ಕಾನಿಪ ಧ್ವನಿ ಸಂಘಟನೆ ವತಿಯಿಂದ ಕಳೆದ ತಿಂಗಳು ನಿಧನರಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಗೌರಿಬಿದನೂರು ನಗರದ ಇಂದು ಸಂಜೆ ದಿನಪತ್ರಿಕೆಯ ಹಿರಿಯ ಪತ್ರಕರ್ತರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಸಿದ್ದಪ್ಪ ರವರ ಕುಟುಂಬಕ್ಕೆ 10,000 ( ಹತ್ತು ಸಾವಿರ ರೂಗಳ) ರೂಗಳ ಸಹಾಯ ಧನವನ್ನು ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಹಾಗೂ ಪದಾಧಿಕಾರಿಗಳಿಂದ ನೀಡುವಿಕೆ.
ಕಳೆದ ತಿಂಗಳು ನಿಧನರಾಗಿದ್ದ ಗೌರಿಬಿದನೂರಿನ ಇಂದು ಸಂಜೆ ದಿನ ಪತ್ರಿಕೆಯ ಹಿರಿಯ ವರದಿಗಾರರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಸಿದ್ದಪ್ಪ ನವರು ಈ ಹಿಂದೆ ಅನೇಕ ನಾಡಿನ ದೊಡ್ಡ ಪತ್ರಿಕೆಗಳಾದ ಹೊಸದಿಗಂತ,ಸಾಕ್ಷಿ ತೆಲುಗು ದಿನ ಪತ್ರಿಕೆ,ಈ ಸಂಜೆ ದಿನ ಪತ್ರಿಕೆ, ಪಾಲಾರ್ ಪತ್ರಿಕೆ, ಕೋಲಾರ ದಿನ ಪತ್ರಿಕೆ,ಭಾರತ ವೈಭವ ದಿನ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ಇಂದು ಸಂಜೆ ದಿನ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀಯುತರಿಗೆ ಇತ್ತೀಚೆಗೆ ಕಾನಿಪ ಧ್ವನಿ ರಾಜ್ಯ ಸಮ್ಮೇಳನದಲ್ಲಿ ಕರ್ನಾಟಕ ಮಾಧ್ಯಮ ರತ್ನ ರಾಜ್ಯ ಪ್ರಶಸ್ತಿಯನ್ನು ಸುಪ್ರೀಂ ಕೋರ್ಟನ ನಿವೃತ್ತ ನ್ಯಾಯಾಧೀಶರಾದ ಮಾನ್ಯ ಸಂತೋಷ ಹೆಗಡೆ ಯವರು ವಿತರಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾ, 65 ವರ್ಷಗಳನ್ನು ಪೂರೈಸಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಿದ್ದಪ್ಪನವರ ನಮ್ಮ ಕಾನಿಪ ಧ್ವನಿ ಗೌರಿಬಿದನೂರಿನ ಪದಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಅವರ ಅಗಲಿಕೆಯಿಂದ ನಮ್ಮ ಸಂಘಟನೆಗೆ ಹಾಗೂ ಪತ್ರಿಕಾ ಲೋಕಕ್ಕೆ ಅಪಾರ ನೋವುಂಟಾಗಿದ್ದು, ಇಂದು ಸಂಜೆ 6.30 ಕ್ಕೆ ಗೌರಿಬಿದನೂರಿನ ನೆಹರೂಜೀ ಕಾಲೋನಿಯಲ್ಲಿರುವ ಅವರ ನಿವಾಸಕ್ಕೆ ತೆರಳಿದಂತ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ,ಪದಾಧಿಕಾರಿಗಳಾದ ಮುದ್ದುಕೃಷ್ಣ, ಪ್ರಸನ್ನ,ಉದಯಕುಮಾರ್, ಗಂಗಾಧರ್, ಮಂಜುನಾಥ ಹಾಗೂ ಡಾ.ಮೋಹನ್ ರವರು ಸೇರಿ ಹಿರಿಯ ಪತ್ರಕರ್ತರಾದ ದಿವಂಗತ ಸಿದ್ದಪ್ಪ ನವರ ಶ್ರೀಮತಿ ಲಕ್ಷ್ಮಿ ನರಸಮ್ಮ ನವರಿಗೆ ಹತ್ತು ಸಾವಿರ ರೂಗಳ ಸಹಾಯ ಧನವನ್ನು ನೀಡಿದರು.