
ನಾವು ಎಲ್ಲವನ್ನೂ ಸಮಾಜದಿಂದಲೇ ಪಡೆದುಕೊಂಡಿದ್ದು, ಸಮಾಜಕ್ಕೆ ನಾವು ನೀಡುವ ಸಹಾಯವು ನಮ್ಮ ಹುಟ್ಟಿನ ಸಾರ್ಥಕತೆಯನ್ನು ಪ್ರಚುರಪಡಿಸುತ್ತದೆ. ಲಯನ್ಸ ಕ್ಲಬ್ ಮುರ್ಡೇಶ್ವರವು ಈ ವಿಷಯದಲ್ಲಿ ಮುಂದಿದ್ದು ಹಲವಾರು ಸಮಾಜಮುಖಿ ಕಾರ್ಯಗಳಿಂದ ಹೆಸರನ್ನು ಗಳಿಸಿದೆ ಎಂದು ಲಯನ್ ೩೧೮ಬಿ ಜಿಲ್ಲೆಯ ಜೋನ್ ಚೇರ್‌ಪರ್ಸನ್ ಆಗಿರುವ ಶ್ಯಾಮಲಾ ಹೆಗಡೆಯವರು ಹೇಳಿದರು. ಅವರು ಮುರ್ಡೇಶ್ವರ ಲಯನ್ಸ್ ಕ್ಲಬ್‌ಗೆ ಭೇಟಿ ನೀಡಿ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು. ಇದೇ ವೇಳೆ ಅವರು ಮುರ್ಡೇಶ್ವರದ ತರ‍್ನಮಕ್ಕಿಯಲ್ಲಿ ನಡೆದ ಮುರ್ಡೇಶ್ವರ, ಹೊನ್ನಾವರ, ಕುಮಟಾ, ಸಿದ್ದಾಪುರ ಲಯನ್ಸ್ ಕ್ಲಬ್‌ಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಲಯನ್ ಹಿಂದಿನ ಜಿಲ್ಲಾ ಗವರ್ನರ್‌ಗಳಾದ ರವಿ ಹೆಗಡೆ ಹೂವಿನಮನೆ, ಡಾ.ಗಿರೀಶ ಕುಚಿನಾಡ ಉಪಸ್ಥಿತರಿದ್ದು ಕ್ಲಬ್‌ಗಳಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಿದರು. ಇದೇ ವೇಳೆ ಮುರ್ಡೇಶ್ವರ ಲಯನ್ಸ್ ಕ್ಲಬ್ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕುಳಿತುಕೊಳ್ಳಲು ಕಟ್ಟಿಗೆಯ ಮಣೆಗಳನ್ನು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾವಿನಕಟ್ಟೆಗೆ ೨೦ ಖುರ್ಚಿಗಳನ್ನು ನೀಡಲಾಯಿತು. ವೇದಿಕೆಯಲ್ಲಿ ಮುರ್ಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿಶ್ವನಾಥ ಮಡಿವಾಳ. ಕಾರ್ಯದರ್ಶಿಗಳಾದ ನಾಗೇಶ ಮಡಿವಾಳ, ಕೋಶಾಧ್ಯಕ್ಷರಾದ ಡಾ.ವಾಧಿರಾಜ ಭಟ್‌ರವರು ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ನಾಗೇಶ ಮಡಿವಾಳರವರು ಸ್ವಾಗತಿಸಿ ವರದಿ ವಾಚಿಸಿದರು, ಲಯನ್ ಜಿಲ್ಲಾ ಚೇರ್‌ಪರ್ಸನ್ ಡಾ.ಸುನೀಲ್ ಜತ್ತನ್‌ರವರು ವಂದಿಸಿದರು. ಲಯನ್ ಸದಸ್ಯರಾದ ಎಮ್.ವಿ ಹೆಗಡೆ ಹಾಗೂ ಶಿವಕುಮಾರ ಹಿಚ್ಕಡರವರು ಕಾರ್ಯಕ್ರಮ ನಿರ್ವಹಿಸಿದರು. ಮುರ್ಡೇಶ್ವರ, ಹೊನ್ನಾವರ, ಕುಮಟಾ ಹಾಗೂ ಸಿದ್ಧಾಪುರ ಲಯನ್ಸ್ ಕ್ಲಬ್‌ಗಳ ಪದಾಧಿಕಾರಿಗಳು ಹಾಜರಿದ್ದರು.