
13ನೇ ಶತಮಾನ ದಲ್ಲಿಮಧ್ವಾಚಾರ್ಯರು ಸ್ಥಾಪಿಸಿದ ಮಠದ 550ನೇ ಸಂಭ್ರಮಕ್ಕೆ ಪ್ರಧಾನಮಂತ್ರಿಯವರಿಗೆ ಆಹ್ವಾನ.
ಗೋವಾ ರಾಜ್ಯದ ಕಾಣಕೋನದಲ್ಲಿರುವ ಶ್ರೀ ಸಂಸ್ಥಾನ ಪರ್ತಗಾಳಿ ಜೀವೋತ್ತಮ ಮಠದಲ್ಲಿ ನಡೆಯುವ 550ನೇವಾರ್ಷಿಕೋತ್ಸವ ಸಂಭ್ರಮಕ್ಕೆ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆಆಹ್ವಾನಪತ್ರಿಕೆ ದೆಹಲಿಯಲ್ಲಿ ನೀಡಲಾಯಿತು.
ಈ ಸುಸಂದರ್ಭದಲ್ಲಿ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಪರ್ತಗಾಳಿ ಜೀವೋತ್ತಮ ಮಠದ ಅಧ್ಯಕ್ಷರಾದ ಶ್ರೀನಿವಾಸ್ ಡೆಂಪೋ, ಉಪಾಧ್ಯಕ್ಷರಾದ ಆರ್. ಆರ್. ಕಾಮತ್ ಆಹ್ವಾನ ಪತ್ರವನ್ನು ನೀಡಿದರು.
13ನೇಶತಮಾನದಲ್ಲಿ ಮಧ್ವಾಚಾರ್ಯರು ಈ ಮಠವನ್ನು ಸ್ಥಾಪಿಸಿದ್ದು ಈ ಮಠದ ಐತಿಹಾಸಿಕ ಸಂಭ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಪ್ರೋತ್ಸಾಹ ಮತ್ತು ಬೆಂಬಲಕ್ಕಾಗಿ ಡಾ. ಪ್ರಮೋದ್ ಸಾವಂತ್ ಕೃತಜ್ಞತೆ ಸಲ್ಲಿಸಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.