
ಭಟ್ಕಳ: ಆರ್.ವಿ.ಕಾಲೇಜು ಬೆಂಗಳೂರು ಹಾಗೂ ವಿ.ಆರ್.ಎಲ್ ಸಮೂಹ ಇದರ ಸಹಯೋಗದೊಂದಿಗೆ ಪ್ರಣವ್ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕ ಎಂಬ ಕಿಟ್ ಅಭಿಯಾನದ ಮುಖಾಂತರ ಕರ್ನಾಟಕದ ಅನೇಕ ಸರ್ಕಾರಿ ಶಾಲೆಗಳಿಗೆ ಸುಮಾರು ಏಳು ಸಾವಿರಕ್ಕೂ ಹೆಚ್ಚು ಪುಸ್ತಕ ಕಿಟ್ ನ್ನು 2021 ರಿಂದ ನೀಡುತ್ತಾ ಬಂದಿದ್ದಾರೆ.
ಅದೇ ರೀತಿಯಾಗಿ ಭಟ್ಕಳ ತಾಲೂಕಿನ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪ್ರಣವ್ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ಕಿಟ್ ನ್ನು ವಿತರಿಸಲಾಯಿತು ಅತ್ಯುತ್ತಮ ಗುಣಮಟ್ಟದ ಪುಸ್ತಕ ಕಿಟ್ ಮಕ್ಕಳ ಗುಣಾತ್ಮಕ ಕಲಿಕೆಗೆ ಪೂರಕವಾಗಿದೆ.
ಈ ಸಂದರ್ಭದಲ್ಲಿ ಪ್ರಣವ್ ಫೌಂಡೇಶನ್ ರವರ ಸಮಾಜಮುಖಿ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮಚಂದ್ರ ದೇವಡಿಗ ನುಡಿದು ಪ್ರಣವ್ ಫೌಂಡೇಷನ್ ಗೆ ಧನ್ಯವಾದ ಅರ್ಪಿಸಿದರು. ಶಾಲೆಯ ಮುಖ್ಯಾಧ್ಯಾಪಕ ಜನಾರ್ಧನ ಮೊಗೇರ ಈ ಪುಸ್ತಕ ಕಿಟ್ ನಮ್ಮ ಶಾಲೆಗೆ ಬರಲು ಕಾರಣೀಕರ್ತರು ಹಾಗೂ ಸರ್ಕಾರಿ ಶಾಲೆ ಬಗ್ಗೆ ಅಪಾರ ಕಾಳಜಿ ಇರುವ ವೆಂಕಟ್ರಮಣ ನಾಯ್ಕ ಇವರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಪಾಲಕ ಪೋಷಕ ಪ್ರತಿನಿಧಿ ಶ್ರೀಮತಿ ಸುಶೀಲಾ ಮೊಗೇರ ಉಪಸ್ಥಿತರಿದ್ದರು. ಹಾಗೂ ಶಾಲೆಯ ಸಹ ಶಿಕ್ಷಕಿಯರು ಪುಸ್ತಕ ಕಿಟ್ ವಿತರಣೆ ನಿರ್ವಹಿಸಿದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.