ಅಶೋಕ ಪೈ ಇವರಿಗೆ 2025ರ “ಸಹಕಾರ ರತ್ನ ಪ್ರಶಸ್ತಿ”

Share


25 ವರ್ಷಗಳ ಕಾಲ ಸಹಕಾರ ಕ್ಷೇತ್ರದಲ್ಲಿ ಮಾಡಿದಂತಹ ನಿಸ್ವಾರ್ಥ ಹಾಗೂ ಅಗ್ರಮಾನ್ಯ ಸೇವೆಯನ್ನು ಗುರುತಿಸಿ ಕರ್ನಾಟಕ ಘನ ಸರ್ಕಾರವು ಪ್ರತಿವರ್ಷ ಕೊಡಮಾಡುವ ಸಹಕಾರಿ ರತ್ನ ಪ್ರಶಸ್ತಿಗೆ ಮಾರುತಿ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ್ ಪೈ ಇವರು ಭಾಜನರಾದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ.ಬೆಂಗಳೂರು ಇವರು ಏರ್ಪಡಿಸಿದ 72 ನೇ ಅಖಿಲ‌ಭಾರತ ಸಹಕಾರ ಸಪ್ತಾಹ ಹಾಗೂ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪ್ರಶಸ್ತಿಯನ್ನು ಹಸ್ತಾಂತರಿಸಿದರು. ಈ ಹಿಂದೆ ಪೈ ಇವರಿಗೆ 70ನೇ ಅಖಿಲ ಭಾರತ ಸಹಕಾರ ಸಪ್ತಾಹ 2023 ರ ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಉತ್ತಮ ಅಧ್ಯಕ್ಷರೆಂದು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದಕ್ಷ ಆಡಳಿತಗಾರರಾದ ಅಶೋಕ್ ಪೈ ಇವರು ಸರಳ ಸಜ್ಜನಿಕೆಗೆ ಹೆಸರಾದವರು. ಇವರ ಸತತ 25 ವರ್ಷಗಳ ಅಧ್ಯಕ್ಷೀಯ ಸೇವಾ ಅವಧಿಯಲ್ಲಿ ಹಲವು ಬಾರಿ ಮಾರುತಿ ಪತ್ತಿನ ಸಂಘಕ್ಕೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಲಭಿಸಿರುವುದು ಅವರ ಉತ್ತಮ ಆಡಳಿತದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಧಾರ್ಮಿಕ,ಸಾಮಾಜಿಕ, ಶೈಕ್ಷಣಿಕ ಮುಂತಾದ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ಸತತವಾಗಿ ತೊಡಗಿಸಿ ಕೊಂಡಿರುವ ಇವರಿಗೆ ಪ್ರಿಯದರ್ಶಿನಿ ಇಂದಿರಾಗಾಂಧಿ ಪ್ರಶಸ್ತಿ ಮಂತಾದ ಹಲವು ಪ್ರಶಸ್ತಿಗಳು ಲಭಿಸಿವೆ. ಸತತ 25 ವರ್ಷಗಳಿಂದ ಇಲ್ಲಿಯವರೆಗಿನ 5 ಆಡಳಿತದ ಅವಧಿಗೂ ಕೂಡ ಚುನಾವಣೆಯಾಗದೇ ಅವಿರೋಧವಾಗಿ ಆಡಳಿತ ಮಂಡಳಿಯು ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಅವರ ನಿಷ್ಕಳಂಕ ಹಾಗೂ ಪ್ರಾಮಾಣಿಕ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.

ವರದಿ ಉಲ್ಲಾಸ್ ಶಾನಭಾಗ್

Leave a Reply

Your email address will not be published. Required fields are marked *

error: Content is protected !!