
ಮುರುಡೇಶ್ವರ: ಆರ್ ಎನ್ ಎಸ್ ವಿದ್ಯಾನಿಕೇತನನಲ್ಲಿ ಜೂನ್ ೫ರಂದು ವಿಶ್ವ ಪರಿಸರ ದಿನವನ್ನು
ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ಸ್ವ ಹಸ್ತದಿಂದ ಬೀಜಗೊಬ್ಬರ (ಸೀಡ್ ಬಾಲ್)
ತಯಾರಿಸಿ, ಭೂಮಿಗೆ ಎರಚಿದರು, ಅದರೊಂದಿಗೆ ಗಿಡಗಳನ್ನು ನೆಡಲಾಯಿತು.
ವಿದ್ಯಾರ್ಥಿಗಳು ಕಿರು ನಾಟಕದ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆಯ ಮಹತ್ವವನ್ನು ಹಾಗೂ ಪರಿಸರ
ಸಂರಕ್ಷಣೆಯ ಅಗತ್ಯತೆಯನ್ನು ಮನದಟ್ಟು ಮಾಡಿದರು.
ಶಾಲೆಯ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ, ಸ್ವಚ್ಛತೆ ಹಾಗೂ ಪ್ಲಾಸ್ಟಿಕ್
ನಿರ್ಮೂಲನೆಗಾಗಿ ಶಾಲೆಯಿಂದ ಮುರುಡೇಶ್ವರದ ಪೇಟೆಯವರೆಗೆ ಜಾಥವು ನಡೆಯಿತು. ವಿದ್ಯಾರ್ಥಿಗಳೇ
ತಯಾರಿಸಿದ ಪೇಪರ್ ಬ್ಯಾಗ್ ಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು.ಶಾಲೆಯಲ್ಲಿ ಪರಿಸರ ದಿನಾಚರಣೆಯ
ಅಂಗವಾಗಿ ಸೆಮಿನಾರ್ ಸ್ಪರ್ಧೆಯನ್ನು ನಡೆಸಲಾಯಿತು.