ವಂದೇ ಮಾತರಂ ಕೇವಲ ಒಂದು ಹಾಡಲ್ಲ ಅದು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಂತ್ರ ಎಂಬ ಭಾವ ಸಂಸದರ ಮಾತಿನಲ್ಲಿ ಅಡಗಿದೆ:ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಶ್ರೀ ಈಶ್ವರ ನಾಯ್ಕ

Share

“ಐಕ್ಯತೆಯ ರಣ ಮಂತ್ರ ‘ವಂದೇ ಮಾತರಂ” ನಮ್ಮೆಲ್ಲರ ಅಸ್ಮಿತೆಯ ಗೀತೆ ಯಾಗಿದ್ದು ಈ ಬಗ್ಗೆ ನಮ್ಮ ನೆಚ್ಚಿನ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಡಿಸಿದ ಅಭಿಪ್ರಾಯವನ್ನು ದೇಶಾಭಿಮಾನಿಗಳಾದ ನಾವೆಲ್ಲ ಒಪ್ಪಲೇ ಬೇಕು ಎಂದು ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಶ್ರೀ ಈಶ್ವರ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.
ಹೊನ್ನಾವರದ ಪಟ್ಟಣದ ಪೊಲೀಸ್ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸರ್ದಾರ್ ವಲ್ಲಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ನಡೆದ ಏಕತಾ ಸಮಾರಂಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಜನಗಣಮನ ರಾಷ್ಟ್ರಗೀತೆಗೆ ಸರಿಸಮಾನಾಗಿ ‘ವಂದೇ ಮಾತರಂ’ ಇದೆ ಮತ್ತು ‘ವಂದೇ ಮಾತರಂ’ ರಾಷ್ಟ್ರಗೀತೆಯಾಗಬೇಕೆಂಬ ಕೂಗು ಮೊದಲು ಇತ್ತು, ಎನ್ನುವ ಅಭಿಪ್ರಾಯದಲ್ಲಿ ತಪ್ಪು ಹುಡುಕುತ್ತಿರುವವರ ಮನಸ್ಥಿತಿ ಶೋಚನೀಯ ಮತ್ತು ಯೋಚನೀಯ. ಸ್ವಾತಂತ್ರ್ಯ ಆಂದೋಲನದ ಮುಖ್ಯ ಕಾಲಘಟ್ಟದಲ್ಲಿ ಸ್ವದೇಶಿ ಚಳುವಳಿಯನ್ನು ಮುನ್ನಡೆಸುವಲ್ಲಿ ‘ವಂದೇ ಮಾತರಂ’ ವಹಿಸಿದ ಮಹಾಶಕ್ತಿಯ ಪಾತ್ರವನ್ನು ಸಂಸದರನ್ನು ಖಂಡಿಸುವ ವ್ಯಕ್ತಿಗಳು ಇತಿಹಾಸ ಓದಿ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಂಕಿಮಚಂದ್ರರು ರಚಿಸಿದ ‘ವಂದೇ ಮಾತರಂ’ ಗೀತೆ ಅರ್ಥ ಮಾಡಿಕೊಳ್ಳದವರಿಗೆ ಇದೊಂದು ಕೇವಲ ಶಬ್ದಗಳ ಜೋಡಿಸುವ ಗೀತೆಯಾಗಿ ಪರಿಗಣಿಸುತ್ತದೆ ಅಥವಾ ಪಕ್ಷವನ್ನು ಓಲೈಸುವ ಭರದಲ್ಲಿ ರಾಷ್ಟ್ರಾಭಿಮಾನ ಮತ್ತು ದೇಶಾಭಿಮಾನದ ಕುರುಹು ಆದ ತಾಯಿ ಭಾರತಿಯನ್ನು ವರ್ಣಿಸುವ ಗೀತೆಯನ್ನು ಅವಮಾನಿಸಲು ಮುಂದಾಗುತ್ತಾರೆ ಎನ್ನುವುದು ತುಂಬಾ ಖೇದಕರ ವಿಷಯವಾಗಿದೆ.
ಇತಿಹಾಸದ ಪುಟವನ್ನು ಅವಲೋಕಿಸಿದಾಗ 1950 ಜನವರಿ 24 ರಂದು ರಾಷ್ಟ್ರಗೀತೆ ಜನಗಣಮನದೊಂದಿಗೆ ವಂದೇ ಮಾತರಂ ಗೀತೆಯೂ ಕೂಡ ಸಮಾನ ಸ್ಥಾನಮಾನ ಪಡೆದಿರುವ ಅಂಶವನ್ನು ಸಂಸದರ ಅಭಿಪ್ರಾಯವನ್ನು ಖಂಡಿಸುವ ಜನ ಓದಿ ಅರ್ಥಮಾಡಿಕೊಳ್ಳಬೇಕು ಎಂದರು.
ವಂದೇ ಮಾತರಂ ಕೇವಲ ಒಂದು ಹಾಡಲ್ಲ ಅದು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಂತ್ರ ಎಂಬ ಭಾವ ಸಂಸದರ ಮಾತಿನಲ್ಲಿ ಅಡಗಿದೆ ಆದರೆ ಅಪಾರ್ಥವಾಗಿ ಮಾತನ್ನು ಅರ್ಥ ಮಾಡಿಕೊಂಡ ಪಕ್ಷದ ಓಲೈಕೆಗಾರರು ಇತಿಹಾಸವನ್ನು ಸರಿಯಾಗಿ ತಿಳಿದು ಖಂಡಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿನಿತ್ಯವೂ ದೇಶದ ಮೂಲೆ ಮೂಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಆಡುವ ಅಪ್ರಭುದ್ಧತೆಯ ಮಾತನ್ನು ಗಮನಿಸಿದಾಗ ಇವರಿಗೆ ದೇಶಕ್ಕಿಂತ ಪಕ್ಷ ಮುಖ್ಯವಾಗಿ ದೇಶಭ್ರಷ್ಟರಾಗುತ್ತಿರುವುದು ದುಃಖದ ಸಂಗತಿಯಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗುತ್ತಿರುವ. ಈ ಸಂದರ್ಭದಲ್ಲಿ ಪ್ರತಿನಿತ್ಯವೂ ಇಂತಹ ಕ್ಷುಲ್ಲಕ ವಿಚಾರವನ್ನು ಮುನ್ನೆಲೆಗೆ ತಂದು ಜನರ ದಿಕ್ಕನ್ನು ತಪ್ಪಿಸುವ ಕಾರ್ಯ ನಡೆಯುತ್ತಿರುವುದು ಖಂಡನೀಯ. ಇನ್ನಾದರೂ ರಾಜ್ಯದ ಅಭಿವೃದ್ಧಿಗೆ ಯೋಜನೆ ರೂಪಿಸಿ ಎಂದು ಆಗ್ರಹಿಸುತ್ತಾ, ಮಾನ್ಯ ಸಂಸದರು ತಮ್ಮ ಭಾಷಣದಲ್ಲಿ ಸತ್ಯ ಪರವಾದ ವಿಚಾರವನ್ನು ತಿಳಿಸಿದ್ದಾರೆ ಎಂದು ಈಶ್ವರ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!