ಸಮಾಜ ಸೇವೆಯಿಂದ ದೇಶದ ಉನ್ನತಿ ಸಾಧ್ಯ – ಡಾ. ಅನಂತಮೂರ್ತಿ ಶಾಸ್ತ್ರೀ

Share

ಭಟ್ಕಳ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅಗಷ್ಟ ೧೨, ಸೋಮವಾರದಂದು ಭಟ್ಕಳದ ಅಮೀನಾ ಪ್ಯಾಲೇಸ್ ಸಭಾಂಗಣದಲ್ಲಿ ಜರುಗಿತು.
ಪದಗ್ರಹಣ ಅಧಿಕಾರಿ ರೋಟರಿ ಜಿಲ್ಲೆ ೩೧೭೦ ದ ಮಾಜಿ ಜಿಲ್ಲಾ ಸಹಾಯಕ ಗವರ್ನರ ರೋ. ಡಾ. ಅನಂತಮೂರ್ತಿ ಶಾಸ್ತ್ರೀಯವರು ನೂತನ ಅಧ್ಯಕ್ಷ ರೋ. ಇಷ್ತಿಯಾಕ್ ಹಸ್ಸನ್ ರವರಿಗೆ ಅಧಿಕಾರ ಹಸ್ತಾಂತರಿಸಿದರು.

ಜಿಲ್ಲಾ ಸಹಾಯಕ ಗವರ್ನರ ರೋ. ಮಾನ್ವೆಲ್ ಸ್ಟಿಫೆನ್ ರೋಡ್ರಿಗೀಸ್ ರವರು ಜಿಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಭಟ್ಕಳ ತಾಲೂಕಿನಲ್ಲಿ ೨೦೨೩-೨೪ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಕುಮಾರಿ. ಮೈಮೂನಾ ಅಜೈಬ್ ರನ್ನು ಪಾಲಕರ ಸಹಿತ ಗೌರವಿಸಲಾಯಿತು. ತಾಲೂಕಿನಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಶಿಕ್ಷಣ ಪಡೆದ ಅಂಜುಮಾನ ಇಂಗ್ಲೀಷ ಮೀಡಿಯಂ ಹೈಸ್ಲೂಲ್- ನವಾಯತ ಕಾಲನಿಯ ಶಾಲೆಗೆ ಗೌರವ ಪ್ರಶಸ್ತಿಯನ್ನು ನೀಡಲಾಯಿತು.
೨೦೨೪-೨೫ ನೇ ಸಾಲಿಗೆ ಆಯ್ಕೆಯಾದ ರೋ. ಇಷ್ತಿಯಾಕ್ ಹಸ್ಸನ್-ಅಧ್ಯಕ್ಷ, ರೋ.ಡಾ. ಮೊಹಮ್ಮದ ಝಹೀರ ಕೋಲಾ-ಕಾರ್ಯದರ್ಶಿ, ರೋ. ಶ್ರೀನಿವಾಸ್ ಪಡಿಯಾರ್-ಖಜಾಂಚಿ ಸಹಿತ ನೂತನ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.

ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ೫ ದಶಕಗಳಿಂದ ಸೇವೆ ಸಲ್ಲಿಸಿರುವ ಡಾ. ಸುರೇಶ ವಿ ನಾಯಕ, ೩೪ ವರ್ಷಗಳಕಾಲ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಭಟ್ಕಳದ ಹಲವಾರು ಯುವಕರನ್ನು ಕ್ರೀಡಾಪಟುವಾಗಿಸಿದ ಮಹಮ್ಮದ ನಿಜಾಮ ಮಹಮ್ಮದ ಗೌಸ ಮುಮ್ಮಿಗಟ್ಟಿ ಯವರನ್ನು ಸನ್ಮಾನಿಸಲಾಯಿತು.

ನಿರ್ಗಮನ ಅಧ್ಯಕ್ಷರಾದ ರೋ.ಡಾ.ಎಂ.ಎ.ಬಾವಿಕಟ್ಟಿ ಸ್ವಾಗತಿಸಿ, ನಿರ್ಗಮನ ಕಾರ್ಯದರ್ಶಿ ರೋ. ಶ್ರೀನಾಥ ಎಸ್ ಪೈ ವರದಿ ವಾಚಿಸಿದರು. ಹಿರಿಯ ರೋಟರಿಯನ್ ರಾಜೇಶ ನಾಯಕ ನಿರೂಪಿಸಿದರು, ಕಾರ್ಯದರ್ಶಿ ರೋ.ಡಾ. ಮೊಹಮ್ಮದ ಝಹೀರ ಕೋಲಾ ವಂದಿಸಿದರು. ರೋಟರಿ ಪ್ರಮುಖರಾದ ಡಾ. ಗೌರೀಶ ಪಡುಕೋಣೆ, ಶಾಖೀರ, ನಜೀರ ಕಾಶಿಂಜಿ, ರವಿ ನಂಬಿಯಾರ, ಪ್ರಶಾಂತ ಕಾಮತ ರೋಟರಾಕ್ಟ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಸಮಾಜ ಸೇವಕರು, ಪಾಲಕರು, ಭಟ್ಕಳದ ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!