ಕೂಡ್ಲಿಗಿ : ಪ ಪಂ ವತಿಯಿಂದ ಜನ ಗಣತಿ , ಹಾಗೂ ನೈರ್ಮಲ್ಯತೆ ಜಾಗೃತಿ ಅಭಿಯಾನ-ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣ ಪಂಚಾಯ್ತಿ ವತಿಯಿಂದ ಪಟ್ಟಣ ವ್ಯಾಪ್ತಿಯಲ್ಲಿ , ಜನಗಣತಿ ಹಾಗೂ ಸ್ವಚ್ಚತೆ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಕಳದ ತಿಂಗಳುಗಳಿಂದ ಪಟ್ಟಣದಾದ್ಯಂತ ನಿಯೋಜಿತ ಸಿಬ್ಬಂದಿ ಸಂಚರಿಸುತ್ತಿದ್ದು , ಪ್ರತಿ ಮನೆ ಮನೆಗೆ ತೆರಳಿ ಮನೆಯಲ್ಲಿರುವ ಸದಸ್ಯರ ಮಾಹಿತಿ ಪಡೆಯುತ್ತಿದ್ದಾರೆ. ಮನೆಯವರಿಂದ ಆಧಾರ ಕಾರ್ಡ್ ಪಡೆದು ವಿಳಾಸ ಖಚಿತ ಪಡಿಸಿಕೊಂಡು , ಅವರಿಂದ ಸಾಕಷ್ಟು ಮಾಹಿತಿ ಪಡೆದು ಅದನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಮತ್ತು ಪ್ರತಿ ಮನೆಯವರಲ್ಲಿ ಕಸದ ಗಾಡಿ ಸಂಚರಿಸುವ ಕುರಿತು ವಿಚಾರಣೆ ನಡೆಸುತ್ತಿದ್ದು , ಹಸಿ ಕಸ ಒಣ ಕಸ ವಿಂಗಡಿಸಿ ಹಾಕಬೇಕು ಹಾಗೂ ಮನೆ ಒಳಗೂ ಸುತ್ತಲಿನ ವಾತಾವರಣದಲ್ಲಿ. ಕಸ ಹರಡದಂತೆ ಜಾಗ್ರತೆ ವಹಸುವಂತೆ ಸೂಚಿಸಲಾಗುತ್ತಿದೆ , ಮತ್ತು ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಚತೆ ಜೊತೆ ಪರಿಸರ ಕಾಳಜಿ ಹೊಂದಿ ನೈರ್ಮಲ್ಯತೆ ಕಾಪಾಡುವಂತೆ ಮನವಿ ಮಾಡಲಾಗುತ್ತಿದೆ. ಸಂಬಂಧಿಸಿದಂತೆ ಸಿಬ್ಬಂದಿಯವರಾದ ಶ್ರೀಮತಿ ನಂದಿನಿ ಪಾಂಡುರವರು ಮಾತನಾಡಿ , ಕಳೆದ ತಿಂಗಳುಗಳಿಂದ ಜನಗಣತಿ ಹಾಗೂ ಜಾಗ್ರತೆ ಅಭಿಯಾನ ಆರಂಭಗೊಂಡಿದ್ದು. ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಇಬ್ಬರು ಸಿಬ್ಬಂದಿ ಕರ್ಥವ್ಯ ನಿರ್ವಹಿಸುತ್ತಿದ್ದು , ಎಲ್ಲಾ ವಾರ್ಡಗಳಲ್ಲಿನ ಪ್ರತಿಯೊಂದು ಮನೆ ಮನೆಗೆ ತೆರಳಿ ಸದಸ್ಯರ ಮಾಹಿತಿ ಪಡೆಯಲಾಗುತ್ತಿದೆ. ಜೊತೆಗೆ ಸ್ವಚ್ಚತೆ ಬಗ್ಗೆ ಜಾಗ್ರತೆ ವಹಿಸುವಂತೆ ತಿಳಿಹೇಳ ಲಾಗುತ್ತಿದ್ದು , ಪ ಪಂ ಕಸದ ಗಾಡಿಯ ಸದ್ಭಳಕೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು. ದಯಮಾಡಿ ನಾಗರೀಕರು ಸ್ವಚ್ಚತೆ ಬಗ್ಗೆ ಕಾಳಜಿ ವಹಿಸಿ ಪಪಂ ಸ್ವಚ್ಚತಾ ಸಿಬ್ಬಂದಿಯೊಂದಿಗೆ ಸ್ಪಂಧಿಸಕಿದೆ , ತಾವು ಪಟ್ಟಣದ ಪ್ರತಿಯೊಂದು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದು. ಕಾರಣ ಈ ಸಂದರ್ಭದಲ್ಲಿ ನಾಗರೀಕರು , ತಮ್ಮೊಂದಿಗೆ ಅಗತ್ಯ ಮಾಹಿತಿ ಅಂಚಿಕೊಳ್ಳುವ ಮೂಲಕ ಸಹಕರಿಸಬೇಕಿದೆ. ಮತ್ತು ಪ ಪಂ ಸಿಬ್ಬಂದಿಯವರೊಂದಿಗೆ ಸೌಹಾರ್ಧತೆಯಿಂದ ವರ್ತಿಸುವಬೇಕು , ಹಾಗೂ ವಾತಾವರಣದಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳಬೇಕೆಂದು ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.
✍ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
