ಭಟ್ಕಳ ತಾಲೂಕಿನ ಅಳುವೆ ಕೊಡಿ ತೀರದಲ್ಲಿ ನಿನ್ನೆ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಓರ್ವ ಮೀನುಗಾರ ಶವವಾಗಿ ಪತ್ತೆಯಾಗಿದ್ದಾನೆ
ಇಂದು ಮಧ್ಯಾಹ್ನ ಹೊನ್ನೆಗದ್ದೆ ಕಡಲ ತೀರಕ್ಕೆ ಮೃತ ದೇಹ ತೇಲಿ ಬಂದಿದ್ದು ಸ್ಥಳೀಯ ಮೀನುಗಾರರು ಮೇಲಕೆತ್ತಿದ್ದಾರೆ. ಈ ಮೃತ ದೇಹ ಜಾಲಿಯ ರಾಮಕೃಷ್ಣ ಮೊಗೆರ್ ಇವರದ್ದಾಗಿದೆ.
ಬೆಳಿಗ್ಗೆಯಿಂದಲೇ ಮಂಡಳಿ ಹಾಗೂ ಅಳವೇ ಕೋಡಿ ಸಮುದ್ರದಲ್ಲಿ ಚಿಕ್ಕ ಪಾತಿದೋಣಿ ಮತ್ತು ನಾಡ ದೋಣಿಗಳು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇನ್ನು ಮೂವರು ಪತ್ತೆಯಾಗಬೇಕಿದ್ದು ಶೋಧ ಕಾರ್ಯ ಮುಂದುವರೆದಿದೆ ಸತೀಶ್ , ಗಣೇಶ್ ಹಾಗೂ ನಿಶ್ಚಿತ್ ಮೊಗೆರ್ ಅವರ ಮೃತ ದೇಹ ಸಿಗಬೇಕಾಗಿದೆ.
ಮೀನುಗಾರಿಕಾ ಸಚಿವರಾದ ಶ್ರೀಮಂಕಾಳ ವೈದ್ಯರು ಮುಂಡಳ್ಳಿ ಹಾಗೂ ಅಳುವೆ ಕೋಡಿ ಪ್ರದೇಶಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಪರಿಶೀಲಿಸಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ
ಭಟ್ಕಳ ತಾಲೂಕಿನ ಅಳುವೆ ಕೊಡಿ ತೀರದಲ್ಲಿ ನಿನ್ನೆ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಓರ್ವ ಮೀನುಗಾರ ಶವವಾಗಿ ಪತ್ತೆ
