*ಕೂಡ್ಲಿಗಿ ಮೊಹರಾಮ್ ಶಾಂತಿ ಸಭೆ : ಹಿರಿಯರ ನೇತೃತ್ವ, ಕಿಡಿ ಗೇಡಿಗಳ ನಿಯಂತ್ರಣವಿದ್ದಲ್ಲಿ ಸಕಲವೂ ಕ್ಷೇಮ – DYSP ಮಲ್ಲೇಶಪ್ಪ ದೊಡ್ಡಮನೆ*

Share

 ಕೂಡ್ಲಿಗಿ : ಕೂಡ್ಲಿಗಿ ಪೊಲೀಸ್ ಉಪವಿಭಾಗ , ಕೂಡ್ಲಿಗಿ ವೃತ್ತ ಸ್ಥಳೀಯ ಪೊಲೀಸ್ ಠಾಣೆ ಹಾಗೂ ವಿವಿದ ಸಮುದಾಯಗಳ ಸಹಯೋಗದಲ್ಲಿ. ಪಟ್ಟಣದ ಪ್ರವಾಸಿ ಮಂದಿರದಲ್ಲಿ , ಜು2ರಂದು ಮೊಹರಾಮ್ ಹಬ್ಬದ ಶಾಂತಿ ಸಭೆ ಜರುಗಿತು. ಡಿವೈಎಸ್ಪಿ ಮಲ್ಲೇಶಪ್ಪ ದೊಡ್ಡಮನೆಯವರು ಮಾತನಾಡಿದರು , ಹಬ್ಬಗಳು ಹಿರಿಯರ ನೇತೃತ್ವದಲ್ಲಿ ಜರುಗಬೇಕು. ಅಂದಾಗ ಮಾತ್ರ ಅರ್ಥಪೂರ್ಣಗಿ , ಹಾಗೂ ಸಂಪೂರ್ಣ ಯಶಸ್ವಿಯಾಗಲು ಸಾಧ್ಯ ಎಂದರು. ಹಬ್ಬದ ಅರ್ಥಪೂರ್ಣ ಅಚರಣೆಯಿಂದಾಗಿ ಸಮಾಜದಲ್ಲಿ ಸಂಭ್ರಮ ಸಡಗರ ಸೌಹಾರ್ಧತೆ , ಸಹಬಾಳ್ವೆ ಭ್ರಾತೃತ್ವ ನೆಮ್ಮದಿ ಇಮ್ಮಡಿಯಾಗಬೇಕೆ ಹೊರತು ಗಲಭೆ ದೊಂಬಿಗಳಲ್ಲ. ಹಬ್ಬದ ಸಂದರ್ಭದಲ್ಲಿ ಕೆಲವೇ ಕೆಲವು ಕಿಡಿ ಗೇಡಿಗಳಿಂದಾಗಿ ಗಲಭೆ ದೊಂಬಿಗಳು , ಗುಂಪು ಘರ್ಷಣೆಗಳು ಸೃಷ್ಠಿಯಾಗಿ ಸಂಭ್ರಮ ಕಾಣೆಯಾಗಿ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವ ವಿರುತ್ತದೆ. ಸಮಾಜದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು , ಇಲಾಖೆ ಇಂತಹ ಸಂದರ್ಭದಲ್ಲಿ ಕಾನೂನು ರೀತ್ಯ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ. ಕಾರಣ ಎಲ್ಲಾ ಜನ ಪ್ರತಿನಿಧಿಗಳು ಪ್ರಭಾವಿಗಳು , ಎಲ್ಲಾ ಸಮುದಾಯಗಳ ಮುಖಂಡರು ಮನೆಯ ಯಜಮಾನರು. ಮುಂಜಾಗ್ರತ ಕ್ರಮವಾಗಿ ತಮ್ಮ ತಮ್ಮ ಯುವಕರನ್ನು ಹತೋಟಿಯಲ್ಲಿಡಬೇಕು ಅದು ನಿಮ್ಮ ಆಧ್ಯ ಕರ್ತವ್ಯ , ಕಾನೂನು ತೊಡಕಿಗೆ ಕಾರಣವಾದಾಗ ಇಲಾಖೆಯ ಮೇಲೆ ಒತ್ತಡ ತರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಂಭ್ರಮದಿಂದ ಆಚರಿಸಬೇಕಾಗಿರುವ ಹಬ್ಬದ ಸಂದರ್ಭದಲ್ಲಿ , ವಿನಾಃಕಾರಣ ದೊಂಬಿಗಳನ್ನು