ಲಯನ್ಸ್ ಕ್ಲಬ್ ಅಂತರಾಷ್ಟಿçÃಯ ಸಂಸ್ಥೆಯಾಗಿದ್ದು, ಮುರ್ಡೇಶ್ವರ ಲಯನ್ಸ್ ಕ್ಲಬ್ ತನ್ನ ಸಮಾಜಮುಖಿ ಕಾರ್ಯಗಳಿಂದ ಇತರರಿಗೆ ಮಾದರಿಯಾಗಿದೆ ಎಂದು ೩೧೭ಸಿ ಲಯನ್ ಜಿಲ್ಲೆಯ ಎಲ್.ಸಿ.ಆಯ್.ಎಫ್ ಕೋಆರ್ಡಿನೇಟರ್ ಪ್ರೊಫೆಸರ್ ಹರಿಪ್ರಸಾದ ರೈರವರು ಹೇಳಿದರು.
ಅವರು ಮುರ್ಡೇಶ್ವರದ ಇಂದ್ರಪ್ರಸ್ಥ ಹೊಟೇಲ್‌ಲ್ಲಿ ನಡೆದ ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ೨೦೨೪-೨೫ನೇ ಲಯನ್ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಇದೇ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ೩೧೭ಸಿ ಲಯನ್ ಜಿಲ್ಲೆಯ ೨ನೇ ಉಪಗವರ್ನರ್‌ರವರಾದ ರಾಜೀವ ಕೋಟಿಯಾನ್‌ರವರು ಕ್ಲಬ್‌ಗೆ ಹೊಸ ಸದಸ್ಯರನ್ನು ಪರಿಚಯಿಸಿ ಮಾನವ ಸಂಬAಧ ಹಾಗೂ ಸೇವೆಯ ಮಹತ್ವದ ಕುರಿತು ವಿವಿಧ ನಿದರ್ಶನಗಳ ಮೂಲಕ ಮಹತ್ವದ ಮಾಹಿತಿ ಹಂಚಿಕೊAಡರು. ಇನ್ನೋರ್ವ ಅತಿಥಿಗಳು ಹಾಗೂ ಹೊನ್ನಾವರ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರಾದ ಶಂಭು ಬೈಲಾರರವರು ಲಯನ್ಸ್ನ ಕಾರ್ಯಚಟುವಟಿಕೆಗಳನ್ನು ಕೊಂಡಾಡಿದಲ್ಲದೇ ಇದರಿಂದ ಸಮಾಜಕ್ಕಾಗುವ ಪ್ರಯೋಜನಗಳನ್ನು ತಿಳಿಸಿದರು.
ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾದ ವಿಶ್ವನಾಥ ಮಡಿವಾಳ, ಕಾರ್ಯದರ್ಶಿಗಳಾದ ನಾಗೇಶ ಮಡಿವಾಳ, ಕೋಶಾಧ್ಯಕ್ಷರಾದ ಡಾ.ವಾದಿರಾಜ ಭಟ್‌ರವರಿಗೆ ಪ್ರಮಾಣವಚನ ಬೋಧಿಸಲಾಯಿತು.
ಮೊದಲ ಉಪಾಧ್ಯಕ್ಷರಾಗಿ ಕಿರಣ ಕಾಯ್ಕಿಣಿ, ಎರಡನೇ ಉಪಾಧ್ಯಕ್ಷರಾಗಿ ಡಾ. ಮನೋಜ ಆಚಾರ್ಯ, ಸದಸ್ಯತ್ವ ಅಭಿಯಾನದ ಅಧ್ಯಕ್ಷರಾಗಿ ಡಾ. ಸುನೀಲ್ ಜತ್ತನ್, ಕ್ಲಬ್ ಸಮನ್ವಯಾಧಿಕಾರಿಯಾಗಿ ನಾಗರಾಜ ಭಟ್, ಸೇವಾ ಚಟುವಟಿಕೆಗಳ ಅಧ್ಯಕ್ಷರಾಗಿ ಸುಬ್ರಾಯ ನಾಯ್ಕ, ವ್ಯಾವಹಾರಿಕ ಸಂವಹನದ ಅಧ್ಯಕ್ಷರಾಗಿ ಎಮ್.ವಿ ಹೆಗಡೆ, ಲಯನ್ ಟೇಮರ್ ಆಗಿ ಮಂಜುನಾಥ ನಾಯ್ಕ, ಟೇಲ್‌ಟ್ವಿಸ್ಟರ್ ಆಗಿ ಕೃಷ್ಣ ಹೆಗಡೆ, ನಿರ್ದೇಶಕರುಗಳಾಗಿ ಬಾಬು ಮೊಗೇರ್, ಗೌರೀಶ ಆರ್ ನಾಯ್ಕ, ಗೌರೀಶ ಟಿ ನಾಯ್ಕ, ಜಗದೀಶ ಜೈನ್, ಶಿವಾನಂದ ದೈಮನೆ, ಕಿರಣ ಮಾನಕಾಮೆ, ಡಾ.ಹರಿಪ್ರಸಾದ ಕಿಣಿ, ಪಿಲಿಫ್ ಅಲ್ಮೇಡಾ, ದಯಾನಂದ ಮೆಣಸಿನಮನೆ, ಹಾಗೂ ವಿಶ್ವನಾಥ ಕಾಮತರವರನ್ನು ನಿಯುಕ್ತಿಗೊಳಿಸಲಾಯಿತು.
ನಿಕಟಪೂರ್ವ ಅಧ್ಯಕ್ಷರಾದ ಗಜಾನನ ಭಟ್‌ರವರು ನೂತನ ಅಧ್ಯಕ್ಷರಾದ ವಿಶ್ವನಾಥ ಮಡಿವಾಳರವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷರು ಮಾತನಾಡಿ ಕ್ಲಬ್‌ನ ಎಲ್ಲಾ ಸದಸ್ಯರ ಸಹಯೋಗದೊಂದಿಗೆ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡಲು ಸಿದ್ಧರಿರುವುದಾಗಿ ತಿಳಿಸಿದರು.
ಇದೇ ವೇಳೆ ಎಸ್.ಎಸ್.ಎಲ್ ಪರೀಕ್ಷೆಯಲ್ಲಿ ಭಟ್ಕಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹರ್ಷನ್ ಗೊಂಡ ಹಾಗೂ ಪಿ.ಯು.ಸಿಯ ಕಲಾ ವಿಭಾಗದಲ್ಲಿ ಅಮೀನಾ, ವಿಜ್ಞಾನ ವಿಭಾಗದಲ್ಲಿ ಸುಮಿತ್ರಾ ದಿನೇಶ ನಾಯ್ಕ, ವಾಣಿಜ್ಯ ವಿಭಾಗದಲ್ಲಿ ಆಶಿತಾ ಅನಂತ ಮೊಗೇರ್‌ರವರನ್ನು ಭಟ್ಕಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ನಿಮಿತ್ತ ಗೌರವಿಸಿ ಸನ್ಮಾನಿಸಲಾಯಿತು. ಬಂಗಾರಮಕ್ಕಿ ಶಾಲೆಯ ಧ್ವಜಕಟ್ಟೆ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯವನ್ನು ನೀಡಲಾಯಿತು.
ಗಜಾನನ ಭಟ್ ಸ್ವಾಗತಿಸಿದರು. ಡಾ.ವಾದಿರಾಜ ಭಟ್ ವಂದಿಸಿದರು. ಲಯನ್ ಸದಸ್ಯರಾದ ಎಮ್.ವಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಮುರ್ಡೇಶ್ವರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ
