ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿರಸಿ ತಾಲೂಕ ಘಟಕ ಅಧ್ಯಕ್ಷರಾಗಿ ರಾಜು ಕಾನಸೂರ ನೇಮಕ

Share

ಶಿರಸಿ:ಕಳೆದ 30 ವರ್ಷಗಳಿಂದ ಜಿಲ್ಲಾ ಪತ್ರಿಕೋದ್ಯಮದಲ್ಲಿ ತಮ್ಮ ದೇ ಆದ ಹೆಜ್ಜೆ ಗುರುತು ಮೂಡಿಸಿರುವ ಕರಾವಳಿ ಮುಂಜಾವು ದಿನಪತ್ರಿಕೆಯ ಹಿರಿಯ ವರದಿಗಾರರಾದ ರಾಜು ಕಾನಸೂರ ಇವರನ್ನು ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ನಾಗರಾಜ್ ದೈವಜ್ಞ ಸೂಚನೆ ಮೇರೆಗೆ, ಕರಾವಳಿ ಕರ್ನಾಟಕದ ವಿಭಾಗದ ಅಧ್ಯಕ್ಷ ಕುಮಾರ್ .ನಾಯ್ಕ್ ಅವರ ಶಿಫಾರಸಿನೊಂದಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಸಂಘಟನೆಯ ಶಿರಸಿ ತಾಲೂಕ ಘಟಕ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಈ ಆದೇಶ ಹೊರಡಿಸಿದ್ದು,ಸಂಘಟನೆ ಜೊತೆಗೆ ಪತ್ರಕರ್ತರ ಹಿತ ರಕ್ಷಣೆಗೆ ಅಹರ್ನಿಶಿ ಶ್ರಮಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ನೂತನವಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಸಂಘಟನೆಯ ಶಿರಸಿ ತಾಲೂಕ ಘಟಕ ಅಧ್ಯಕ್ಷರರಾಗಿ ಆಯ್ಕೆ ಆದ ರಾಜು ಕಾನಸೂರ ಅವರಿಗೆ ಭಟ್ಕಳ ತಾಲೂಕ ಅಧ್ಯಕ್ಷ ಶಂಕರ್.ನಾಯ್ಕ, ಅಂಕೋಲಾ ತಾಲೂಕ ಅಧ್ಯಕ್ಷ ಮಾರುತಿ ಎಚ್ ಮತ್ತು ಮುಂಡಗೋಡ್ ತಾಲೂಕ ಅಧ್ಯಕ್ಷ ಸಂತೋಷ್ .ದೈವಜ್ಞ ಅವರು ಅಭಿನಂದನೆಗಳನ್ನು ಸಲ್ಲುಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!