ಇತಿಹಾಸ ನಿರ್ಮಿತ ಮುರುಡೇಶ್ವರದಲ್ಲಿ ಸಮುದ್ರ ಆರತಿ

Share

ಇತಿಹಾಸ ನಿರ್ಮಿತ ಮುರುಡೇಶ್ವರದಲ್ಲಿ ಸಮುದ್ರ ಆರತಿ


ಭಟ್ಕಳ: ತಾಲೂಕಿನ ಮುರುಡೇಶ್ವರದಲ್ಲಿ ಶ್ರೀ ಮಹತೋಭಾರ ಶ್ರೀ ಮುರುಡೇಶ್ವರ ದೇವಸ್ಥಾನ ಹಾಗೂ ಊರ ಸೀಮಾ ಸಮಿತಿ ವತಿಯಿಂದ ಸಮುದ್ರರಾಜನಿಗೆ 13- 10- 25 ಸೋಮವಾರದಂದು ಸಾಯಂಕಾಲ ಸಮುದ್ರ ಆರತಿ ನಡೆಯಲಿದೆ. ಆ ದಿನ ಬೆಳಿಗ್ಗೆ 9:00ಗಂಟೆಗೆ ಶ್ರೀ ಮುರುಡೇಶ್ವರ ದೇವರಿಗೆ “ಶತರುದ್ರೀಯ” ಅನುಷ್ಠಾನ, ತೀರ್ಥ ಹೋಮ, ಶ್ರೀ ದೇವರಿಗೆ ರುದ್ರ ಕಲಾಭಿಷೇಕ ನಂತರ 10:00 ಗಂಟೆಗೆ ಶ್ರೀ ದೇವರಿಗೆ ಊರಿನ ಭಕ್ತಾದಿಗಳಿಂದ ಗ್ರಾಮ ಪ್ರಾಯಶ್ಚಿತ ಅಂಗವಾಗಿ ಮುಷ್ಠಿ ನಾಣ್ಯ ಸಮರ್ಪಣೆ ಹಾಗೂ ಪ್ರಾರ್ಥನೆ ನಡೆಯಲಿದೆ.

. ಸಾಯಂಕಾಲ 6:00 ಗಂಟೆಗೆ ದೇವಸ್ಥಾನದಿಂದ ಗ್ರಾಮಸ್ಥರು ತೀರ್ಥ ಕುಂಭವನ್ನು ಗ್ರಾಮ ಪ್ರದಕ್ಷಿಣ ಪೂರ್ವಕ ಸಮುದ್ರ ತೀರಕ್ಕೆ ತರುವುದು. ತದನಂತರ ಸಮುದ್ರ ತೀರದಲ್ಲಿ ವೇದ ಮಂತ್ರ, ವಾದ್ಯ, ಸಂಗೀತ, ಶಿವ ಮತ್ತು ರಾಮ- ನಾಮ ಸ್ಮರಣೆ ಪೂಜಾ ಕಾರ್ಯ ಮತ್ತು ವಿಶಿಷ್ಟ ಹಾಗೂ ವಿಶೇಷ ರೀತಿಯ ಆರಾಧನೆಯ ನಂತರ ಸಮುದ್ರ ಆರತಿ ಕಾರ್ಯಕ್ರಮ ಜರುಗಲಿದೆ.

ವಿಶೇಷ ಸೂಚನೆ: ಬೆಳಿಗ್ಗೆ ದೇವಸ್ಥಾನದಲ್ಲಿ ನಡೆಯಲಿರುವ ಶ್ರೀ ಮುರುಡೇಶ್ವರ ದೇವರಿಗೆ ಪ್ರಾಯಶ್ಚಿತ್ತ ಮುಷ್ಟಿನಾಣ್ಯವನ್ನು ಮತ್ತು ಸಾಯಂಕಾಲ ಸಮುದ್ರಕ್ಕೆ ಮುಷ್ಠಿ ನವಧಾನ್ಯ ವನ್ನು ಊರಿನ ಪ್ರತಿ ಮನೆಯಿಂದ ಒಬ್ಬರಂತೆ ಸಮರ್ಪಣೆ ಮಾಡಿ ಶ್ರೀದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!