ಜಗತ್ತಿಗೆ ಶಾಂತಿಮಂತ್ರ ನೀಡಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು, ಸತ್ಯಜಿತ್ ಸುರತ್ಕಲ್.

Share


ಭಟ್ಕಳ: ಮನುಷ್ಯತ್ವದ ದೇವಮಾನವರಾಗಿ, ಜಗತ್ತಿಗೆ ಶಾಂತಿ ಮಂತ್ರವನ್ನು ನೀಡಿದವರು ಬೃಹ್ಮಶ್ರೀ ನಾರಾಯಣಗುರುಗಳು ಎಂದು ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಹೇಳಿದರು.


ಅವರು ಇಲ್ಲಿನ ಸಾರದಹೊಳೆ ನಾಮಧಾರಿ ಸಬಾಭವನದಲ್ಲಿ ಭಟ್ಕಳ ಹಾಗೂ ಸಾರದ ಹೊಳೆ ನಾಮಧಾರಿ ಅಭಿವೃದ್ಧಿ ಸಂಘ ಹಾಗೂ ತಾಲೂಕು ನಾರಾಯಣಗುರು ಸಮಿತಿ ಹಮ್ಮಿಕೊಂಡ 171 ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದರು. ಜತ್ತಿನೆಲ್ಲಡೇ ಧರ್ಮ- ಅಧರ್ಮ, ನ್ಯಾಯ ಹಾಗೂ ಅನ್ಯಾಯದ ವಿರುದ್ದ ಹೋರಾಟ ನಡೆಯುತ್ತಿದೆ. ಅವೆಲ್ಲವನ್ನು ಕೊನೆಗಾಣಿಸಲಿಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳ ತಂತ್ರವನ್ನು ಅಳವಡಿಸಿಕೊಂಡರೆ ಈ ಜಗತ್ತು ಶಾಂತಿಯುತವಾಗಿ ಬದುಕಬಹುದು ಎಂದ ಅವರು ಹಿಂದೂ ಧರ್ಮವು ವಿವಿಧ ಜಾತಿಯ ಹೆಸರಿನಲ್ಲಿ ಹಂಚಿಹೋಗಿದ್ದ ಕಾಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದೇ ಜಾತಿ ಒಂದೇ ಧರ್ಮ,ಒಂದೇ ಕುಲ ಎಂಬ ಸಂದೇಶದೊಂದಿಗೆ ಸಮಾಜದಲ್ಲಿ ಜಾತಿ ಪಧ್ದತಿಯನ್ನು ವಿರೋಧಿಸಿ ಮಾನವ ಜಾತಿಯು ಒಂದೇ ಎಂದು ಸಾರಿದರು. ನಾವು ಇಂದು ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ತರೆದು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸಮಾಜಕ್ಕೆ ನೀಡಿದರೆ ಸಮಾಜವು ಬಲಿಷ್ಠ ಸಮಾಜವಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಳೇಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷರಾದ ಆರ್,ಕೆ,ನಾಯ್ಕ ಮಾತನಾಡಿ ನಾವು
ಹಿಂದುಳಿದವರು ನಮ್ಮಿಂದ ಏನನ್ನು ಸಾದಿಸಲಾಗದು ಎಂಬ ಭಾವನೆಗಳನ್ನು ಮೊದಲು ನಮ್ಮ ಮನಸ್ಸಿನಿಂದ ತೊಡೆದು ಹಾಕಬೇಕು. ಶ್ರೀ ನಾರಾಯಣ ಗುರುಗಳ ಚಿಂತೆನೆಗಳನ್ನು ತಮ್ಮ ಜೀವನದನಲ್ಲಿ ಮೈಗೂಡಿಸಿ ಕೊಂಡು ನಾವೆಲ್ಲರೂ ಬಾಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಾಜಿ ಸಚಿವ ಆರ್.