
ಭಟ್ಕಳ : ಭಾನುವಾರ ಭಟ್ಕಳದ ಮುಟ್ಟಳ್ಳಿ ಬೈಪಾಸ್ ಬಳಿ ಭೀಕರ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮಣಿಪಾಲದಿಂದ ಗೋಕರ್ಣ ಕಡೆಗೆ ಹೋಗುತ್ತಿದ್ದ ಬಸ್ ಭಟ್ಕಳ ಮುಟ್ಟಳ್ಳಿ ಬೈಪಾಸ್ ಹತ್ತಿರ ಪುರವರ್ಗದಿಂದ ಭಟ್ಕಳಗೆ ಕಡೆಗೆ ಹೊರಟಿದ್ದ ಪೂರ್ವ ವರ್ಗದ ಸುಂದರ್ ಲಕ್ಷ್ಮಣ್ ಆಚಾರಿ ವಯಸ್ಸು 64 ಇವರ ಸ್ಕೂಟಿ ಬಸ್ ರಭಸದಿಂದ ಡಿಕ್ಕಿ ಹೊಡೆದಿದೆ. ಬಸ್ ಬಡಿದ ರಭಸಕ್ಕೆ ನಿಯಂತ್ರಣ ತಪ್ಪಿದ ಬೈಕ್ ಸವಾರ ರಸ್ತೆಯ ಮೇಲೆ ಬಿದ್ದ ಪರಿಣಾಮ ಬಸ್ ಚಕ್ರವು ಸವಾರನ ತಲೆಯ ಮೇಲೆ ಹರಿದು ಹೋದದ್ದರಿಂದ ಬೈಕ್ ಸವಾರ ಗಂಭೀರ ಗಾಯಗೊಂಡು ಸಾವನೋಪ್ಪಿದ್ದಾನೆ. ಬಸ್ ತಲೆ ಮೇಲೆ ಹರಿದ ರಿಂದ ಹೆಲ್ಮೆಟ್ ಪುಡಿಪುಡಿಯಾಗಿದೆ ಸ್ಥಳಕ್ಕೆ ಪೊಲೀಸರು ದಾವಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವರದಿ:ಉಲ್ಲಾಸ್ ಶಾನಭಾಗ್