*ನಮ್ಮ ಪೋಷಕರಾದ ಪತ್ರಕರ್ತರಿಗೆ ವಂದನೆ ಅಭಿನಂದನೆ ಶುಭಾಶಯಗಳು*-ನಮ್ಮ ತಾಲೂಕು ಕಂಡ ನಮ್ಮ ಹೆಮ್ಮೆಯ ತಾಲೂಕಿನ ಹಿರಿಯ ಪತ್ರಕರ್ತರು , ನಮ್ಮ ಏಳ್ಗೆಯಲ್ಲಿ ತಮ್ಮ ಏಳ್ಗೆಯನ್ನು ಕಂಡವರು, ನಮನ್ನು ಪತ್ರಿಕಾರಂಗದಲ್ಲಿ ಕೈಹಿಡಿದು ಮುನ್ನಡೆಸಿ ಸಾಮಾಜಿಕ ಪ್ರಜ್ಞೆ ಮೂಡಿಸಿದವರು. ಪೆನ್ನನ್ನು ಬಳಸುವ ವಿದ್ಯೆಯನ್ನು ಧಾರೆ ಎರೆದು , ಹಸುಳೆಯಾಗಿದ್ದ ನಮ್ಮನ್ನು ಪ್ರಭುದ್ಧರನ್ನಾಗಿ ಬೆಳೆಸಿದ ಹಿರಿಯರು ನಮ್ಮ ಹೆಮ್ಮೆಯ ಪತ್ರಕರ್ತರು ಅವರೇ ನಮ್ಮ ಪೋಷಕರು.. ನಮಗೆಲ್ಲಾ ಗಾಡ್ ಫಾದರ್ ಆಗಿದ್ದ ದಿವಂಗತರಾದ ಕಾವಲ್ಲಿ ಮಲ್ಲಣ್ಣ , ನಮ್ಮ ತಂದೆಯವರಾದ ವಿ.ಜಿ.ಮಹಾಬಲೇಶ್ವರಪ್ಪ , ಎ.ಎಮ್ .ವೀರಯ್ಯ , ಬೆಳ್ಳಗಟ್ಟೆ ಕೃಷ್ಣಪ್ಪ , ಕೆ.ಎಸ್.ಕೃಷ್ಣಮೂರ್ತಿ ಶೆಟ್ರು , ಕಾವಲ್ಲಿ ಉಮೇಶಣ್ಣ , ಕೊಟ್ಟೂರಿನ ಹಿರಿಯ ಪತ್ರಕರ್ತರು ಹಾಗೂ ಸಂಪಾದಕರಾದ ಅಗಡಿ ಮಂಜಣ್ಣನವರು ಮತ್ತಿತರಿರಿಗೆ. ಮತ್ತು ಹಲವು ದಶಕಗಳ ಕಾಲ ಪತ್ರಿಕಾ ರಂಗದಲ್ಲಿ ಅವಿರತವಾಗಿ , ಸೇವೆಸಲ್ಲಿಸಿ ಕಾರಣಾಂತರಗಳಿಂದಾಗಿ. ತಾತ್ಕಾಲಿಕವಾಗಿ ಪತ್ರಿಕಾರಂಗದಿಂದ ಕೊಂಚ ಬಿಡುವು ಪಡೆದಿರುವ , ಗೌರವಾನ್ವಿತ ಹಿರಿಯ ಪತ್ರಕರ್ತರಾದ ನಮ್ಮ ಗುರುಗಳಾದ ಸಿದ್ದರಾಮ ಹಿರೇಮಠರವರಿಗೆ..ಹಿರಿಯ ಮತ್ತು ನಮ್ಮ ಎಲ್ಲಾ ಹಿರಿಯ ಪತ್ರಕರ್ತರಿಗೆ , ಯುವ ಪತ್ರಕರ್ತರಿಗೆ , ಉತ್ಸಾಹಿ ಉದಯೋನ್ಮುಖ ಪತ್ರಕರ್ತರೆಲ್ಲರಿಗೂ. ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ , ಪತ್ರಿಕಾ ದಿನಾಚರಣೆ ಶುಭಾಶಯಗಳು , ಅನಂತ ಅನಂತ ವಂದನೆಗಳು
ಪತ್ರಿಕಾರಂಗದಲ್ಲಿ ಪಾದಾರ್ಪಣೆ ಮಾಡಿ ಕೆಲವೇ ವರ್ಷಗಳಲ್ಲಿ , ಕಾಲನ ಕರೆಗೆ ಓಗೊಟ್ಟು ಅನಿವಾರ್ಯವಾಗಿ ಇಹಲೋಕ ತ್ಯಜಿಸಿದ. ನಮ್ಮ ಹೆಮ್ಮೆಯ ಯುವ ಪತ್ರಕರ್ತರಾದ ಹೋರಾಟಗಾರರಾದ ಗುನ್ನಳ್ಳಿ ರಾಘವೇಂದ್ರ , ಹಾಗೂ ಅಮ್ಮನಕೇರಿ ಎ.ಎಮ್. ಬಸವರಾಜಯ್ಯರವರಿಗೆ. ಮತ್ತು ಕೊಟ್ಟೂರಿನ ಹುಲಿಗೇಶ , ಜಗದೀಶಣ್ಣ, ಹೇಮಣ್ಣ, ಹಾಗೂ ಮತ್ತಿತರ ಪತ್ರಕರ್ತರಿಗೆ ನಮ್ಮ ಅನಂತ ನಮನಗಳು.