“ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅಪಾರವಾದುದು”

Share

“ಶಿಕ್ಷಕರು ಸುಶಿಕ್ಷಿತ ಸಮಾಜದ ನಿರ್ಮಾಪಕರು.
ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಮಾಜದಲ್ಲಿ ಅತಿ
ಹೆಚ್ಚು ಗೌರವ ಸಿಗುತ್ತಿರುವ ವೃತ್ತಿ ಎಂದರೆ ಶಿಕ್ಷಕ
ವೃತ್ತಿ. ಇಂಥಹ ಶಿಕ್ಷಕರನ್ನು ಗೌರವಿಸಬೇಕಾದುದು
ನಮ್ಮೆಲ್ಲರ ಕರ್ತವ್ಯ” ಎಂದು ನಿವೃತ್ತ ಉಪ ಅರಣ್ಯ
ಸಂರಕ್ಷಣಾಧಿಕಾರಿಗಳಾದ ರವಿ ಎಚ್ ನಾಯಕರವರು
ಹೇಳಿದರು. ಲಯನ್ ೩೧೭ಬಿ ಜಿಲ್ಲೆಯ ವಿಭಾಗ೭ರ ರೀಜನ್
ಚೇರ್‌ಪರ್ಸನ್ ಆಗಿ ಅವರು ಶಿರಾಲಿಯ ಶ್ರೀದೇವಿ ಹೆರಿಟೇಜ್
ಸಭಾಂಗಣದಲ್ಲಿ ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ಅಧಿಕೃತ
ಭೇಟಿಯ ಸಂದರ್ಭದಲ್ಲಿ ಭಟ್ಕಳ ತಾಲೂಕಿನ ನಿವೃತ್ತ
ಶಿಕ್ಷಕರನ್ನು ಸನ್ಮಾನಿಸಿ ಮಾತಾನಾಡಿದರು.
ಈ ವೇಳೆ ಅವರು ಮುರ್ಡೇಶ್ವರ ಲಯನ್ಸ್ ಕ್ಲಬ್‌ನ
ಸಾಮಾಜಿಕ ಚಟುವಟಿಕೆಗಳನ್ನು ವೀಕ್ಷಿಸಿ ಪ್ರಸಂಶೆ
ವ್ಯಕ್ತಪಡಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ
ಮುರ್ಡೇಶ್ವರ ಲಯನ್ಸ್ ಕ್ಲಬ್ ತನ್ನ ವ್ಯಾಪ್ತಿಯ ನಿವೃತ್ತ
ಶಿಕ್ಷಕರನ್ನು ಸನ್ಮಾನಿಸಿ ‘ಗುರುಗೌರವಾರ್ಪಣೆ’ ನೀಡುತ್ತಾ
ಬಂದಿರುವಕ್ಕೆ ಹರ್ಷ ವ್ಯಕ್ತಪಡಿಸಿದರು. ಈ
ಕಾರ್ಯಕ್ರಮದಲ್ಲಿ ಭಟ್ಕಳ ತಾಲೂಕಿನ ನಿವೃತ್ತ ಕ್ಷೇತ್ರ
ಶಿಕ್ಷಣಾಧಿಕಾರಿಗಳಾದ ವಿ.ಡಿ ಮೊಗೇರರವನ್ನು, ರಾಜ್ಯ ಮಟ್ಟದ
ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಘವೇಂದ್ರ
ಮಡಿವಾಳರವರನ್ನು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ
ಪ್ರಶಸ್ತಿ ಪಡೆದ ರಾಮಚಂದ್ರ ನಾಯಕರವರನ್ನು
ಹಾಗೂ ಭಟ್ಕಳ ತಾಲೂಕಿನಲ್ಲಿ ನಿವೃತ್ತರಾದ ಶಿಕ್ಷಕರಾದ
ಶ್ರೀನಿವಾಸ ಉಪಾಧ್ಯಾಯ, ಪರಮೇಶ್ವರ ಭಟ್ ಹಾಗೂ ವನಿತಾ
ಭಟ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುರ್ಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿಶ್ವನಾಥ
ಮಡಿವಾಳರವರು ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ
ನಾಗೇಶ ಮಡಿವಾಳರವರು ವರದಿ ವಾಚಿಸಿದರು.
ಕೋಶಾಧ್ಯಕ್ಷರಾದ ಡಾ.ವಾಧಿರಾಜ ಭಟ್‌ರವರು
ವಂದಿಸಿದರು. ಕೃಷ್ಣ ಹೆಗಡೆಯವರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಲಯನ್ ಡಿಸ್ಟಿçಕ್ಟ್ ಚೇರ್‌ಪರ್ಸನ್ ಡಾ.
ಸುನೀಲ್ ಜತ್ತನ್, ಸದಸ್ಯರಾದ ಎಮ್.ವಿ ಹೆಗಡೆ, ಬಾಬು
ಮೊಗೇರ್, ಗೌರೀಶ ಆರ್ ನಾಯ್ಕ, ಸುಬ್ರಾಯ ನಾಯ್ಕ, ಫಿಲಿಪ್
ಅಲ್ಮೇಡಾ, ಗಜಾನನ ಭಟ್, ಶಿವಾನಂದ ದೈಮನೆ, ವಿಶ್ವನಾಥ
ಕಾಮತ, ಕಿರಣ ಕಾಯ್ಕಿಣಿ, ಕಿರಣ ಮಾನಕಾಮೆ. ಗೌರೀಶ ಟಿ
ನಾಯ್ಕ, ಬಸ್ತಾö್ಯಂವ್ ಡಿಕೋಸ್ತಾ, ಡಾ.ಹರಿಪ್ರಸಾದ ಕಿಣಿ
ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!