ವಂದೇ ಮಾತರಂ ಗೀತೆಯ 150ನೇ ವರ್ಷದ ವಾರ್ಷಿಕೋತ್ಸವ ಆಚರಿಸಿದ ಭಟ್ಕಳ ಬಿಜೆಪಿ ಮಂಡಲ

Share


ಭಟ್ಕಳ: ಕವಿ ದಿವಂಗತ ಬಂಕಿಮಚಂದ್ರ ಚಟರ್ಜಿ ಅವರು ರಚಿಸಿರುವ ಒಂದೇ ಮಾತರಂ ಗೀತೆಯ 150ನೇ ವರ್ಷದ ವಾರ್ಷಿಕೋತ್ಸವವನ್ನು ಬಿಜೆಪಿ ಭಟ್ಕಳ ಮಂಡಲದಲ್ಲಿ ಆಚರಿಸಲಾಯಿತು.

ವಂದೇ ಮಾತರಂ ಚಳುವಳಿಯ ಮಾಹಿತಿ ಮತ್ತು ಪ್ರೇರಣದಾಯಕ ಭಾಷಣವನ್ನು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಅವರು ಮಾತನಾಡಿದರು.

ನಂತರ ಸಾಮೂಹಿಕವಾಗಿ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಜೊತೆಯಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಶಿರಾಲಿ ಪಂಚಾಯತ್ ಅಧ್ಯಕ್ಷರು ಮತ್ತು ದಿಷಾ ಕಮಿಟಿಯ ಸದಸ್ಯರಾದಂತಹ ಭಾಸ್ಕರ ಧೈಮನೆ, ಎಸ್.ಟಿ. ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಚಂದ್ರು ಗೊಂಡ, ಗ್ರಾಮೀಣ ಹಾಗೂ ಪಂಚಾಯತ್ ರಾಜ್ ಜಿಲ್ಲಾ ಸಹ ಸಂಚಾಲಕರಾದ ಮೋಹನ ನಾಯ್ಕ, ಮಂಡಲ ಕಾರ್ಯದರ್ಶಿಯಾದ ಜಗದೀಶ ನಾಯ್ಕ, ವೆಂಕಟೇಶ ನಾಯ್ಕ, ಈಶ್ವರ ನಾಯ್ಕ, ಪಾಂಡುರಂಗ ನಾಯ್ಕ, ಯಮುನಾ ನಾಯ್ಕ, ಕಾವೇರಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!