ತಾಲೂಕಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆರ್.ಎನ್.ಎಸ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ದಿನೇಶ್ ಗಾಂವಕರ್ ಕ್ರೀಡಾ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿದರು. ಮಾವಳ್ಳಿ-2 ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ಪಡಿಯಾರ್, ತಾಲೂಕು ಕ್ರೀಡಾ ಸಂಯೋಜಕರಾದ ಕೃಷ್ಣಪ್ಪ ನಾಯ್ಕ, ದೈಹಿಕ ನಿರ್ದೇಶಕರಾದ ಮಹೇಶ್ ವೇದಿಕೆ ಮೇಲೆ ಉಪಸ್ಥಿತಿ ಇದ್ದರು, ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಅಶ್ವಿನಿ ಶೇಟ್ ಎಲ್ಲರನ್ನು ಸ್ವಾಗತಿಸಿದರು.
ತಾಲೂಕಿನ 14 ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು ಆರ್.ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜು ದ್ವಿತೀಯ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನ ತನ್ನ ಮುಡುಗೇರಿಸಿಕೊಂಡಿತು.
ಬಾಲಕಿಯರ ವಿಭಾಗದಲ್ಲಿ ಕು.ಯೋಗಿತಾ ನಾಯ್ಕ 100ಮೀ, 200 ಮೀ ರನ್ನಿಂಗ್ ಹಾಗೂ 110ಮೀ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿಯನ್ನು ಪಡೆದುಕೊಂಡಳು. ಕು.ಚೈತನ್ಯಾ ಲಾಂಗ್ ಜಂಪ್ ಪ್ರಥಮ, 100ಮೀ ರನ್ನಿಂಗ್ ದ್ವಿತೀಯ, ಕು.ಅನಿಷಾ ಕರಾಟೆಯಲ್ಲಿ ಪ್ರಥಮ, ಕು.ಶಿಭಾನಿ ಸ್ವಿಮ್ಮಿಂಗ್ ನಲ್ಲಿ ಪ್ರಥಮ, ಕು.ಮನೀಷಾ ಮತ್ತು ಕು.ಬಿಂದು ಯೋಗದಲ್ಲಿ ಪ್ರಥಮ, ಕು.ಐಶ್ವರ್ಯ ಮತ್ತು ಕು.ಸಮೃದ್ಧಿ ಚೆಸ್ ನಲ್ಲಿ ಪ್ರಥಮ, ಕು.ಆರತಿ 3000ಮೀ ವಾಕಿಂಗ್ ನಲ್ಲಿ ಪ್ರಥಮ, ಕು.ಹರ್ಷಿತಾ ಹ್ಯಾಮರ್ ಥ್ರೋ ನಲ್ಲಿ ಪ್ರಥಮ, ಕು.ವಿದ್ಯಾ ಕ್ರಾಸ್-ಕಂಟ್ರಿ ಪ್ರಥಮ, ಕು.ಚೈತ್ರ ಪೋಲ್ ವಾಲ್ಟ್ ಪ್ರಥಮ, ಕು.ಅನನ್ಯ 1500ಮೀ ಹಾಗೂ 3000ಮೀ ತೃತೀಯ, ಬಾಲಕಿಯರ ರಿಲೇ, ಕಬಡ್ಡಿ, ಖೋ ಖೋ ದ್ವಿತೀಯ ಸ್ಥಾನ ಪಡೆದುಕೊಂಡರೆ ಬಾಲಕರ ವಿಭಾಗದಲ್ಲಿ ಕು.ಸಂಕೇತ್ ತ್ರಿಬಲ್ ಜಂಪ್ ಪ್ರಥಮ, 200ಮೀ ರನ್ನಿಂಗ್ ಪ್ರಥಮ ಹಾಗೂ 400ಮೀ ರನ್ನಿಂಗ್ ತೃತೀಯ, ಕು.ರಜತ್ 110ಮೀ ಹರ್ಡಲ್ಸ್ ಪ್ರಥಮ, 400ಮೀ ಹರ್ಡಲ್ಸ್ ದ್ವಿತೀಯ, ಕು. ಕೌಶಿಕ್ ಕರಾಟೆ ಪ್ರಥಮ, ಕು.ಸೃಜನ್ ಸ್ವಿಮ್ಮಿಂಗ್ ಪ್ರಥಮ, ಕು.ಗಣೇಶ್ ಹಾಗೂ ಕು.ಯೋಗರಾಜ್ ಯೋಗದಲ್ಲಿ ಪ್ರಥಮ, ಕು.ಸಿದ್ವಿನ್ 100ಮೀ ರನ್ನಿಂಗ್ ನಲ್ಲಿ ತೃತೀಯ, ಬಾಲಕರ ರಿಲೇ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಸಾಧನೆ ಮಾಡಿದ ಸ್ಪರ್ಧಾರ್ಥಿಗಳಿಗೆ ಆರ್.ಎನ್.ಎಸ್ ಆಡಳಿತ ಮಂಡಳಿ, ಪ್ರಾಚಾರ್ಯರು, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಶುಭಾಶಯ ತಿಳಿಸಿದರು.