ಎನ್. ನಾಯ್ಕ ಮಾತನಾಡಿ ನಾರಾಯಣ ಗುರುಗಳು ಒಂದೇ ದೇವರು, ಒಂದೇ ಧರ್ಮ ಎಂಬಂತೆ ನಾವೆಲ್ಲರೂ ನಮ್ಮ ಮೂಲ ದೇವರಿಗೆ ಮೊದಲು ನಡೆದುಕೊಳ್ಳಬೇಕು. ಎಂದ ಅವರು ನಮ್ಮ ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಳ್ಳಬೇಕು. ಬೇರೆಯವರಿಂದ ನಮ್ಮ ವ್ಯಕ್ತಿತ್ವ ಬದಲಾಯಿಸಲು ಸಾಧ್ಯವಿಲ್ಲ ಎಂದರಲ್ಲದೇ ಹಿಂದುಳಿದ ಸಮಾಜದವರಾದ ನಾವು ನಮ್ಮ ಮೂಲ ಧರ್ಮ- ತತ್ವವನ್ನು ಅರಿತು ನಮ್ಮ ಪೂರ್ವಜರ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ 18 ನೇ ಶತಮಾನದಲ್ಲಿ ಕೇರಳದಲ್ಲಿ ಹಿಂದುಳಿದ ವರ್ಗಗಳೂ ಹೀನಾಯ ಸ್ಥಿತಿಯಲ್ಲಿತ್ತು. ಅಂತಹ ಕಾಲದಲ್ಲಿ ದೇವಸ್ಥಾನಗಳಲಿ, ಶಾಲೆಗಳಲ್ಲಿ ಪ್ರವೇಶಿಸಲು ಹಿಂದುಳಿದ ವರ್ಗಗಳಿಗೆ ನಿಷೇದವಿತ್ತು. ಆಗ ಶ್ರೀ ನಾರಾಯಣ ಗುರುಗಳು ಹಿಂದುಳಿದ ಸಮಾಜವನ್ನು ಒಂದೆಡೇ ಸೇರಿಸಿ ಅಹಿಂಸಾ ಮಾರ್ಗದಲ್ಲಿ ಅವರಿಗೆ ಪ್ರತ್ಯೇಕ ಶಾಲೆ ಹಾಗೂ ದೇವಸ್ಥಾನ ತೆರೆದು ಅವರನ್ನು ವಿದ್ಯಾವಂತರನ್ನಾಗಿ ಮಾಡಿದರು ಎಂದರು.
ಮಾಜಿ ಶಾಸಕ ಜೆ.ಡಿ.ನಾಯ್ಕ , ಹಳೆಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಶ್ರೀ ನಾರಾಯಣಗುರು ಸಮಿತಿಯ ಅಧ್ಯಕ್ಷ ಮನಮೋಹನ ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ನಾಮಧಾರಿ ಸಮಾಜದ ಅಭಿವೃದ್ಧಿ ಸಂಘದ ಉಪಾದ್ಯಕ್ಷ ಎಂ.ಕೆ. ನಾಯ್ಕ, ಮಾವಳ್ಳಿ ನಾಮಧಾರಿ ಅಬಿವೃದ್ದಿ ಸಂಘದ ಉಪಾದ್ಯಕ್ಷ ನಾಗೇಂದ್ರ ನಾಯ್ಕ ಉಪಸ್ಥಿತರಿದ್ದರು.
ಸಾಮಾಜಿಕ ಪರಿವರ್ತನೆಯಲ್ಲಿ ಶ್ರೀ ನಾರಾಯಣ ಗುರಗಳ ಕೊಡುಗೆ ಎಂಬ ವಿಷಯದ ಬಗ್ಗೆ ಪಿ.ಯು. ವಿದ್ಯಾರ್ಥಿಗಳಿಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಹಣ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.


ಪ್ರಾರಂಭದಲ್ಲಿ ಶಿವಾನಂದ ಎನ್. ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಈಶ್ವರ ನಾಯ್ಕ ವಂದನಾರ್ಪಣೆ ಮಾಡಿದರು. ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ನಾರಾಯಣಗುರು ಅಬಿವೃದ್ದಿ ನಿಗಮಕ್ಕೆ ಹಣ ಬಿಡುಗಡೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿಯನ್ನು ಅದಿಕಾರಿಗಳ ಮೂಲಕ ನೀಡಲಾಯಿತು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶಿರಾಲಿಯ ಹಾದಿ ಮಾಸ್ತಿ ದೇವಸ್ಥಾನದಿಂದ
ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಹಳೆಕೋಟೆ ಹನುಮಂತ ದೇವಸ್ಥಾನದವರೆಗೆ ತರಲಾಯಿತು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!