ಭಟ್ಕಳ:ಆರ್ ಎಸ್ ಎಸ್ ಸ್ಥಾಪನೆಯಾಗಿ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಅಕ್ಟೋಬರ್ 12ರಂದು ಪಥಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರಿಂದ ಜಿಲ್ಲಾ ಪೊಲೀಸ್ ಇಲಾಖೆಯ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಇವರ ಮಾರ್ಗದರ್ಶನದಲ್ಲಿ ಭಟ್ಕಳದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮುನ್ನೆಚ್ಚರಿಕೆಗಾಗಿ ಪೋಲಿಸ್ ಇಲಾಖೆಯಿಂದ ಅಕ್ಟೋಬರ್ 11ರ ಸಂಜೆ ಎರಡು ಕಡೆಯಿಂದ ರೂಟ್ ಮಾರ್ಚನ್ನು ನಡೆಸಲಾಯಿತು.

ಮೊದಲನೆಯ ರೂಟ್ ಮಾರ್ಚನ್ನು ಹಳೆ ಬಸ್ ಸ್ಟ್ಯಾಂಡಿನಿಂದ ಪ್ರಾರಂಭಗೊಂಡು ಆಸರ ಕೇರಿ ಕ್ರಾಸ್ ಆಸರಕೇರಿ ದೇವಸ್ಥಾನ ಸೋನರ್ ಕೇರಿ ಮೂಲಕ ಈದ್ಗಾ ಮೈದಾನ, ಸಂಸುದ್ದೀನ್ ಸರ್ಕಲ್ ಇಂದ ಗುರು ಸುಧೀಂದ್ರಕಾಲೇಜ್ ತನಕ ಹೋಗಿ,ಭಟ್ಕಳ ಪಟ್ಟಣ ಪೊಲೀಸ್ ಠಾಣೆಗೆ ಹಿಂದುರುಗಿದರು.

ಎರಡನೆಯ ರೂಟ್ ಮಾರ್ಚ್ ಭಟ್ಕಳ ಪಟ್ಟಣ ಪೊಲೀಸ್ ಠಾಣೆಯಿಂದ ಹೊರಟು ಹಳೆ ಬಸ್ ಸ್ಟ್ಯಾಂಡ್ , ನಾಗಬನ ಮಾರಿಕಟ್ಟೆ, ಹೂವಿನ ಮಾರುಕಟ್ಟೆ ಮೂಲಕ ಚನ್ನಪಟ್ಟಣ ದೇವಸ್ಥಾನ ,ನೆಹರು ರೋಡ್ , ವೀರ ವಿಠಲ ರಸ್ತೆ ಮೂಲಕ ರಘುನಾಥ್ ರಸ್ತೆ,, ಕಳಿ ಹನುಮಂತ ದೇವಸ್ಥಾನ ದಿಂದ ಭಟ್ಕಳ ಪಟ್ಟಣ ಪೊಲೀಸ್ ಠಾಣೆಗೆ ವಾಪಸಾದರು.

ಈ ರೂಟ್ ಮಾರ್ಚಿನಲ್ಲಿ ಅಡಿಷನಲ್ ಎಸ್‌ಪಿ ಜಗದೀಶ್ ಎಂ ಕಾರವಾರ ಭಟ್ಕಳ ಉಪ ವಿಭಾಗ ಡಿಎಸ್ಪಿ ಮಹೇಶ್ ಎಂ ಕೆ, ಡಿ ಎಸ್ ಪಿ ಶ್ರೀಮತಿ ಅಶ್ವಿನಿ ಬಿ, ಡಿಎಸ್ಪಿ.ರಾಘವೇಂದ್ರ ನಾಯಕ್ ಡಿಎಆರ್ ಭಟ್ಕಳ ಹಾಗೂ ಗ್ರಾಮೀಣ ಠಾಣೆಯ ಸಿಪಿಐಗಳಾದ ದಿವಾಕರ್ ಪಿಎಂ ಮತ್ತು ಮಂಜುನಾಥ ರೆಡ್ಡಿ ಉಪಸ್ಥಿತರಿದ್ದರು.
ವರದಿ ಉಲ್ಲಾಸ ಶಾನಭಾಗ್
