ಭಟ್ಕಳ: ಶ್ರೀ ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ಶ್ರೀ ಶ್ರೀಧರ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ದಿನಾಂಕ 22 11 2025ರ ಸೋಮವಾರದಿಂದ ದಿನಾಂಕ 2 -10 -2025ರ ಗುರುವಾರದ ತನಕ ಶ್ರೀಧರ ವೀರಮಾತಾ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವವು ನಡೆಯಲಿದೆ. ಈ ಪರ್ವಕಾಲದಲ್ಲಿ ಲೋಕ ಕಲ್ಯಾಣಾರ್ಥವಾಗಿ ದೇವಿಯ ಸನ್ನಿಧಿಯಲ್ಲಿ 22-09-2025ರ ಸೋಮವಾರ ಘಟಸ್ಥಾಪನೆಯೊಂದಿಗೆ ಆರಂಭಗೊಂಡು ಪ್ರತಿದಿನ ಶ್ರೀ ದೇವಿ ಪಾರಾಯಣ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ, ಪಂಚಾಮೃತ ಅಭಿಷೇಕ, ಕುಂಕುಮರ್ಚನೆ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ಪ್ರತಿದಿನ ವಿಜಯ ದಶಮಿಯoದು ನವಚಂಡಿಕಾ ಹೋಮ, ಕುಮಾರಿಕಾ ಬಾಗಿನ ಪೂಜೆ, ದಂಪತಿ ಬಾಗಿನ ಮುಂತಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸಿ , ಶ್ರೀದೇವಿಯ ಮುಡಿಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ದೇವಾಲಯದ ಧರ್ಮದರ್ಶಿಗಳು ಕೊರಿದ್ದಾರೆ.
22-09-2025ರ ಸೋಮವಾರ ದಿಂದ 02-10-2025 ರ ವರೆಗೆ ಪ್ರತಿದಿನ ವಿವಿಧ ಪೂಜಾ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ,1 ಗಂಟೆಯಿಂದ ಅನ್ನ ಸಂತರ್ಪಣೆ.
ಸಾಯಂಕಾಲ 5. 30ರಿಂದ ಪೂಜಾ ಪ್ರಾರಂಭ, ರಾತ್ರಿ 8.30ಕ್ಕೆ ಮಹಾಪೂಜೆ.
29-09-2025 – ಸೋಮವಾರ – ಶಾರದಾ ಸ್ಥಾಪನೆ, ಆಯುಧ ಪೂಜೆ, ಗಜ್ವಾರ ಪೂಜೆ, ಕದಿರು ಪೂಜೆ (ಹೊಸ್ತು)
01-10-2025 ಬುಧವಾರ – ಮಹಾನವಮಿ
02-10-2025 ಗುರುವಾರ – ನವ ಚಂಡಿಕಾ ಹೋಮ,ಮಹಾಪೂಜೆ, ಕಲಶ ವಿಸರ್ಜನೆ, ಅನ್ನ ಸಂತರ್ಪಣೆ.
ಶ್ರೀದೇವಿಯ ಸನ್ನಿಧಿಯಲ್ಲಿ ನವರಾತ್ರಿಯ ಪರ್ವಕಾಲದಲ್ಲಿ ನಡೆಯುವ ವಿಶೇಷ ಸೇವೆಗಳು ನಡೆಯಲಿದ್ದು ಹೆಚ್ಚಿನ ಮಾಹಿತಿಗೆ ಭಕ್ತಾದಿಗಳು 8310093298 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಧರ್ಮದರ್ಶಿಗಳು ಕೊರಿದ್ದಾರೆ.
ವರದಿ ಉಲ್ಲಾಸ ಶಾನಭಾಗ್