
ನೂತನವಾಗಿ ಪ್ರಾರಂಭವಾದ “ಕರ್ನಾಟಕ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ. ಭಟ್ಕಳ”ದಲ್ಲಿ ಸಮವಸ್ತ್ರ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಯಿತು.
ಸಭಾಧ್ಯಕ್ಷರಾಗಿ ಶ್ರೀ ಶಂಸುದ್ದಿನ್ ಪ್ರಭಾರಿ ಮುಖ್ಯಾಧ್ಯಾಪಕರು, ಪ್ರಾಸ್ತಾವಿಕ ಮಾತನಾಡಿ ಮೌಲಾನಾ ಆಜಾದ್ ಮಾದರಿ ಶಾಲೆಯು, ಪೂರ್ವ ಪ್ರಾಥಮಿಕ ಎಲ್ ಕೆ ಜಿ ದಿಂದ ಪದವಿ ಪೂರ್ವ ದವರೆಗೆ ತರಗತಿಯನ್ನು ಉನ್ನತೀಕರಿಸಿದ ಬಗ್ಗೆ ತಿಳಿಸಿ, ಪ್ರಸ್ತುತ ವರ್ಷ ಎಲ್ಕೆಜಿ ಮತ್ತು ಆರನೇ ತರಗತಿ ಪ್ರಾರಂಭವಾಗಿರುವ ಬಗ್ಗೆ ತಿಳಿಸಿದರು, ಮುಖ್ಯ ಅತಿಥಿಗಳಾಗಿ ಪುರಸಭಾ ಕೌನ್ಸಿಲರ್ ಶ್ರೀಮತಿ ಫರ್ಜಾನಾ ಮೇಡಂ, ಉರ್ದ ಸಿ ಆರ್ ಪಿಗಳಾದ ಶ್ರೀಮತಿ ಮುನಿರಾ ಖಾನಂ ರವರು ಮಾತನಾಡಿ ಶಾಲೆಯಲ್ಲಿ ನೀಡುತ್ತಿರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು,

ಇಸ್ಲಾಮಿಯ ಆಂಗ್ಲೋ ಉರ್ದು ಹೈಸ್ಕೂಲ್ ಭಟ್ಕಳದ ಶಿಕ್ಷಕರಾದ ಶ್ರೀ ಮೈದಿನ್ ಕತ್ತಾಲಿ ವಿದ್ಯಾರ್ಥಿಗಳ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಸೂಚಿಸಿದರು. ಎಂಐಸಿ ಶ್ರೀ ಅನ್ಸಾರ್, ಸ್ವಚ್ಛ ಭಾರತ ಅಭಿಯಾನ ನೋಡಲ್ ಅಧಿಕಾರಿಗಳಾದ ಮಹಾಲೇ ಮೇಡಂ, ಭಟ್ಕಳ ತಾಲೂಕಿನಲ್ಲಿ ಸ್ವಚ್ಛ ಅಭಿಯಾನದ ಬಗ್ಗೆ ಅರಿವು ಮೂಡಿಸಿದರು. ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಶಿಕ್ಷಣದ ಮಹತ್ವದ ಬಗ್ಗೆ ವಿವರಿಸಿದರು, ಎಲ್ಲಾ ಪಾಲಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದು, ಶ್ರೀಮತಿ ತಂಜಿಲಾ ಮೇಡಂ ಕಾರ್ಯಕ್ರಮ ನಿರೂಪಣೆ ಮಾಡಿದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.