ಬೀನಾ ವೈದ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಸಮಾವೇಶ

Share

ಭಟ್ಕಳ: ಮುರುಡೇಶ್ವರದ ಬಲ್ಸೆಯಲ್ಲಿರುವ ಸಚಿವರ ಮನೆಯಂಗಳದಲ್ಲಿ ರವಿವಾರದಂದು ಬೀನಾ ವೈದ್ಯ ನೇತೃತ್ವದಲ್ಲಿ ಮಂಕಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಮಹಿಳಾ ಸಮಾವೇಶ ನಡೆಯಿತು. ಮಹಿಳಾ ಕಾರ್ಯಕರ್ತರ ಸಮಾಲೋಚನಾ ಸಭೆ ಐದು ನೂರಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತರ ಪಾಲ್ಗೊಳ್ಳುವಿಕೆಯಿಂದ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆದ ಮಂಕಾಳ ವೈದ್ಯ ಮಾತನಾಡಿ

ಈ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡ ಕಾಂಗ್ರೆಸ್ ಪಕ್ಷ ಅಂದಿನಿಂದ ಇಂದಿನವರೆಗೂ ಮಹಿಳೆಯರಿಗೆ ನೀಡಿದ ಗೌರವ, ಸ್ಥಾನಮಾನ ಮತ್ತು ಪ್ರಾಮುಖ್ಯತೆಯ ಬಗ್ಗೆ ಸಭೆಯ ಗಮನಕ್ಕೆ ತರುವ ಪ್ರಯತ್ನ ಮಾಡಿದರು.

ಮಂತ್ರಿಗಳು ಅಂದ ತಕ್ಷಣ ಅವರು ಜನಸಾಮಾನ್ಯರ ಕೈಗೆ ಸಿಗದವರು ಅವರನ್ನು ಸುಲಭವಾಗಿ ಎಲ್ಲರೂ ಮಾತನಾಡಿಸುವುದಾಗಲಿ, ಬೇಟಿ ಮಾಡುವುದಾಗಲಿ ಸಾಧ್ಯವಿಲ್ಲ ಎನ್ನುವಂತಹ ಒಂದು ಮಾತು ಜನ ಸಾಮಾನ್ಯರ ನಡುವೆ ಪ್ರಚಲಿತದಲ್ಲಿ ಇತ್ತು . ಆದರೆ ನಾನು ಈ ರಾಜ್ಯದ ಸಚಿವನಾದ ನಂತರವೂ ಸಹ ಈ ಮೊದಲು ಹೇಗಿದ್ದೇನೋ ಹಾಗೆ ಇದ್ದೇನೆ. ಹಿಂದೂ ಇಂದೂ ಮುಂದು ಸಹ ಜನರ ನಡುವೆ ಇರಬೇಕು ಎನ್ನುವುದು ನನ್ನ ಅಭಿಲಾಷೆ ಯಾರು ಕೂಡ ಈ ವಿಷಯದಲ್ಲಿ ನನ್ನನ್ನು ಬದಲಾಯಿಸುವುದು ಸಾಧ್ಯವಿಲ್ಲ. ಯಾಕೆಂದರೆ ನಾನು ಇವತ್ತು ಇಲ್ಲಿ ನಿಂತು ಮಾತನಾಡುತ್ತಿದ್ದೇನೆ, ಈ ಕ್ಷೇತ್ರದ ಶಾಸಕನಾಗಿದ್ದೇನೆ, ಈ ರಾಜ್ಯದ ಸಚಿವನಾಗಿದ್ದೇನೆ ಅಂತಾದರೆ ಅದು ನೀವು ನನಗೆ ಕೊಟ್ಟ ಉಡುಗೊರೆ. ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸ. ಅದನ್ನ ಉಳಿಸಿಕೊಂಡು ಹೋಗುವುದು ನನ್ನ ಜವಾಬ್ದಾರಿ ಅದರ ಅರಿವು ನನಗಿದೆ ಎಂದರು.

ನನ್ನ ಮಗಳು ಬೀನಾ ವೈದ್ಯ ರಾಜ್ಯ ಮಹಿಳಾ ಕಾಂಗ್ರೆಸ್ನ ಕಾರ್ಯದರ್ಶಿಯಾಗಿ ನೇಮಕವಾದ ನಂತರ ಪಕ್ಷ ಸಂಘಟನೆ ಬಗ್ಗೆ ತನ್ನದೇ ಆದ ಹತ್ತು ಹಲವಾರು ಕನಸುಗಳನ್ನು ಕಂಡು ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವುದನ್ನು ನೋಡಿದಾಗ ಒಬ್ಬ ತಂದೆಯಾಗಿ ಮಗಳ ಬಗ್ಗೆ ಹೆಮ್ಮೆಯೆನಿಸುತ್ತಿದೆ. ನಿಮ್ಮೆಲ್ಲರ ಮಾರ್ಗದರ್ಶನ, ಸಹಕಾರದಿಂದ ಅವಳಿಗೆ ಪಕ್ಷ ಸಂಘಟನೆಯಲ್ಲಿ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸುವೆ ಎಂದರು.