ಸೃಷ್ಠಿಸುವವರನ್ನು ತಾವೇ ಪತ್ತೆ ಹಚ್ಚಿ ಬುದ್ದಿ ಹೇಳಿ ಹತೋಟಿಯಲ್ಲಿಡಬೇಕು. ಅದು ಪ್ರತಿಯೋರ್ವ ಮುಖಂಡರ ಜವಾಬ್ದಾರಿಯಾಗಿದೆ , ಕುಡಿದ ಅಮಲಿನಲ್ಲಿ ಗಲಭೆ ಸೃಷ್ಠಿಸಿದವರ ವಿರುದ್ಧ ನಿರ್ಧಾಕ್ಷಿಣ್ಯ ಶಿಸ್ಥು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು. ಇಲಾಖೆ ಉತ್ಸವದಂದು ಹಾಗೂ ಮೆರವಣಿಗೆ ಸಂದರ್ಭದಲ್ಲಿ , ಸಾಕಷ್ಟು ಸಿಬ್ಬಂದಿ ನಿಯೋಜಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಲಾಗಿರುತ್ತೆ ಎಂದು ತಿಳಿಸಿದರು. ಹಬ್ಬದ ಸಂದರ್ಭದಲ್ಲಿ ಸರ್ವರೂ ಸಂಭ್ರಮ ಸಡಗರವನ್ನು ಪರಸ್ಪರ ಹಂಚಬೇಕು , ಅಗ ಮಾತ್ರ ಹಬ್ಬ ಅರ್ಥಪೂರ್ಣವಾಗಿ ಯಶಸ್ವಿಯಾಗಿ ಜರುಗಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳ ಮುಖಂಡರು ಎಲ್ಲಾ ಪಕ್ಷಗಳ ಪ್ರಮುಖರು , ಹಾಗೂ ಎಲ್ಲಾ ಜನಪ್ರತಿನಿಧಿಗಳು ಪ್ರಭಾವಿಗಳು ಸಂಘ ಸಂಸ್ಥೆಗಳ ಮುಖಂಡರು. ಹಿರಿಯ ನಾಗರೀಕರು , ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಿದರು. ತಹಶಿಲ್ದಾರರಾದ ಸಿಪಿಐ ಪ್ರಹ್ಲಾದ್ ಆರ್ ಚನ್ನಗಿರಿ , ತಹಶಿಲ್ದಾರರಾದ ವಿ.ಕೆ.ನೇತ್ರಾವತಿ , ಪಿಎಸ್ಐ ಸಿ.ಪ್ರಕಾಶ್ . ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ವೇದಿಕೆಯಲ್ಲಿದ್ದರು. ಮುಸಲ್ಮಾನ್ ಸಮುದಾಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮುಖಂಡರು ಸೇರಿದಂತೆ , ಪಟ್ಟಣದ ಎಲ್ಲಾ ಸಮುದಾಯಾಗಳ ಮುಖಂಡರು. ವಿವಿದ ಪಕ್ಷಗಳ ಪ್ರಮುಖರು , ವಿವಿದ ಸಂಘ ಸಂಸ್ಥೆಗಳ ಮುಖಂಡರು. ನಾಗರೀಕರು , ಯುವಕರು , ವಿವಿದ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

Leave a Reply

Your email address will not be published. Required fields are marked *

error: Content is protected !!