ವಿಜಯನಗರ ಜಿಲ್ಲೆ ಕೊಟ್ಟೂರು : ಪಟ್ಟಣದ ಇಂದು ಪದವಿ ಪೂರ್ವ ಕಾಲೇಜ್ ನಲ್ಲಿ , ಭಾರೀ ಅಕ್ರಮ ಅವ್ಯವಹಾರಗಳು ಜರುಗಿದ್ದು , ಹಾಗೂ ನಿಯಮ ಭಾಹಿರ ಚಟುವಟಿಕೆಗಳು ನೆಡೆಯುತ್ತಿವೆ ಎಂದು ಆರೋಪಿಸಿ. ಜು3 ರಂದು ವಿವಿದ ಪ್ರಗತಿ ಪರ ಸಂಘಟನೆಗಳಿಂದ , ಸೂಕ್ತ ಕಾನೂನು ರೀತ್ಯ ಶಿಸ್ತು ಕ್ರಮಕ್ಕಾಗಿ ಒತ್ತಾಯಿಸಿ. ತಾಲೂಕು ಕಚೇರಿ ಅವರಣದಲ್ಲಿ , ಪ್ರತಿಭಟನೆ ಮಾಡಿರುವ ಘಟನೆ ಜರುಗಿದೆ. ಇಂದು ಕಾಲೇಜ್ ವಿರುಧ್ದ ತಾಲೂಕಿನ ಪ್ರಗತಿ ಪರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ , ನೊಂದವರಿಂದ ತಾಲೂಕು ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಾನೂನು ರೀತ್ಯ ಅಗತ್ಯ ಕ್ರಮಕ್ಕೆ ಒತ್ತಾಯಿಸಿ , ಪ್ರತಿಭಟನಾಕಾರರು ತಹಶಿಲ್ದಾರರಿಗೆ ಹಕ್ಕೊತ್ತಾಯ ಪತ್ರ ನೀಡಿದರು. ಕೊಟ್ಟೂರು ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ, ಗುಡಿಯಾರ ಮಲ್ಲಿಕಾರ್ಜುನ. ಅಖಿಲ ಕರ್ನಾಟಕ ಕೀಸಾನ್ ಜಾಗೃತ ಸಂಘ , ಜಿಲ್ಲಾ ಉಪಾದ್ಯಕ್ಷ ಜಂಬೂರು ಮರುಳಸಿದ್ದಪ್ಪ. ಡಿಎಸ್ಎಸ್ ಮುಖಂಡರಾದ ಬಿ ಮರಿಸ್ವಾಮಿ, ಕಾರ್ಮಿಕರ ಹೋರಾಟಗಾರರಾದ ವಕೀಲರಾದ ಸಿ.ವಿರುಪಾಕ್ಷಪ್ಪ, ಲಿಬ್ರೇಶನ್ ಪಕ್ಷದ ಜಿಲ್ಲಾ ಸದಸ್ಯ ಬಾಲಗಂಗಾಧರ , ತಾಲೂಕು ಕಾರ್ಯದರ್ಶಿ ಕೆ.ಅಜ್ಜಪ್ಪ ಸೇರಿದಂತೆ ಮತ್ತಿತರರು ಮಾತನಾಡಿದರು. ಇಂದು ಕಾಲೇಜ್ ನಲ್ಲಿ ಈವರೆಗೆ ಆಗಿರುವ ಭಾರೀ ಅವ್ಯವಹಾರಗಳು , ಹತ್ತಾರು ಹಗರಣಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕೆಂದು. ಪ್ರತಿಭಟನೆಕಾರರು ಸರ್ಕಾರಕ್ಕೆ ತಮ್ಮ ಹಕ್ಕೊತ್ತಾಯ ಪತ್ರವನ್ನು , ಕೊಟ್ಟೂರು ಉಪತಹಶೀಲ್ದಾರವರ ಮೂಲಕ ಒತ್ತಾಯಿಸಿದ್ದಾರೆ. ಪ್ರತಿಭಟಿನೆ ಸಂದರ್ಭದಲ್ಲಿ ಕೊಟ್ಟೂರು ತಾಲೂಕಿನ , ಅನೇಕ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಸದಸ್ಯರು ವಕೀಲರು ಹೋರಾಟಗಾರರು ಭಾಗವಹಿಸಿದ್ದರು.
*ಕೊಟ್ಟೂರು: ಇಂದು ಕಾಲೇಜ್ ನಲ್ಲಿ ಭಾರೀ ಅಕ್ರಮ ಅವ್ಯವಹಾರ ಆರೊಪ – ಪ್ರಗತಿ ಪರ ಸಂಘಟನೆಗಳಿಂದ ಪ್ರತಿಭಟನೆ*
