೊರರು
