ಭಟ್ಕಳ : ಭಟ್ಕಳದ ಪ್ರತಿಷ್ಠಿತ ಐ.ಸಿ.ಎಸ್.ಇ ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನವು ದಿನಾಂಕ ೨೦/೧೨/೨೦೨೪ ಶುಕ್ರವಾರ ಮತ್ತು ೨೩/೧೨/೨೦೨೪ ಸೋಮವಾರದಂದು ಯಶಸ್ವಿಯಾಗಿ ಜರುಗಿತು. ಶುಕ್ರವಾರ ನಡೆದ ಪೂರ್ವಪ್ರಾಥಮಿಕ ಶಾಲಾ ಹಂತದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ, ಡಾ.ಸುರಕ್ಷಿತ್ ಶೆಟ್ಟಿ ಮಾತನಾಡಿ, ಮಕ್ಕಳು ಜೀವನದಲ್ಲಿ ಯಶಸ್ಸು ಸಿಗಬೇಕಾದರೆ,ಅದಕ್ಕೆ ಪಾಲಕರು ಹಾಗೂ ಶಿಕ್ಷಕರು ಬಾಲ್ಯದಲ್ಲಿಯೇ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಅರಿವು ಮೂಡಿಸಿದರು. ಸೋಮವಾರ ನಡೆದ ಪ್ರಾಥಮಿಕ ಹಾಗೂ ಫ್ರೌಢಶಾಲಾ ಹಂತದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಶ್ರೀ ಜಗನ್ನಾಥ ನಾಡಿಗೇರ ಇವರು ಸಭೆಯನ್ನು ಉದ್ದೇಶಿಸಿ,ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರು, ಶಿಕ್ಷಕರು,ಬಂಧುಮಿತ್ರರು,ನೆರೆಹೊರೆಯವರು ಹಾಗೂ ಸುತ್ತಮುತ್ತಲಿನ ವಾತಾವರಣವು ಬಹು ಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಹೇಳಿದರು.ಭಟ್ಕಳ ಎಜ್ಯುಕೇಶನ ಟ್ರಸ್ಟನ ಚ್ಯೇರಮನ್ ಡಾ.ಸುರೇಶ ನಾಯಕ ಇವರು ಶಾಲೆಯ ಶಿಕ್ಷಕರ ಮತ್ತು ಪೋಷಕರ ಪರಿಶ್ರಮವನ್ನು ಶ್ಲಾಘಿಸಿದರು. ಪಾಲಕರು ಶಾಲೆಯ ಮೇಲೆ ಇಟ್ಟಿರುವ ಅಚಲ ವಿಶ್ವಾಸವನ್ನು ಕೊಂಡಾಡಿದರು.ಪ್ರಾAಶುಪಾಲರಾದ ಶ್ರೀ ರಾಘವೇಂದ್ರ ಕಾಮತ ಇವರು ಶಾಲೆಯ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅದ್ದೂರಿಯಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ನೆರೆದಿದ್ದ ಪ್ರೇಕ್ಷಕರ ಕಣ್ಮನ ಸೂರೆಗೋಳಿಸಿತು ಹಾಗೂ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ವಿಜೃಂಭಣೆಯಿAದ ನಡೆದ ವಿದ್ಯೋತ್ಸವ ೨೦೨೪
