ಭಟ್ಕಳ: ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ವ್ಯಾಪ್ತಿಯಲ್ಲಿ ದೇವಸ್ಥಾನಗಳ ಹುಂಡಿ ಹಾಗೂ ಆಭರಣ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದೆ ಹೀಗಾಗಿ ದೇವಸ್ಥಾನಗಳಿಗೆ ಸಿಸಿ ಕ್ಯಾಮೆರಾಗಳನ್ನ ಅಳವಡಿಸುವ ಉದ್ದೇಶದಿಂದ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳ ಕಮಿಟಿಯ ಸದಸ್ಯರ ಸಭೆಯನ್ನು ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ಅವರು ಕರೆದಿದ್ದರು.

ದೇವಸ್ಥಾನಗಳಲ್ಲಿ ಸಿಸಿ ಕ್ಯಾಮರಾ ಗಳ ಕೊರತೆ ಎದ್ದು ಕಾಣುತ್ತಿದ್ದು ಇದರಿಂದ ದೇವಸ್ಥಾನಗಳ ಸ್ವತ್ತಿನ ಕಳ್ಳತನ ಹೆಚ್ಚಾಗುತ್ತಿದೆ ಮತ್ತು ಅಪರಾಧಗಳ ಪತ್ತೆ ಹಚ್ಚಲು ಸಾಕಷ್ಟು ಹಿನ್ನಡೆಯಾಗುತ್ತಿದೆ ಕಳ್ಳತನ ದರೋಡೆ ಸುಲಿಗೆ ಯಂತಹ ಪ್ರಕರಣಗಳ ತನಿಖೆಗೆ ಸಾಕಷ್ಟು ತೊಂದರೆಯಾಗುತ್ತಿತ್ತು ಆದ್ದರಿಂದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರತಿ ದೇವಸ್ಥಾನಗಳಿಗೆ ಸಿ ಸಿ ಕ್ಯಾಮೆರಾಗಳನ್ನ ಅಳವಡಿಸುವ ಉದ್ದೇಶದಿಂದ ಪ್ರತಿ ದೇವಸ್ಥಾನಕ್ಕೆ ಸಿಸಿ ಕ್ಯಾಮೆರಾ ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಸಭೆಯಲ್ಲಿ ಹಾಜರಾಗಿದ್ದ ಭಟ್ಕಳದ ಎಲ್ಲಾ ದೇವಸ್ಥಾನಗಳ ಸದಸ್ಯರಲ್ಲಿಯೂ ದೇವಸ್ಥಾನಗಳಿಗೆ ಸಿ ಸಿ ಕ್ಯಾಮೆರಾ ಗಳನ್ನು ಅಳವಡಿಸುವಂತೆ ಕೋರಲಾಯಿತು. ಪೊಲೀಸ್ ಇಲಾಖೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಸೋಡಿಗೆದ್ದೆ ದುರ್ಗಾಪರಮೇಶ್ವರಿ ದೇವಸ್ಥಾನ, ಕಂಚಿನದುರ್ಗ ಪರಮೇಶ್ವರಿ ದೇವಸ್ಥಾನ, ಸೇಡಬರೆ ದೇವಸ್ಥಾನ ಹಾಗೂ ಠಾಣಾ ವ್ಯಾಪ್ತಿಯ ಇತರ ದೇವಸ್ಥಾನಗಳ ಕಮಿಟಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ವರದಿ: ಉಲ್ಲಾಸ್ ಶಾನ್ಭಾಗ್