ಆರ್. ಎನ್. ಶೆಟ್ಟಿ ಪದವಿಪೂರ್ವ ಮಹಾವಿದ್ಯಾಲಯ ಮುರುಡೇಶ್ವ ಇಲ್ಲಿನ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಒಂಭತ್ತು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಲಾಂಗ್ ಜಂಪ್ ನಲ್ಲಿ ಕು.ಚೈತನ್ಯಾ ನಾಯ್ಕ, 3 ಕಿ.ಮೀ ನಡಿಗೆಯಲ್ಲಿ ಕು.ಆರತಿ ನಾಯ್ಕ, ಕ್ರಾಸ್ ಕಂಟ್ರಿ ಯಲ್ಲಿ ಕು.ವಿದ್ಯಾ ದೇವಾಡಿಗ, ಕರಾಟೆಯಲ್ಲಿ ಕು.ಶ್ರೀರಕ್ಷ ನಾಯ್ಕ, 4×100 ರಿಲೇಯಲ್ಲಿ ಕು.ಸಿದ್ವೀನ್ ದೇವಾಡಿಗ, ಸ್ವಿಮ್ಮಿಂಗ್ ನಲ್ಲಿ ಕು.ಯೋಗಿತಾ ಮುರುಡೇಶ್ವರ ಹಾಗೂ ಕು.ವನಶ್ರೀ ಮೇಸ್ತ, ಕಬಡ್ಡಿಯಲ್ಲಿ ಕು.ವೇದ ನಾಯ್ಕ ಹಾಗೂ ಕು.ನಾಗಶ್ರೀ ಹರಿಕಾಂತ ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದರ ಮುಖಾಂತರ ಸಂಸ್ಥೆಗೆ ಹಾಗೂ ಭಟ್ಕಳ ತಾಲೂಕಿಗೆ ಕೀರ್ತಿಯನ್ನು ತಂದಿರುತ್ತಾರೆ.
ಇವರಿಗೆ ಆಡಳಿತ ಮಂಡಳಿ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಅಶ್ವಿನಿ ಶೇಟ್ ಹಾಗೂ ಎಲ್ಲಾ ಬೋಧಕ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.