ಕುಮಟ:14-11-2025ರಂದು ಕುಮಟಾ ಕೃಷಿ ಇಲಾಖೆ ಆವರಣದಲ್ಲಿ ಎ.ವಿ.ಪಿ. ರೈತ ಉತ್ಪಾದಕ ಸಂಸ್ಥೆ – ಕುಮಟಾ ಇವರು ಕುಮಟಾ ತೆಂಗಿನಕಾಯಿಯ ಗುಣಮಟ್ಟ ಹಾಗೂ ವಿಶೇಷತೆಯ ಕುರಿತು ಚರ್ಚಿಸಲು ಆಯೋಜಿಸಿದ ಸಭೆ ನಡೆಯಿತು. ಬೆಂಗಳೂರು ರಾಮಯ್ಯ ಇಂಟೆಲೆಕ್ಚ್ಯೂವಲ್ ಸೆಂಟರ್ ಫಾರ್ ಪ್ರಾಪರ್ಟಿ ರೈಟ್ಸ್ ನ ಸಂಯೋಜಕರಾದ ಸಂಗೀತಾ ಮುರಳಿ, ಕೃಷಿ ವಿಜ್ಞಾನ ಕೇಂದ್ರ – ಶಿರಸಿ ಮುಖ್ಯಸ್ಥೆ ಡಾ. ರೂಪಾ ಪಾಟೀಲ್, ಎ.ವಿ.ಪಿ. ಸಲಹಾ ಮಂಡಳಿಯ ಮುಖ್ಯಸ್ಥ ಡಾ. ಜಿ.ವಿ. ನಾಯಕ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ & ಡೀನ್ ಡಾ. ನಾಗೇಶ ನಾಯ್ಕ ಕಾಗಾಲ, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಸುಭಾಷ್ ಚಂದ್ರನ್,
ಹಿರಿಯ ತೋಟಗಾರಿಕಾ ನಿರ್ದೇಶಕರಾದ ಲಿಂಗರಾಜ್ ಇಟ್ನಾಳ್ & ಚೇತನ್, ಮುಂತಾದ ತಜ್ಞರು ಪಾಲ್ಗೊಂಡಿದ್ದರು. ಎ.ವಿ.ಪಿ. ಸಂಸ್ಥೆ ಮುಖ್ಯಸ್ಥ ಗಣಪತಿ ಎಸ್. ನಾಯ್ಕ, ಜಿ.ಎಚ್. ನಾಯ್ಕ, ತಿಮ್ಮಣ್ಣ ಭಟ್, ಜಗದೀಶ್ ಪಿ. ನಾಯ್ಕ, ಪ್ರಭಾಕರ್ ಪಟಗಾರ, ಶಂಕರ್ ಗೌಡ, ವೆಂಕಟೇಶ್ ಜಿ. ನಾಯ್ಕ, ಕೃಷ್ಣ ನಾಯ್ಕ, ಕರುಣಾಕರ ನಾಯ್ಕ, ಗಣಪತಿ ಪಟಗಾರ, ರಾಧಾಕೃಷ್ಣ ಗೌಡ, ಗೋಪಾಲಕೃಷ್ಣ ಹೆಗ್ಲೆ, ಚಂದ್ರುಪಟಗಾರ ಮುಂತಾದ ಪ್ರಮುಖರು ಭಾಗವಹಿಸಿದ್ದರು.
ಸ್ವಾದಿಷ್ಟಕರ ರುಚಿ, ದೀರ್ಘಕಾಲ ಬಾಳಿಕೆಯ ವಿಶೇಷ ಗುಣ ಧರ್ಮದೊಂದಿಗೆ ಪ್ರಾದೇಶಿಕ ಮಾರುಕಟ್ಟೆ, ಹೆಚ್ಚಿನ ಬೆಲೆ & ಬೇಡಿಕೆ ಹೊಂದಿರುವ ಕುಮಟಾ ತೆಂಗಿನಕಾಯಿ ಮತ್ತು ಅಳ್ವೆಕೋಡಿ (ಕುಮಟಾ) ಈರುಳ್ಳಿ ಗೆ ಜಿ. ಐ. ಟ್ಯಾಗ್ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ವಿಶೇಷ ಚರ್ಚೆಯಾಯಿತು.
ಅಘನಾಶಿನಿ ನದಿ ತಟದ ಭೌಗೋಳಿಕ ಲಕ್ಷಣದ ಪ್ರಭಾವಳಿಯಿಂದ ಕೂಡಿದ ಇಲ್ಲಿನ ಹಲವಾರು ಬೆಳೆಗಳು ವಿಶೇಷ ಗುಣ ಧರ್ಮದಿಂದ ಕೂಡಿದವಾಗಿದೆ ಎಂಬ ತಜ್ಞರುಗಳ ಒಟ್ಟಾಭಿಪ್ರಾಯದಂತೆ
ಜಿ.ಐ. ಟ್ಯಾಗ್ ಮಾನ್ಯತೆ ಪಡೆಯುವಲ್ಲಿ ಪೂರಕವಾದ ಗುಣ-ವಿಶೇಷಗಳ ಮಾಹಿತಿ ಬಹುತೇಕ ಲಭ್ಯವಿದ್ದು ದಾಖಲಿಸಬಹುದಾಗಿದೆ. ‘ಪೋಷಕಾಂಶಗಳು’, ‘ಫಿಜಿಕೋ ಕೆಮಿಕಲ್’ & ‘ಆರ್ಗನೋಲಿಪ್ಟಿಕ್’ ಇನ್ನಿತರ ಗುಣ ಧರ್ಮಗಳನ್ನು ಪ್ರಮಾಣಿಕರಿಸಿ ಪೂರೈಸುವುದರ ಮೂಲಕ ಮಾನ್ಯತೆ ಪಡೆಯಬಹುದಾಗಿದೆ ಎಂಬ ಮಾಹಿತಿಯನ್ನು ಸಂಯೋಜಕರಾದ ಸುಮಂಗಲಾ ಮುರುಳಿ ಸಭೆಗೆ ನೀಡಿದರು.
- ಡಾ. ನಾಗೇಶ ನಾಯ್ಕ ಕಾಗಾಲ
