ಭಟ್ಕಳ : ಇಲ್ಲಿನ ಪ್ರತಿಷ್ಠಿತ ಐ.ಸಿ.ಎಸ್.ಇ ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಎಜ್ಯುಕೇಶನ ನ್ಯೂಸ್ ನೆಟ್ವರ್ಕ ಸಂಸ್ಥೆಯು ನೀಡುವ “ಡೈನಮಿಕ್ ಸ್ಕೂಲ್೨೦೨೪””” ಎನ್ನುವ ರಾಷ್ಟç ಪ್ರಶಸ್ತಿಯನ್ನು ಪಡೆದುಕೊಳ್ಳುವ ಮೂಲಕ,ಸಾಧನೆಯ ಕಿರಿಟಕ್ಕೆ ಹೊಸ ಗರಿಯೊಂದು ಸೇರಿದೆ.೧೦ ನೇ ಡಿಸೆಂಬರ ೨೦೨೪ ರಂದು ಎಜುಕೇಶನ್ ಟುಡೇ ಆಯೋಜಿಸಿದ್ದ ಕೆ-೧೨ ಲೀಡರಶಿಪ್ ಮತ್ತು ಇಂಡಿಯಾ ಸ್ಕೂಲ್ ಮೆರಿಟ್ ಅವಾರ್ಡಗಳ ಕುರಿತಾದ ೧೨ ನೇ ರಾಷ್ಟಿçÃಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಒಳಗೊಂಡ ಶಿಕ್ಷಣ ಸಂಸ್ಥೆಯು ತಂತ್ರಜ್ಞಾನ ಆಧಾರಿತ ಪಠ್ಯ-ಪಠ್ಯೇತರ ಚಟುವಟಿಕೆಗಳನ್ನು,ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಸತತ ೧೦ ವರ್ಷಗಳಿಂದ ೧೦೦ ಪ್ರತಿಶತ ಫಲಿತಾಂಶದೊAದಿಗೆ ಈ ಸಾಲಿನಲ್ಲಿ ಎರಡನೇ ರಾಷ್ಟಿçÃಯ ಪ್ರಶಸ್ತಿಯನ್ನು ಪಡೆಯುತ್ತಿರುವುದು ಶಾಲೆಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಈ ವರ್ಷದ ಜೂನ್ ತಿಂಗಳಿನಲ್ಲಿ “ಮೋಸ್ಟ ಇನ್ನೋವಟಿವ್ ಸ್ಕೂಲ್” ಎನ್ನುವ ರಾಷ್ಟç ಪ್ರಶಸ್ತಿಯನ್ನು ಪಡೆದಿದ್ದನ್ನು ಇಲ್ಲಿ ನಾವು ಸ್ಮರಿಸಬಹುದು. ಈ ಸಂಧರ್ಭದಲ್ಲಿ ಮಾತನಾಡಿದ ಭಟ್ಕಳ ಎಜ್ಯಕೇಶನ್ ಟ್ರಸ್ಟ ನ ಚೇರಮನ್ ಡಾಕ್ಟರ್ ಸುರೇಶ ನಾಯಕ ಇವರು ಶಾಲೆಯ “ಶಿಕ್ಷಕರ ಪರಿಶ್ರಮ ಹಾಗೂ ಸದಾ ಬೆನ್ನೆಲುವಾಗಿ ನಿಲ್ಲುವ ಪಾಲಕರ ಸಹಕಾರವನ್ನು ಸ್ಮರಿಸುತ್ತ ಪ್ರಶಸ್ತಿಯ ಶ್ರೇಯವು ಪ್ರತಿಯೊಬ್ಬರಿಗೂ ಸಲ್ಲಬೇಕೆಂದು” ತಿಳಿಸಿದರು.