

ಭಟ್ಕಳ: ಜೂನ ೨೬ ಮತ್ತು ೨೭ರಂದು ಕರ್ನಾಟಕ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ತೃತೀಯ ವಲಯ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕುಮಟಾದ ಡಾ. ಎ.ವಿ.ಬಾಳಿಗಾ ಕಾಲೇಜು ಕಾರವಾರದ ಶಿವಾಜಿ ಕಾಲೇಜ-ಬಾಡ ಅನ್ನು ಮಣಿಸಿ ಪ್ರಶಸ್ತಿ ಮುಡಿಗೆರಿಸಿಕೊಂಡಿದೆ. ಕಾರವಾರದ ಶಿವಾಜಿ ಕಾಲೇಜು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರೆ, ಬಾಳಿಗಾ ಕಾಲೇಜಿನ ನಿಖಿಲ್ ಗೌಡ ಮತ್ತು ತರುಣ್, ಶಿವಾಜಿ ಕಾಲೇಜಿನ ಶುಭಂ ಕ್ರಮವಾಗಿ ಬೆಸ್ಟ್ ಅಟೇಕರ್ ಮತ್ತು ಬೆಸ್ಟ್ ಪಾಸರ್, ಬೆಸ್ಟ್ ಆಲ್ರೌಂಡರ್ ಆಗಿ ಹೊರಹೊಮ್ಮಿದರು.
ಜೂನ್ ೨೭ ರಂದು ನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ವಲಯ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗಾಗಿ ವಿಶ್ವವಿದ್ಯಾಲಯದ ಪ್ರಮುಖ ೧೨ ತಂಡಗಳು ಸೇಣಸಾಡಿದವು. ಅಂತಿಮವಾಗಿ ಕುಮಟಾದ ಡಾ.ಎ.ವಿ ಬಾಳಿಗಾ ಕಾಲೇಜು ಧಾರವಾಡದ ಜೆ.ಎಸ್.ಎಸ್ ಕಾಲೇಜನ್ನು ಮಣಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಜೆ.ಎಸ್.ಎಸ್ ಕಾಲೇಜು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಕಾರವಾರದ ಶಿವಾಜಿ ಕಾಲೇಜು ಹುಬ್ಬಳ್ಳಿಯ ಗ್ಲೋಬಲ್ ಕಾಲೇಜನ್ನು ಮಣಿಸಿ ತೃತೀಯ ಸ್ಥಾನ ಪಡೆದುಕೊಂಡಿತು. ಶಿವಾಜಿ ಕಾಲೇಜಿನ ಶುಭಂ, ಬಾಳಿಗಾ ಕಾಲೇಜಿನ ದಿನೇಶ್ ಗೌಡ, ಜೆ.ಎಸ್.ಎಸ್ ಕಾಲೇಜಿನ ಮನೋಜ ಕ್ರಮವಾಗಿ ಬೆಸ್ಟ್ ಅಟೇಕರ್, ಬೆಸ್ಟ್ ಆಲ್ರೌಂಡರ್ , ಬೆಸ್ಟ್ ಪಾಸರ್ ಆಗಿ ಹೊರಹೊಮ್ಮಿದರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ಕುಮಟಾ ಡಾ.ಎ.ವಿ ಬಾಳಿಗಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಜಿ.ಡಿ.ಭಟ್ ರವರು ಮಾತನಾಡಿ “ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಸಿದ ಶ್ರೀ ಸುಧೀಂದ್ರ ಕಾಲೇಜಿನ ಕಾರ್ಯಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಕ್ರೀಡೆಗೂ ಮಹತ್ವ” ನೀಡಬೇಕೆಂದು ನುಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷರಾದ ಆರ್.ಕೆ.ಮೆಸ್ತಾ, ಪ್ರಾಂಶುಪಾಲರಾದ ಶ್ರೀನಾಥ್ ಪೈ, ಉಪಪ್ರಾಂಶುಪಾಲರಾದ ವಿಶ್ವನಾಥ್ ಭಟ್, ಫಣಿಯಪ್ಪಯ್ಯ ಹೆಬ್ಬಾರ್, ವಿಖ್ಯಾತ ಪ್ರಭು, ಸಂಘಟನಾ ಕಾರ್ಯದರ್ಶಿ-ದೈಹಿಕ ಶಿಕ್ಷಣ ನಿರ್ದೇಶಕರಾದ ವಿನಾಯಕ ನಾಯ್ಕ್, ಭಟ್ಕಳದ ಪ್ರಮುಖ ವಾಲಿಬಾಲ್ ಕ್ರೀಡಾಪಟುಗಳು ಹಾಗೂ ಪಂದ್ಯಾವಳಿಯ ನಿರ್ಣಾಯಕರಾದ ಗೋವಿಂದ ಖಾರ್ವಿ, ಶರತ್ ಗುನಗಿ, ನಾಗರಾಜ ಆಚಾರಿ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ದೈಹಿಕ ಶಿಕ್ಷಕರಾದ ಕೃಷ್ಣಪ್ಪ ನಾಯ್ಕ್, ಸೀಮಾ ನಾಯ್ಕ, ಡೇವಿಡ್, ಪೂಜಾ ರವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಆನಂದ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.