ನಂತರ ಮಾತನಾಡಿದ ಬೀನಾ ವೈದ್ಯ ರವರು ನಾನು ನನ್ನ ತಂದೆ ಯಂತೆ ಪ್ರಾಮಾಣಿಕವಾಗಿ ಭಟ್ಕಳ ಹಾಗೂ ಹೊನ್ನಾವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆ ಮಾಡಿ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ,

ಸಭೆಗೆ ನನ್ನ ನಿರೀಕ್ಷೆಗೂ ಮೀರಿ ನೀವು ತೋರಿಸಿದ ಪ್ರೀತಿಗೆ ನಾನು ಮೂಕವಿಸ್ಮಿತನಾದೆ. ನನ್ನ ಕನಸು ಮಹಿಳೆಯರು ಸಮಾಜದಲ್ಲಿ ಅವರದ್ದೇ ಗೌರವ ಘನತೆ ಹಾಗೂ ಸ್ವಾವಲಂಬಿ ಜೀವನವನ್ನು ನಡೆಸಬೇಕು ,ಸಂಘಟಿತರಾಗಬೇಕು ಸ್ಥಳೀಯ ಚುನಾವಣೆ ಗ್ರಾಮ ಪಂಚಾಯತ್ ತಾಲೂಕಾ ಪಂಚಾಯತ್ ಜಿಲ್ಲಾ ಪಂಚಾಯತ್ ಗಳಲ್ಲಿ ಮಹಿಳೆಯರಿಗೂ ಸರಿಯಾದ ಮೀಸಲಾತಿ ಸಿಕ್ಕಿ ಅವರು ಸಹ ಆಡಳಿತ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಬರಬೇಕು ಅನ್ನುವ ನನ್ನ ಆಸೆಯಂತೆ ಇಂದಿನಿಂದ ಮಹಿಳಾ ಕ್ರಾಂತಿ ನಮ್ಮ ಕ್ಷೇತ್ರದಾದ್ಯಂತ ನಡೆಯುತ್ತದೆ ಎಂದು ಹೇಳಲು ಹೆಮ್ಮೆಯಿದೆ. ಕಾರ್ಯಕ್ರಮದಲ್ಲಿ ಹಲವಾರು ಮಹಿಳೆಯರು ಸಂಘಟನೆಯಲ್ಲಿ ಆಗುವ ಚಿಕ್ಕ ಪುಟ್ಟ ತೊಡಕುಗಳ ಬಗ್ಗೆ ಚರ್ಚಿಸಿದ್ದೀರಿ ಅದಕ್ಕೆ ಸಮರ್ಪಕವಾದ ಪರಿಹಾರವನ್ನು ಹಾಗೂ ನಿಮ್ಮ ಜೊತೆ ನಾನು ಇದ್ದೇನೆ ಎಲ್ಲಾ ಸಮಯದಲ್ಲಿ ಮಹಿಳೆಯರ ಸಮಸ್ಯೆಗೆ ಧ್ವನಿಯಾಗಿ ನಿಲ್ಲುತ್ತೇನೆ ಎಂದು ಹೇಳಿದರು. ನಮ್ಮ ಕುಟುಂಬವು ಸದಾ ಕಾಲ ಜನತೆಯ ಪರವಾಗಿದೆ .ನಮ್ಮ ದುಡಿಮೆಯಲ್ಲಿ ನಮಗಾದಷ್ಟು ಮಟ್ಟಿಗೆ ನಮ್ಮ ತಂದೆಯವರು ದಾನವನ್ನು ಹಾಗೂ ಶಿಕ್ಷಣ ಹಾಗೂ ಮಠ ಮಂದಿರಕ್ಕೆ ನೀಡುತ್ತಿದ್ದಾರೆ ಅವರ ಹಾದಿಯಲ್ಲಿ ನಾನು ಸಹ ಹೋಗಲು ಸಣ್ಣದಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.

 

ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶ್ರಿಮತಿ ಸುಜಾತಾ ಗಾಂವಕರ್, ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಆತ್ಮೀಯರಾದ ಗೋವಿಂದ ನಾಯ್ಕ, ಹಿರಿಯರಾದ ಶ್ರಿಮತಿ ವನಿತಾ ನಾಯ್ಕ ಮಂಕಿ, ಹೊನ್ನಾವರ ತಾಲೂಕಾ ಗ್ಯಾರಂಟಿ ಕಮಿಟಿ ಅಧ್ಯಕ್ಷರಾದ ಅಣ್ಣಪ್ಪ ನಾಯ್ಕ, ಜಿಲ್ಲಾಪಂಚಾಯತ್ ಮಾಜಿ ಸದಸ್ಯರಾದ ಕುಮಾರಿ ಪುಷ್ಪಾ ನಾಯ್ಕ, ಭಟ್ಕಳ್ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಶ್ರೀಮತಿ ನಯನಾ ನಾಯ್ಕ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಉಷಾ ನಾಯ್ಕ, ಬೀನಾ ವೈದ್ಯ ಎಜುಕೇಶನ್ ಟ್ರಸ್ಟ್ ನ ಎಂ. ಡಿ. ಯಾಗಿರುವ ಶ್ರೀಮತಿ ಪುಷ್ಪಲತಾ ಮಂಕಾಳ ವೈದ್ಯ, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರದಿ:ಉಲ್ಲಾಸ್ ಶಾನಭಾಗ್

Leave a Reply

Your email address will not be published. Required fields are marked *

error: Content is protected !!