ಗಣಪತಿ ಹಬ್ಬದ ಸಂಭ್ರಮದಲ್ಲಿ ಭಟ್ಕಳ ನಗರ ಠಾಣೆಯ ಪೊಲೀಸರು ಈ ಬಾರಿ ವಿಶಿಷ್ಟ ಉಡುಗೆ

Share

ಭಟ್ಕಳ: ಗಣಪತಿ ಹಬ್ಬದ ಸಂಭ್ರಮದಲ್ಲಿ ಭಟ್ಕಳ ನಗರ ಠಾಣೆಯ ಪೊಲೀಸರು ಈ ಬಾರಿ ವಿಶಿಷ್ಟ ಉಡುಗೆ ಧರಿಸಿದ್ದರು. ಸಾಮಾನ್ಯವಾಗಿ ಖಾಕಿ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ, ಸಿಪಿಐ ದಿವಾಕರ ಪಿ.ಎಂ. ಅವರ ನೇತೃತ್ವದಲ್ಲಿ, ಸಾಂಪ್ರದಾಯಿಕ ಉಡುಗೆಯಲ್ಲಿ ದೇವರ ಪೂಜಾಕಾರ್ಯದಲ್ಲಿ ಪಾಲ್ಗೊಂಡು ಭಕ್ತರ ಮನಸೆಳೆದರು.
ನಗರ ಠಾಣೆ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಗೆ ನಾಲ್ಕನೇ ದಿನದ ಮಹಾಪೂಜೆಯ ವೇಳೆ, ಪುರುಷ ಪೊಲೀಸರು ಪಂಚೆ–ಶಾಲು ತೊಟ್ಟು, ಮಹಿಳಾ ಪೊಲೀಸ್ ಸಿಬ್ಬಂದಿ ಧಾರ್ಮಿಕ ಪರಂಪರೆಯ ಉಡುಗೆಯಲ್ಲಿ ಹಾಜರಾದರು.
ಪೊಲೀಸರ ಬದಲಾದ ಉಡುಗೆ ಧರಿಸಿದ ಕಂಡ ಭಕ್ತರು ಆಶ್ಚರ್ಯ ವ್ಯಕ್ತಪಡಿಸಿ – “ಪೊಲೀಸರು ಕೂಡ ನಮ್ಮಂತೆಯೇ ಹಬ್ಬದ ಪಾಲುಗಾರರಾಗಿದ್ದಾರೆ” ಎಂದು ಹರ್ಷಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಮಹೇಶ್ ಎಂ.ಕೆ. ಭಕ್ತರಿಗೆ ಹಾಗೂ ಸಿಬ್ಬಂದಿಗಳಿಗೆ ತಿಂಡಿ–ಪ್ರಸಾದ ವಿತರಿಸಿದರು.
ಈ ಬಾರಿ ಪೊಲೀಸರ ಬದಲಾದ ಉಡುಗೆ ಧರಿಸಿ ಭಟ್ಕಳದಲ್ಲಿ ಗಣಪತಿ ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡಿದೆ.
ವರದಿ: ಉಲ್ಲಾಸ್ ಶಾನಭಾಗ್ ಶಿರಾಲಿ.

Leave a Reply

Your email address will not be published. Required fields are marked *

error: Content is protected !!