ಕಾರವಾರ ಮಾಜಳಿ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದ ಒಂದು ಕೋಟಿ ರೂ ನಗದು ವಶ

Share

ಗೋವಾ ಪಣಜಿಯಿಂದ ಬೆಂಗಳೂರು ಕಡೆಗೆ ಹೊರಟ ಖಾಸಗಿ ಬಸ್ ಅನ್ನ ಕರ್ನಾಟಕ ಗಡಿ ಭಾಗದ ಮಾಜಾಳಿ ಚೆಕ್ ಪೋಸ್ಟ್ ಬಳಿ ಸೋಮವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ನಡೆಸಿದ ಕಾರ್ಯಾಚರಣೆ ನಡೆಸಿ ದಾಖಲೆ ರಹಿತ ಸಾಗಿಸಲಾಗುತ್ತಿದ್ದ ಒಂದು ಕೋಟಿ ರೂಪಾಯಿ ನಗದನ್ನು ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಎಂದಿನಂತೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಪರಶುರಾಮ್ ಮಿರ್ಚಿಗಿ ತಂಡವು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಪಣಜಿಯಿಂದ ಬೆಂಗಳೂರು ಕಡೆಗೆ ಹೊರಟಿರುವ ಖಾಸಗಿ ಬಸ್ ಒಂದರಲ್ಲಿ ಹಣವನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬಸ್ ತಪಾಷಣೆಯನ್ನು ಮಾಡಿದ್ದಾರೆ ಬಸ್ಸಿನಲ್ಲಿ ಲೆದರ್ ಬ್ಯಾಗಿನಲ್ಲಿ 500ರ ನೋಟುಗಳ ಬಂಡಲ್ ಕಂಡುಬಂದಿದ್ದು ಸುಮಾರು ಒಂದು ಕೋಟಿ ರೂಪಾಯಿ ಪತ್ತೆಯಾಗಿದೆ ಪೊಲೀಸರು ತಪಾಸಣೆ ನಡೆಸುವಾಗ ಈ ಬ್ಯಾಗ್ ಬೆಂಗಳೂರು ಮೂಲದ ಕಲ್ಪೇಶ್ ಕುಮಾರ್ ಮತ್ತು ರಾಜಸ್ಥಾನ್ ಮೂಲದ ಬಮರ ರಾಮ್ ಎಂಬ ಪ್ರಯಾಣಿಕರಿಗೆ ಸೇರಿದ್ದು ಎನ್ನುವ ಮಾಹಿತಿ ದೊರೆತಿದ್ದು ಈ ಹಣವನ್ನ ತಮಿಳುನಾಡಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಕೂಡಲೇ ಪೊಲೀಸರು ಹಣದ ಮೂಲ ದಾಖಲೆಗಳನ್ನು ಕೇಳಿದ್ದು ಯಾವುದೇ ಸೂಕ್ತ ಮಾಹಿತಿ ಅಥವಾ ದಾಖಲೆ ಇರದ ಕಾರಣ ಪೊಲೀಸರು ಆರೋಪಿಗಳ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಹಣದ ಮೂಲದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ವರದಿ ಉಲ್ಲಾಸ್ ಶಾನಭಾಗ್

Leave a Reply

Your email address will not be published. Required fields are marked *

error: Content is protected !!