ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀಧರ ಶೇಟ್ ರವರಿಗೆ ಅಭಿನಂದನಾ ಸಮಾರಂಭ

Share

ಭಟ್ಕಳ: ತಮ್ಮ ಬಹುಮುಖ ಪ್ರತಿಭೆಯಿಂದಾಗಿ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಯಿಂದ ಪುರಸ್ಕೃತರಾಗಿರುವ ಶ್ರೀಧರ ಶೇಟ್ ಶಿರಾಲಿಯವರಿಗೆ ಜಾಲಿ ಸರಕಾರಿ ಪ್ರೌಢಶಾಲೆಯಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಯಿತು. ಶಿಕ್ಷಕ ವೃಂದದವರು, ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಎಸ್. ಡಿ.ಎಮ್. ಸಿ ಯವರು ಪ್ರತ್ಯೇಕ ಸನ್ಮಾನವನ್ನು ನೆರವೇರಿಸಿ ಗೌರವಿಸಿದರು.
ಶಾಲಾ ಮುಖ್ಯಾಧ್ಯಾಪಕಿ ಶ್ರೀಮತಿ ರೇಣುಕಾ ನಾಯಕ ಮಾತನಾಡಿ ಶ್ರೀಧರ ಶೇಟ್ ರವರು ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಸಂಘಟನೆ, ಚಿತ್ರಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಹುಮುಖ ಪ್ರತಿಭೆಯ ಮೂಲಕ ಜನಮನ್ನಣೆ ಗಳಿಸಿದ್ದಾರೆ.ಉತ್ತಮ ಶಿಕ್ಷಕರಾಗಿಯಷ್ಟೇ ಅಲ್ಲದೆ ಕವಿಯಾಗಿ, ಸಾಹಿತಿಯಾಗಿ, ಅಂಕಣಕಾರರಾಗಿ ಅವರ ಸಾಧನೆ ಅದ್ವಿತೀಯ.ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದರಿಂದ ನಮ್ಮ ಶಾಲೆಯ ಕೀರ್ತಿಯು ಹೆಚ್ಚಿದೆ ಎಂದು ಹೇಳಿದರು.ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನಾಗರಾಜ ನಾಯ್ಕ ಮಾತನಾಡಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನಮ್ಮ ಶಾಲೆಯ ಶಿಕ್ಷಕರಿಗೆ ಲಭಿಸಿರುವುದು ನಮ್ಮ ಭಾಗ್ಯವಾಗಿದೆ.ಇಂಥ ಶಿಕ್ಷಕರ ಬಳಿ ನಮ್ಮ ವಿದ್ಯಾರ್ಥಿಗಳು ಓದುತ್ತಿರುವುದು ನಮ್ಮ ಭಾಗ್ಯ.ಇದು ಶ್ರೀಧರ ಶೇಟ್ ರವರ ಪ್ರತಿಭೆಗೆ ಸಂದ ಮುನ್ನಣೆಯಾಗಿದೆ ಎಂದರು.
ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಂಕರ ಗೊಂಡ ಮಾತನಾಡಿ ಶ್ರೀಧರ ಶೇಟ್ ರವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದರಿಂದ ನಮ್ಮೂರು ರಾಜ್ಯ ಮಟ್ಟದಲ್ಲಿ ಪ್ರಸಿದ್ಧಿಯಾಗುವ ಹಾಗೆ ಮಾಡಿದ್ದಾರೆ.ಅವರ ಸೃಜನಶೀಲತೆ ಮತ್ತು ಕ್ರಿಯಾಶೀಲತೆ ಎಲ್ಲರಿಗೂ ಮಾದರಿಯಾ ದುದು.ಅವರಿಗೆ ಮುಂದೆ ರಾಷ್ಟ್ರಪ್ರಶಸ್ತಿಯು ಲಭಿಸಲಿ ಎಂದು ಹಾರೈಸಿದರು. ಶಿಕ್ಷಕ ತಿಮ್ಮಪ್ಪ ದೇವಾಡಿಗ, ಎಸ್. ಡಿ.ಎಂ.ಸಿ ಸದಸ್ಯ ದೇವಿದಾಸ ನಾಯ್ಕ,ವಿದ್ಯಾರ್ಥಿನಿ ಸಿಂಚನಾ ನಾಯ್ಕ ಮಾತನಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಧರ ಶೇಟ್ ರವರು ತಮಗೆ ದೊರಕಿದ ಈ ಗೌರವವನ್ನು ತಮ್ಮ ಶಾಲೆಯ ಎಲ್ಲಾ ಶಿಕ್ಷಕ ವೃಂದಕ್ಕೆ ಅರ್ಪಿಸಿದರು.ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರ ಸಹಕಾರದಿಂದ ತನಗೆ ಈ ಎಲ್ಲ ಸಾಧನೆ ಮಾಡಲು ಸಾಧ್ಯವಾಯಿತು ಎಂದರು. ತಮ್ಮ ಶಾಲೆಯ ಎಲ್ಲ ಶಿಕ್ಷಕ-ಶಿಕ್ಷಕಿಯರು ಬಹಳ ಕ್ರಿಯಾಶೀಲರಾಗಿರುವುದರಿಂದ ಅವರ ಮಾರ್ಗದರ್ಶನ ಈ ಸಾಧನೆಗೆ ಸಹಕಾರಿಯಾಯಿತು ಎಂದರಲ್ಲದೆ ಶೈಕ್ಷಣಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.
ಶಿಕ್ಷಕ ಗಣೇಶ ಗೌಡ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜಯಂತಿ ನಾಯಕ ವಂದಿಸಿದರು. ಶಿಕ್ಷಕಿ ಮೋಹಿನಿ ಬಾನಾವಳಿಕರ್, ಎಸ್. ಡಿ. ಎಂ.ಸಿ ಸದಸ್ಯರಾದ ಈರಯ್ಯ ಗೊಂಡ,ರತ್ನಾ ರಾಜು ನಾಯ್ಕ,ನೇತ್ರಾವತಿ ಆಚಾರಿ
ಶಾಲಾ ಮುಖ್ಯಮಂತ್ರಿ ಸಹನಾ ನಾಯ್ಕ, ಹಳೇ ವಿದ್ಯಾರ್ಥಿ ಸಂಘದ ವಿದ್ಯಾಧರ ನಾಯ್ಕ, ಸಂತೋಷ ನಾಯ್ಕ, ಪ್ರಸನ್ನ ಗೊಂಡ ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!