ಭಟ್ಕಳದ ಗ್ರಾಮೀಣ ಪೊಲೀಸ್ ಠಾಣ ವತಿಯಿಂದ ಮನೆ ಮನೆಗೆ ಪೊಲೀಸ್

Share

 ಹೌದು ಸ್ನೇಹಿತರೆ ಇಂದು ಭಟ್ಕಳದ ಗ್ರಾಮೀಣ ಪೊಲೀಸ್ ಠಾಣ ವತಿಯಿಂದ ಮನೆ ಮನೆಗೂ ಪೋಲಿಸ್ ಎಂಬ ವಿನೂತನ ಅಭಿಯಾನಕ್ಕೆ ಶಿರಾಲಿಯಲ್ಲಿ ಚಾಲನೆ ದೊರೆಯಿತು ಈ ಅಭಿಯಾನವನ್ನು ಭಟ್ಕಳದ ತಹಶೀಲ್ದಾರರಾದ ನಾಗೇಂದ್ರ ಕೋಲ ಶೆಟ್ಟಿ ಯವರು ಶಿರಾಲಿಯ ಗ್ರಾಂ ಗ್ರಾಮ ಪಂಚಾಯತ್ ಆವರಣದಲ್ಲಿ ಹಸಿರು ಬಾವುಟ ಹಾರಿಸುವುದರೊಂದಿಗೆ ಚಾಲನೆ ನೀಡಿದರು ತದನಂತರ ಅವರ ಮಾತನಾಡಿ,, ನಿಜವಾಗ್ಲೂ ಇದೊಂದು ಅದ್ಭುತವಾದ ಮುಂದಾಲೋಚನೆ ಇರುವಂತ ಕಾರ್ಯಕ್ರಮ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಇರತಕ್ಕಂತ ವಾತಾವರಣ ಇರಬೇಕಾದರೆ ಅದಕ್ಕೆ ಪೊಲೀಸ್ ಡಿಪಾರ್ಟ್ಮೆಂಟ್ ಅವಶ್ಯಕತೆ ತುಂಬಾ ಇರುತ್ತೆ. ಅದಕ್ಕೆ ಜನರ ಕಡೆಯಿಂದನು ಸಹಾಯದ ಅವಶ್ಯಕತೆ ಇರುತ್ತದೆ. 50 ಮನೆಗೆ ಒಂದು ಕ್ಲಸ್ಟರ್ ಮಾಡಿರುತ್ತಾರೆ ನಿಮಗೆ ಯಾವುದೇ ತೊಂದರೆ ಇದ್ದರು ಮತ್ತು ಸಮಸ್ಯೆ ಇದ್ದರೂ ಪರಿಹಾರ ಮಾಡಲು ಪೊಲೀಸರು ಸಹಾಯ ಮಾಡುತ್ತಾರೆ. ಪೊಲೀಸರು ಬಂದಾಗ ಜನರು ಸಹಕಾರ ನೀಡಬೇಕು ಅವರು ಬಂದಾಗ ತಮ್ಮಲ್ಲಿರುವ ಮಾಹಿತಿಗಳನ್ನು ಕೇಳಿದಾಗ ಮಾಹಿತಿಗಳನ್ನು ನೀಡಬೇಕಾಗುತ್ತದೆ ಆ ಮಾಹಿತಿ ಪೊಲೀಸರ ಬಳಿ ಇದ್ದಾಗ ಮುಂದೇನಾದರೂ ತೊಂದರೆಯಾದಾಗ ಅವರಿಗೆ ಸಹಾಯವಾಗುತ್ತದೆ ಮತ್ತು ನಿಮಗೆ ನೆರವು ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು. ಯಾವುದೇ ಡಿಪಾರ್ಟ್ಮೆಂಟ್ ಬಗ್ಗೆನು ಸ್ವಲ್ಪ ಸಮಸ್ಯೆ ಇದ್ದರೆ ಪೊಲೀಸ್ ಡಿಪಾರ್ಟ್ಮೆಂಟ್ಗು ಹೋಗಬಹುದು ಅಥವಾ ಬೇರೆ ಡಿಪಾರ್ಟ್ಮೆಂಟ್ ಗಳು ಹೋಗಿ ಸಮಸ್ಯೆಗಳನ್ನ ಹೇಳಿ ಅದನ್ನು ಪರಿಹಾರ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು

ನಂತರ ಮಾತನಾಡಿದ ಗ್ರಾಮೀಣ ಪೊಲೀಸ್ ಠಾಣಾ ಸಿಪಿಐ ಮಂಜುನಾಥ್ ರೆಡ್ಡಿ ಮಾತನಾಡಿ,,  ಸಾರ್ವಜನಿಕರು ಮನೆಯಲ್ಲಿ ಲಕ್ಷ ಬೆಲೆಯ ಬಂಗಾರವನ್ನು ಇಟ್ಟು ಮನೆಯ ಭದ್ರತೆಯ ಕಡೆಗೆ ಗಮನಹರಿಸುವದಿಲ್ಲ ಮನೆಯೊಳಗೇ 40 ಲಕ್ಷದ ಬಂಗಾರವನ್ನು ಇಟ್ಟು ಮನೆಯ ಬಾಗಿಲಿಗೆ ರೂ. 50 ಬೀಗ ಹಾಗೂ ಚಿಲಕವನ್ನು ಹಾಕುತ್ತಾರೆ ಕಳ್ಳರಿಗೆ ಇದು ರಹಧಾರಿ ಮಾಡಿದಂತೆ ಅಂತ ಬೀಗವನ್ನು ಬಲವಾಗಿ ಎಳೆದರೆ ಕೈಯಲ್ಲಿ ಬರುತ್ತದೆ ಹೀಗಾಗಿ ಕಳ್ಳರು ಕಳ್ಳತನ ಮಾಡಲು ಸುಲಭವಾಗುತ್ತದೆ ಎಂದು ಹೇಳಿದರು. ಒಂದು ಮನೆಯಲ್ಲಿ ದೊಡ್ಡ ಮೊತ್ತದ ಬಂಗಾರ ಅಥವಾ ಹಣ ಕಳ್ಳತನವಾದರೆ ಆ ಮನೆ ಆರ್ಥಿಕವಾಗಿ ಎಷ್ಟು ಹಿಂದೆ ಹಿಂದಕ್ಕೆ ಹೋಗುತ್ತದೆ ಎಂದು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಹೀಗಾಗಿ ಸಾರ್ವಜನಿಕರು ಎಚ್ಚೆತ್ತುಕೊಂಡು ಮನೆಯ ಭದ್ರತೆ ಕಡೆಗೆ ಗಮನಹರಿಸಬೇಕು ಎಂದು ಹೇಳಿದರು

       ಈ ಸಂದರ್ಭದಲ್ಲಿ ಶಿರಾಲಿ ಗ್ರಾಮದ ಸಾರ್ವಜನಿಕರು 

ಹಾಗೂ ಭಟ್ಕಳ ಮುರುಡೇಶ್ವರ ಠಾಣೆಯ ಪಿಎಸ್ಐ ಸಿಬ್ಬಂದಿ ವರ್ಗದವರು ಉಪಸಿದ್ಧರಿದ್ದರು

Leave a Reply

Your email address will not be published. Required fields are marked *

error: Content is protected !!